ಕಾಮಕ್ಕೆ ಬಲಿಯಾದ ಹೆಣ್ಣೊಬ್ಬಳ ದುರಂತ ಕಥೆ

ಕ್ಷಣಿಕ ಸುಖ, ಕಾಮದ ವ್ಯಾಮೋಹಕ್ಕೆ ಒಳಗಾದ ಹೆಣ್ಣೊಬ್ಬಳು ಅಗ್ನಿಸಾಕ್ಷಿಯಾಗಿ ತಾಳಿ ಕಟ್ಟಿದ ಗಂಡನಿಗೆ ಕೈಕೊಟ್ಟು ತನ್ನ ವಯಸ್ಸಿಗಿಂತ ತೀರಾ ಚಿಕ್ಕವನಾದ ವಿವಾಹಿತ ಪರಪುರುಷನೊಂದಿಗೆ 10 ತಿಂಗಳು ಸಂಸಾರ ನಡೆಸಿದ್ದಳು. ಹಣ್ಣು ತಿಂದ ಮೇಲೆ ಸಿಪ್ಪೆಯಂತಾದ ಮಾಲೀಕನ ಹೆಂಡತಿಯ ಬದಲು ನನ್ ಹೆಂಡ್ತಿಯೇ ಸರಿ ಎಂದು ತಿಳಿದ ಪರಪುರುಷನೂ ಈಕೆಯನ್ನು ಕೈಬಿಟ್ಟು ತನ್ನ ಪತ್ನಿಯೊಂದಿಗೆ ಪರಾರಿಯಾಗಿದ್ದಾನೆ.
ಪರಪುರುಷನಿಂದ ತಿರಸ್ಕೃತಗೊಂಡು ಬಾಳುಕೊಟ್ಟ ಮೊದಲ ಪತಿಯಿಂದಲೂ ತಿರಸ್ಕೃತಗೊಂಡು ಬದುಕಿಗೆ ಆಶ್ರಯವಿಲ್ಲದ್ದನ್ನು ಅರಿತುಕೊಂಡ ಆ ಹೆಣ್ಣು ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತವೆಂದು ಆತ್ಯಹತ್ಯೆಯ ಹಾದಿ ಹಿಡಿದಿದ್ದಾಳೆ.
ಘಟನೆ ವಿವರ : ಮಾಗಡಿ ಪಟ್ಟಣದ ತಿರುಮಲೆ ಬಡಾವಣೆಯಲ್ಲಿ ಪವರ್ ಲೂಮ್ಸ್‌ಗಳನ್ನಿಟ್ಟುಕೊಂಡು ಬದುಕು ಸಾಗಿಸುತ್ತಿದ್ದ ಕಮಲ ತನ್ನ ಗಂಡ ಮೂರು ಮಕ್ಕಳೊಂದಿಗೆ ಸಂಸಾರ ನಡೆಸುತ್ತಿದ್ದಳು. ಪವರ್‌ಲೂಮ್ಸ್ ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದ ಸುಬ್ಬಯ್ಯನಪಾಳ್ಯದ ಈ ಡಾಕೂ ಸತೀಶ ತನ್ನ ಮಾಲೀಕನ ಪತ್ನಿಗೆ ಗಾಳಹಾಕಿದ್ದಾನೆ.
ಎದೆಎತ್ತರದ ಮಕ್ಕಳಿದ್ದರೂ ತನಗಿಂತ ವಯಸ್ಸಿನಲ್ಲಿ ಚಿಕ್ಕವನಾದ ಈ ಸತೀಶನ ಕಾಮಬಲೆಗೆ ಈ ಕಮಲ ಕೂಡ ಬಿದ್ದಿದ್ದಾಳೆ. ಕದ್ದುಮುಚ್ಚಿ ಕಾಮದಾಟವಾಡುತ್ತಿದ್ದ ಸತೀಶ ಮತ್ತು ಕಮಲರಿಗೆ ಸ್ವತಂತ್ರ ಹಕ್ಕಿಗಳಾಗಬೇಕೆನಿಸಿತೇನೋ, ಅವರಿವರ ಬಳಿ ಸಾಲ ಮಾಡಿದ ಹಣ ಮತ್ತು ಮನೆಯಲ್ಲಿದ್ದ ಹಣ ಒಡವೆಯನ್ನೆಲ್ಲಾ ಎತ್ತಿಕೊಂಡು ಪರಾರಿಯಾಗಿ ಬೆಂಗಳೂರಿನ ಸುಂಕದಕಟ್ಟೆಯಲ್ಲಿ 10 ತಿಂಗಳು ಸಂಸಾರ ನಡೆಸಿದ್ದಾರೆ.
ಈ ಹೆಣ್ಣಿಂದು ಕೂಡ ಅದೇ ಕಥೆ, ಆದರೆ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ
ಹಿಂಡಿದ ಕಬ್ಬಿನ ಜಲ್ಲೆಯಂತಾದ ಮಾಲೀಕ ಪತ್ನಿಯ ಮೇಲಿದ್ದ ವ್ಯಾಮೋಹ ಕಡಿಮೆಯಾಗಿ ತಾನು ಕಟ್ಕೊಂಡ ಹೆಂಡ್ತಿ ಮಗಳೊಂದಿಗೆ ಬಾಳು ನಡೆಸೋ ತೀರ್ಮಾನಕ್ಕೆ ಸತೀಶ ಬಂದಿದ್ದಾನೆ. ಪರಪುರುಷನ ವ್ಯಾಮೋಹಕ್ಕೆ ಒಳಗಾಗಿ ತನ್ನ ಮಕ್ಕಳನ್ನ ಬಿಟ್ಟು ಹೋಗಿದ್ದರ ಬಗ್ಗೆ ಪಾಪಪ್ರಜ್ಞೆ ಕಾಡಿನ ಕಮಲ ತನ್ನ ತಪ್ಪಿನ ಅರಿವಾಗುವಷ್ಟರಲ್ಲಿ ಕಾಲ ಮಿಂಚುಹೋಗಿದೆ. ಸತೀಶ ಮಾತ್ರ ತಾನು ಮಾಲೀಕನ ಪತ್ನಿಯೊಂದಿಗೆ ಪರಾರಿಯಾಗಿದ್ದು ತಪ್ಪು. ಆದ್ದರಿಂದ ಮತ್ತೆ ತನ್ನ ಹೆಂಡತಿ ಮಗುವಿನೊಂದಿಗೆ ಸಂಸಾರ ನಡೆಸುತ್ತೇನೆಂದು ಪೊಲೀಸರೆದುರು ಹೇಳಿ ಕೈತೊಳೆದುಕೊಂಡಿದ್ದಾನೆ.
ಪತಿಯಿಂದಲೂ ತಿರಸ್ಕಾರ : ನಾಯಿ ಮುಟ್ಟದ ಮಡಿಕೆಯಂತಾದ ಕಮಲಳನ್ನ ತನ್ನ ಮೊದಲ ಪತಿ ಮತ್ತೆ ಕರೆದೊಯ್ಯುವ ದೊಡ್ಡಮನಸ್ಸು ಮಾಡಲಿಲ್ಲ. ತನ್ನ ಪತ್ನಿಯ ಕೆಲಸದಿಂದ ಊರಿನಲ್ಲಿ ತಲೆಎತ್ತಿಕೊಂಡು ತಿರುಗಾಡದಷ್ಟು ಸಹಿಸಲಾರದಷ್ಟು ಅವಮಾನವಾಗಿತ್ತು. ಪರಪುರುಷನೊಂದಿಗೆ ಸಂಸಾರ ಮಾಡಿ ಮತ್ತೆ ಮರಳಿದ ಹೆಂಡತಿಯನ್ನು ಯಾವ ಗಂಡ ತಾನೆ ಒಪ್ಪಿಯಾನು? ಅದೇ ರೀತಿ ಪತಿಯೂ ಕಮಲಳನ್ನ ತಿರಸ್ಕರಿಸಿದ.
ಇತ್ತ ಗಂಡನೂ ಇಲ್ಲದೇ, ಸತೀಶನೂ ಇಲ್ಲದೇ ಏಕಾಂಗಿಯಾದ ಕಮಲಳಿಗೆ ಬದುಕು ಭಾರವಾಗಿದೆ. ಕೊನೆಗೆ ತಪ್ಪುಗಳ ತಪ್ಪು ಮಾಡಿದ ಕಮಲ ಸಮಾಜಕ್ಕೆ ಮುಖ ತೋರಿಸಲಾಗದೇ ನೇಣಿಗೆ ಶರಣಾಗಿ ಚಿತೆ ಏರಿದ್ದಾಳೆ. ಕಮಲಳ ಮೊದಲ ಪತಿ ಮತ್ತು ಮಕ್ಕಳು ಕೂಡ ಚಿತೆಗೇರುವ ಮುನ್ನ ಕಮಲಳ ಮುಖ ನೋಡಲು ಹೋಗಿಲ್ಲ. ಅನಾಚಾರ ಮಾಡಿದ ಹೆಣ್ಣಿನ ಶವ ಗ್ರಾಮದಲ್ಲಿ ಇರಿಸಲು ಗ್ರಾಮದ ಕೆಲವು ಹಿರಿಯರು ಕೂಡ ವಿರೋಧ ವ್ಯಕ್ತಪಡಿಸಿದ್ದಾರೆ. ಕಮಲ ಕೊನೆಗೆ ಮಾಡಿದ ತಪ್ಪಿಗೆ ಯಾರೋ ಸಂಬಂಧಿಕರು ಶಾಸ್ತ್ರ ಸಂಪ್ರದಾಯಗಳಿಲ್ಲದೇ ಅಂತ್ಯಸಂಸ್ಕಾರ ಮುಗಿಸಿ ಕೈತೊಳೆದುಕೊಂಡಿದ್ದಾರೆ. [ಅನೈತಿಕ ಸಂಬಂಧ]












Click it and Unblock the Notifications