ಜನಾರ್ದನ ರೆಡ್ಡಿ ರಾಜೀನಾಮೆ ಸಾಧ್ಯತೆ?
ಬೆಂಗಳೂರು,
ಜ. 9 : ಬಳ್ಳಾರಿ ರೆಡ್ಡಿಗಳ ಅಕ್ರಮ ದೃಢೀಕರಿಸಿ ಸುಪ್ರೀಂಕೋರ್ಟ್ ನ ಉನ್ನತಾಧಿಕಾರ ಸಮಿತಿ ನೀಡಿರುವ ವರದಿಯಿಂದ ರಾಜ್ಯ ರಾಜಕೀಯದಲ್ಲಿ ಭಾರಿ ತಲ್ಲಣ ಉಂಟಾಗಿದೆ. ಈ ನಡುವೆ ರಾಜ್ಯಪಾಲ ದೆಹಲಿ ಭೇಟಿ ನೀಡಿರುವುದು ಕುತೂಹಲಕ್ಕೆ ಕಾರಣವಾಗಿದ್ದರೆ, ರಾಜ್ಯ ಬಿಜೆಪಿ ಸರಕಾರವನ್ನು ಸತತವಾಗಿ ಇಕ್ಕಟ್ಟಿಗೆ ಸಿಲುಕಿಸುತ್ತಲೇ ಬಂದಿರುವ ಬಳ್ಳಾರಿ ರೆಡ್ಡಿಗಳ ತಲೆದಂಡಕ್ಕೆ ಆಡಳಿತ ಪಕ್ಷದಲ್ಲಿ ಒತ್ತಡ ಶುರುವಾಗಿದೆ. id="toptextpromo">ವಿಧಾನಮಂಡಲದಲ್ಲಿ
ಮುಖ ಉಳಿಸಿಕೊಳ್ಳಲು ರೆಡ್ಡಿಗಳ ರಾಜೀನಾಮೆ ಪಡೆಯುವುದು ಉಚಿತ ಎಂಬ ಸಲಹೆಯನ್ನು ಬಿಜೆಪಿಯ ಒಂದು ವರ್ಗ ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಹೈಕಮಾಂಡ್ ಗೆ ಮನವರಿಕೆ ಮಾಡಿಕೊಟ್ಟಿದೆ ಎನ್ನಲಾಗಿದೆ. ಕಳಂಕಿತ ಸಚಿವರನ್ನು ಹೊರಗಿಡುವ ಪಕ್ಷದ ನಿರ್ಧಾರ ಎಲ್ಲರಿಗೂ ಅನ್ವಯವಾಗಬೇಕು. ರಾಮಚಂದ್ರಗೌಡ, ಕೃಷ್ಣಯ್ಯ ಶೆಟ್ಟಿ, ಕಟ್ಟಾ ಸುಬ್ರಮಣ್ಯ ನಾಯ್ಡು ಅವರಿಗೆ ಅನ್ವಯವಾದಂತೆ ರೆಡ್ಡಿಯನ್ನು ಸಂಪುಟದಿಂದ ಕೈಬಿಡಬೇಕು ಎಂದು ಅನೇಕ ಬೆಜೆಪಿ ಶಾಸಕ, ಸಚಿವರು ಒತ್ತಡ ಹಾಕಿದ್ದಾರೆ ಎನ್ನಲಾಗಿದೆ. id='are-slot-1' class='oiad oi-axt oiadv'> id='top-searched-articles'>ಇದರ
ಮಧ್ಯೆ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರು ದೆಹಲಿ ಭೇಟಿ ನೀಡಿ ಕಾಂಗ್ರೆಸ್ ನಾಯಕ ದಿಗ್ವಿಜಯ್ ಸಿಂಗ್ ಅವರೊಂದಿಗೆ ಚರ್ಚೆ ನಡೆಸಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಇದರ ಜೊತೆಗೆ ಕೆಪಿಸಿಸಿ ಅಧ್ಯಕ್ಷ ಜಿ ಪರಮೇಶ್ವರ್, ಜೆಡಿಎಸ್ ಮುಖಂಡ ಎಚ್ ಡಿ ದೇವೇಗೌಡ, ರೆಡ್ಡಿಗಳ ರಾಜೀನಾಮೆಯನ್ನು ಕೂಡಲೇ ಪಡೆಯಬೇಕು ಎಂದು ಮುಖ್ಯಮಂತ್ರಿ ಮೇಲೆ ಒತ್ತಡ ಹೇರಿದ್ದಾರೆ.











Click it and Unblock the Notifications