ಲೋಕಾಯುಕ್ತ ಬಲೆಗೆ ಬಿದ್ದ ಆಲೂರಿನ ಸರ್ಕಾರಿ ವೈದ್ಯ
ಆಲೂರು,
ಜ.7 : ಮಹಿಳೆಯೊಬ್ಬರಿಂದ ಲಂಚ ಸ್ವೀಕರಿಸುತ್ತಿದ್ದ ಸರ್ಕಾರಿ ಆಸ್ಪತ್ರೆ ವೈದ್ಯ ಸೈಯದ್ ಮುದಸೀರ್ ಎಂಬಾತನನ್ನು ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ರೋಗಿಯ ಕಡೆಯವಗೆ ನೂರು ರುಪಾಯಿ ಕೊಟ್ಟರೆ ಮುಂದಿನ ಚಿಕಿತ್ಸೆ ಎಂದು ಹೆದರಿಸುತ್ತಿದ್ದ ಡಾಕ್ಟರ್ ಸೈಯದ್, ನೂರು ರುಪಾಯಿ ಫಿಕ್ಸ್ ಡ್ ರೇಟ್ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ. id="toptextpromo">ಮಂಜುಳಾ
ಎಂಬ ಮಹಿಳೆ ತನ್ನ ಅಕ್ಕನ ಮಗಳು ವರಲಕ್ಷ್ಮಿ ಎಂಬಾಕೆಯ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಕರೆದೊಯ್ದರು. ವೈದ್ಯ ಮುದಸೀರ್ 100 ರೂ. ಶುಲ್ಕ ಪಡೆದು, ನಂತರ ರೋಗಿಯನ್ನು ಪರೀಕ್ಷೆ ಮಾಡಿ ಗ್ಲೂಕೋಸ್ ನೀಡಿ, ವೈದ್ಯೋಪಚಾರ ನೀಡಲು ಪುನಃ 100 ರೂ. ಹಣ ತರುವಂತೆ ಒತ್ತಾಯಿಸಿದನು. id='are-slot-1' class='oiad oi-axt oiadv'> id='top-searched-articles'>ಹಣ
ಕೊಡಲೊಪ್ಪದ ಮಂಜುಳಾ ಆರೋಪಿ ವಿರುದ್ಧ ಲೋಕಾಯುಕ್ತ ಠಾಣೆಯಲ್ಲಿ ದೂರು ನೀಡಿದರು. ತಕ್ಷಣ ಕಾರ್ಯ ಪ್ರವೃತ್ತರಾದ ಲೋಕಾಯುಕ್ತಪೊಲೀಸರು, ಮುದಸೀರ್, ಈ ಮಹಿಳೆಯಿಂದ 100 ರೂ. ಹಣ ಪಡೆಯುತ್ತಿರುವಾಗಲೇ ಬಂಧಿಸಿದರು. ದಾಳಿ ನಡೆಸಿದ ಸಂದರ್ಭ ಈತ ನಿಂದ 100 ರೂ. ಹಣವಲ್ಲದೆ, ಇನ್ನಿತರ ರೋಗಿಗಳಿಂದ ಲಂಚದ ರೂಪದಲ್ಲಿ ವಸೂಲು ಮಾಡಿದ್ದ 2,555 ರೂ.ಗಳನ್ನೂ ವಶಪಡಿಸಿ ಕೊಳ್ಳಲಾಗಿದೆ. ಆರೋಪಿ ವಿರುದ್ಧ ಭ್ರಷ್ಟಾಚಾರ ಮೊಕದ್ದಮೆ ದಾಖಲಾಗಿದ್ದು, ತನಿಖೆ ಮುಂದುವರೆಯುತ್ತಿದೆ. [ಭ್ರಷ್ಟಾಚಾರ]












Click it and Unblock the Notifications