ಮೈಸೂರು : ವಿದ್ಯಾರ್ಥಿನಿ ಕೊಲೆ, 4 ಬಂಧನ

ಚಾಮರಾಜನಗರ ತಾಲ್ಲೂಕು ಸಂತೇಮರಹಳ್ಳಿ ಸಮೀಪ ಹುಲ್ಲೇಪುರದ ಸಿ ಮಹದೇವ ಎಂಬುವವರ ಮಗಳು ಬಿಬಿಎಂ ವಿದ್ಯಾರ್ಥಿನಿ ರಮ್ಯಾ ಕೊಲೆಯಾದ ನತದೃಷ್ಟೆ. ಪ್ರಿಯಕರ ಮೈಸೂರಿನ ಪಡುವಾರಹಳ್ಳಿಯ ಮುಕುಂದ ಹಾಗೂ ಆತನ ಸ್ನೇಹಿತರು ಗೊದ್ದನಪುರ ಹುಂಡಿ ಗ್ರಾಮದ ಶೀಕಾಂತ್, ಅದೇ ಗ್ರಾಮದ ಅಟೋ ಚಾಲಕ ಮಹೇಶ, ಪಡುವಾರಹಳ್ಳಿಯ ಹರೀಶ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ.
ನಗರದ ವಿಜಯನಗರದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ರಮ್ಯಾ ಬಿಬಿಎಂ ವ್ಯಾಸಂಗ ಮಾಡುತ್ತಿದ್ದಳು. ಕೆಲ ದಿನಗಳಿಂದ ಮುಕುಂದನನ್ನು ಪ್ರೀತಿಸುತ್ತಿದ್ದಳು. ಮದುವೆಯಾಗುವಂತೆ ಇತ್ತೀಚೆಗೆ ಪೀಡಿಸುತ್ತಿದ್ದಳು. ಈ ಕಾರಣಕ್ಕೆ ಮುಕುಂದ ಸ್ನೇಹಿತರ ಜೊತೆಗೂಡಿ ಕೆಆರ್ ಎಸ್ ನಲ್ಲಿ ಸಂಚು ರೂಪಿಸಿದ.
ಡಿ.6ರಂದು ಗೊದ್ದನಪುರ ಹುಂಡಿಯ ಮಹೇಶ ಅಟೋದಲ್ಲಿ ರಮ್ಯಾಳನ್ನು ರಾಮಪುರ ನಾಲೆ ಬಳಿ ಕರೆದೊಯ್ದಿದ್ದಾರೆ. ಆಕೆಯ ಚೂಡಿದಾರದ ವೇಲ್ ನಿಂದ ಕತ್ತು ಬಿಗಿದು ಕೊಲೆ ಮಾಡಿ, ಬಳಿಕ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿ ಪರಾರಿಯಾಗಿದ್ದಾರೆ. ಮರುದಿನ ಗ್ರಾಮಸ್ಥರು ಮೃತದೇಹ ಗಮನಿಸಿ ಪೊಲೀಸರಿಗೆ ದೂರು ನೀಡಿದ್ದಾರೆ. ತನಿಖೆ ನಡೆಸಿದಾಗ ಮುಕುಂದ ಸ್ನೇಹಿತರೊಡಗೂಡಿ ಕೊಲೆ ಮಾಡಿರುವ ಸಂಗತಿ ಹೊರಬಂದಿದೆ.(ಕ್ರೈಂ)












Click it and Unblock the Notifications