ಅನಂತ್ ರಾಜೀನಾಮೆಗೆ ಪರಮೇಶ್ವರ್ ಆಗ್ರಹ
ಬೆಂಗಳೂರು,
ಡಿ. 26 : 2ಜಿ ಸ್ಪೆಕ್ಟ್ರಂ ಹಗರಣದಲ್ಲಿ ಬಿಜೆಪಿ ನಾಯಕ ಅನಂತ್ ಕುಮಾರ್ ಮೇಲೆಯೂ ಆರೋಪ ಬಂದಿದ್ದು, ನೈತಿಕ ಹೊಣೆ ಹೊತ್ತು ಅವರು ಕೂಡಲೇ ತಮ್ಮ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಕೆಪಿಸಿಸಿ ಅಧ್ಯಕ್ಷ ಡಾ ಜಿ ಪರಮೇಶ್ವರ್ ಆಗ್ರಹಿಸಿದ್ದಾರೆ. id="toptextpromo">ಹೆಬ್ಬಾಳ
ಕೃಷಿ ವಿವಿಯ ಆವರಣದಲ್ಲಿ ನಡೆದ ವಿಶ್ವ ವಿದ್ಯಾಲಯದ ಹಳೆಯ ವಿದ್ಯಾರ್ಥಿ ಸಂಘದ ಜಾಗತಿಕ ಸಮಾವೇಶದಲ್ಲಿ ಭಾಗವಹಿಸಿದ್ದ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು. ಅನಂತ ಕುಮಾರ್ ವಿರುದ್ಧ ಹಿಂದೆ ಕೂಡಾ ಹುಡ್ಕೋ ಹಗರಣದಲ್ಲಿ ಹೆಸರು ಕೇಳಿ ಬಂದಿತ್ತು. ಈಗ ದಲ್ಲಾಳಿ ನೀರಾ ರಾಡಿಯಾ ಜೊತೆ ಸಂಬಂಧವಿದೆ ಎಂಬ ಆರೋಪವಿದೆ. ಹೀಗಾಗಿ ಅವರು ನೈತಿಕ ಹೊಣೆ ಹೊತ್ತು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಪರಮೇಶ್ವರ್ ಒತ್ತಾಯಿಸಿದರು. id='are-slot-1' class='oiad oi-axt oiadv'> id='top-searched-articles'>ಕೃಷಿ
ವಿವಿ ಆವರಣದಲ್ಲಿ ನ್ಯಾಯಾಧೀಶರ ವಸತಿಗೃಹ ನಿರ್ಮಾಣಕ್ಕೆ ಜಮೀನು ನೀಡುವ ಸರಕಾರದ ನಿರ್ಧಾರಕ್ಕೆ ವಿರೋಧ ವ್ಯಕ್ತಪಡಿಸಿದ ಪರಮೇಶ್ವರ್, ಸರಕಾರ ನೀಡಲು ಮುಂದಾದರೆ ವಿವಿಯ ಹಳೆ ವಿದ್ಯಾರ್ಥಿಯಾಗಿ ತಾನು ಹೋರಾಟ ನಡೆಸುವುದಾಗಿ ಎಚ್ಚರಿಸಿದರು. ಸರಕಾರಕ್ಕೆ ಜಮೀನಿನ ಅಗತ್ಯವಿದ್ದರೆ ಬಿಜೆಪಿ ನಾಯಕರು ಅಕ್ರಮವಾಗಿ ಹಲವು ಎಕರೆ ಡಿನೋಟಿಫಿಕೇಶನ್ ಮಾಡಿಕೊಂಡಿರುವ ಜಮೀನನ್ನು ನೀಡಲಿ ಎಂದು ಟೀಕೆಸಿದರು.(ಅನಂತ್ ಕುಮಾರ್)












Click it and Unblock the Notifications