ಯಡಿಯೂರಪ್ಪ ಅವರಿಂದ ಚಾರಿತ್ರ್ಯಹರಣ : ಕೃಷ್ಣ

SM Krishna
ಬೆಂಗಳೂರು, ಡಿ. 24 : ಎಸ್ ಎಂ ಕೃಷ್ಣ ರಾಜ್ಯದ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೂ ಭೂಮಿಯನ್ನು ಡಿನೋಟಿಫಿಕೇಷನ್ ಮಾಡಿದ್ದರು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಹೇಳಿಕೆಗೆ ಕೇಂದ್ರ ವಿದೇಶಾಂಗ ಮಂತ್ರಿ ಎಸ್ ಎಂ ಕೃಷ್ಣ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಆರೋಪದ ಹಿಂದೆ ಚಾರಿತ್ರ್ಯಹರಣದ ಉದ್ದೇಶವಿದೆ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬರೆದಿರುವ ಪತ್ರದಲ್ಲಿ ಕೃಷ್ಣ ಅವರು, ಈಗ ನನ್ನ ವಿರುದ್ದ ಮಾಡಲಾಗಿರುವ ಎಲ್ಲ ಆರೋಪಗಳ ಬಗ್ಗೆಯೂ ನಾನು ರಾಜ್ಯದ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೇ ಸುದೀರ್ಘವಾಗಿ ಚರ್ಚೆ ನಡೆಸಿದ್ದೇನೆ. ನನ್ನ ಅಧಿಕಾರವಧಿಯ ನಂತರವೂ ಸಾಕಷ್ಟು ಚರ್ಚೆ ನಡೆದಿದೆ. ಆದರೂ, ಇದೀಗ ನೀವು ಇದನ್ನು ವೈಭವೀಕರಿಸಲು ಯತ್ನಿಸುತ್ತಿದ್ದೀರಿ ಎಂದು ಕೃಷ್ಣ ಪ್ರಶ್ನಿಸಿದ್ದಾರೆ.

ತಮ್ಮ ಅವಧಿಯಲ್ಲಿ ಬಿಡಿಎ ಮೂಲಕ 5,531 ಎಕೆರೆ ಭೂಮಿಯನ್ನು ಸ್ವಾಧೀನ ಮಾಡಿಕೊಳ್ಳಲಾಗಿತ್ತು. ಭೂಮಿಯನ್ನು ಕಳೆದುಕೊಂಡ ಪ್ರತಿಯೊಬ್ಬರಿಗೂ ಒಂದು ಎಕೆರೆಗೆ 60/40 ಅಳತೆಯ ಒಂದು ನಿವೇಶನವನ್ನು ಪರಿಹಾರ ರೂಪದಲ್ಲಿ ನೀಡಲಾಗಿತ್ತು. ಭೂಸ್ವಾಧೀನದ ಪ್ರತಿ ಹಂತದಲ್ಲಿಯೂ ಗ್ರಾಮಸ್ಥರ ಜೊತೆ ಚರ್ಚೆ ನಡೆಸಲಾಗಿತ್ತು ಎಂದು ಕೃಷ್ಣ ಪತ್ರದಲ್ಲಿ ವಿವರಿಸಿದ್ದಾರೆ.

1999ರಿಂದ 2004ರವರೆಗಿನ ತಮ್ಮ ಸರಕಾರದ ಅವಧಿಯಲ್ಲಿ ಒಟ್ಟು 2,203 ಎಕೆರೆ 30 ಗುಂಟೆ ಭೂಮಿ ಡಿನೋಡಿಫೈ ಆಗಿತ್ತು. ಧಾರ್ಮಿಕ, ಶೈಕ್ಷಣಿಕ ಮತ್ತು ಕೈಗಾರಿಕೆಗಳ ಸ್ಥಾಪನೆಯ ಉದ್ದೇಶದಿಂದ ಈ ಡಿನೋಟಿಫಿಕೇಷನ್ ಪ್ರಕ್ರಿಯೆ ನಡೆದಿತ್ತು. ಸರಕಾರಿ ಸಂಸ್ಥೆಗಳಾದ ಎಪಿಎಂಸಿ, ಕೆಐಎಡಿಬಿಗಾಗಿ ಹೆಚ್ಚಿನ ಪ್ರಮಾಣದ ಭೂಮಿ ನೋಟಿಫೈ ಆಗಿತ್ತು ಎಂದು ಕೃಷ್ಣ ಸ್ಪಷ್ಟಪಡಿಸಿದ್ದಾರೆ. (ಎಸ್ ಎಂ ಕೃಷ್ಣ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+