ಯಡಿಯೂರಪ್ಪ ಇನ್ನಾರು ತಿಂಗಳು ಮಾತ್ರ ಸಿಎಂ

ಮಂಗಳವಾರ ಕುಣಿಗಲ್ ತಾಲೂಕಿನಲ್ಲಿ ಚುನಾವಣಾ ಪ್ರಚಾರದ ರೋಡ್ ಶೋ ಕಾಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ತಾಲೂಕಿನ ಭಕ್ತರಹಳ್ಳಿಗೆ ಆಗಮಿಸಿದ ಕುಮಾರಸ್ವಾಮಿ ಕೊತ್ತಗೆರೆ, ಗವಿಮಠ, ಅಮೃತೂರು, ಯಡವಾಣಿಯಲ್ಲಿ ಚುನಾವಣಾ ಪ್ರಚಾರ ಕಾರ್ಯ ಮುಗಿಸಿ ಹುಲಿಯೂರದುರ್ಗ ಕ್ಷೇತ್ರದ ಜೆಡಿಎಸ್ ಜಿಪಂ ಅಭ್ಯರ್ಥಿಗಳ ಪರ ಪ್ರಚಾರ ನಡೆಸಿದರು.
ರಾಜ್ಯ ಬಿಜೆಪಿಯ ಸರಕಾರವನ್ನು ಮೊದಲು ಕಿತ್ತೊಗಿಯಿರಿ. ಇಂತಹ ಭ್ರಷ್ಟ ಸರಕಾರದಿಂದ ಬಡವರಿಗೆ ಹಾಗೂ ಶ್ರೀಸಾಮಾನ್ಯರು ನ್ಯಾಯ ಸಿಗದೆ ಕಂಗಾಲಾಗಿದ್ದಾರೆ. ಜಿಲ್ಲಾ ಮತ್ತು ತಾಲ್ಲೂಕು ಪಂಚಾಯಿತಿ ಚುನಾವಣೆಗಳಿ ನಿಮ್ಮ ಕೈಯಲ್ಲಿರುವ ಅಸ್ತ್ರ. ಈ ಅಸ್ತ್ರ ಬಳಸಿ ಜನವಿರೋಧಿ ಮುಖ್ಯಮಂತ್ರಿಯನ್ನು ಮನೆಗೆ ಕಳುಹಿಸಿ ಎಂದು ಅವರು ಮತದಾರರಲ್ಲಿ ಮನವಿ ಮಾಡಿಕೊಂಡರು.
ಇನ್ನಾರು ತಿಂಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದೆ. ನೀವು ಸಜ್ಜಾಗಿ ಎಂದು ಕಾರ್ಯಕರ್ತರಿಗೆ ಕರೆ ನೀಡಿದ ಅವರು, ನಮ್ಮ ಸರಕಾರ ಬಂದರೆ ಈ ತಾಲೂಕಿನ ಎಲ್ಲಾ ಸಮಸ್ಯೆಗಳನ್ನು ಕೇವಲ 6 ತಿಂಗಳಲ್ಲಿ ಪೂರೈಸಿ ಮಾಗಡಿ, ರಾಮನಗರದಂತೆ ಮಾಡುತ್ತೇನೆ ಎಂದು ಹೇಳಿದರು.(ಎಚ್ ಡಿ ಕುಮಾರಸ್ವಾಮಿ)












Click it and Unblock the Notifications