ಉ.ಪ್ರದೇಶ : ದಲಿತ ಮಹಿಳೆ ಮೇಲೆ ಗ್ಯಾಂಗ್ ರೇಪ್
ಲಖನೌ,
ಡಿ. 23 : ದಲಿತ ಮಹಿಳೆಯೊಬ್ಬಳನ್ನು ಅಪಹರಿಸಿದ ವಾರಗಟ್ಟಲೆ ಆಕೆಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ ಭೀಕರ ಘಟನೆ ಉತ್ತರ ಪ್ರದೇಶದ ಲಲಿತ್ ಪುರ್ ಎಂಬಲ್ಲಿ ನಡೆದಿದ್ದು, ಬುಧವಾರ ಬೆಳಕಿಗೆ ಬಂದಿದೆ. id="toptextpromo">ಘಟನೆ
ಬೆಳಕಿಗೆ ಬರುತ್ತಿದ್ದಂತೆಯೇ ಕಾರ್ಯಪ್ರವೃತ್ತರಾದ ಪೊಲೀಸರು ಅಪಹರಣದ ರೂವಾರಿ ಚೋಟೆಲಾಲ್ ಜಾ ಎಂಬುವವನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಚೋಟೆಲಾಲ್ ಮತ್ತು ಆತನ ಸಹಚರರು ಮಹಿಳೆಯನ್ನು ಲಲಿತ್ ಪುರದ ಗಾಂಧಿ ನಗರ ಪ್ರದೇಶದಲ್ಲಿರುವ ಆಕೆಯ ಮನೆಯಿಂದ ಅಪಹರಣ ಮಾಡಿ ವಾರಗಟ್ಟಲೇ ಒಂದು ಮನೆಯಲ್ಲಿರಿಸಿ, ಮನಬಂದಂತೆ ಅತ್ಯಾಚಾರ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಅತ್ಯಾಚಾರಕ್ಕೆ
ಒಳಗಾದ ಮಹಿಳೆ ಅಪಹರಣಕಾರರಿಂದ ತಪ್ಪಿಸಿಕೊಂಡು ಬಂದು ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ. ಇದಕ್ಕೂ ಮುನ್ನ ಮಹಿಳೆ ತನ್ನ ವಿಷಯವನ್ನು ತನ್ನ ಸಂಬಂಧಿಗಳಿಗೆ ಆನಂತರ ಪೊಲೀಸರಿಗೆ ದೂರು ನೀಡಿದ್ದಾಳೆ. ಉತ್ತರ ಪ್ರದೇಶದ ಕೊಟವಾಲಿ ಪೊಲೀಸ್ ಠಾಣೆ ಪ್ರಕರಣ ದಾಖಲಾಗಿದೆ. ಆರೋಪಿಗಳ ವಿರುದ್ದ ಎಫ್ ಐಆರ್ ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.











Click it and Unblock the Notifications