ಕ್ರಿಸ್ಮಸ್ ಅಲೆಯಲ್ಲಿ ಸ್ಯಾಮ್ ಸಂಗ್ ವೇವ್ II

Samsung wave II review
ಮುಂಬೈ, ಡಿ.21: ವಿಶ್ವದ ಎರಡನೇ ಅತಿದೊಡ್ಡ ಮೊಬೈಲ್ ಉತ್ಪಾದನೆ ಸಂಸ್ಥೆ ಸ್ಯಾಮ್ ಸಂಗ್ ಕ್ರಿಸ್ಮಸ್ ಸಂದರ್ಭದಲ್ಲಿ ತನ್ನ ನೆಚ್ಚಿನ ಸ್ಮಾರ್ಟ್ ಫೋನ್ ಉತ್ಪನ್ನವನ್ನು ಹೊರತರುತ್ತಿದೆ. ಸ್ಯಾಮ್ ಸಂಗ್ ವೇವ್ II ಎಸ್8530 ಸ್ಮಾರ್ಟ್ ಫೋನ್ ರು. 19,000ರ ಆಕರ್ಷಕ ಬೆಲೆಯೊಂದಿಗೆ ಮಾರುಕಟ್ಟೆ ಪ್ರವೇಶಿಸಲಿದೆ.

ಹೊಸ ವೇವ್ II ಎಸ್ 8530 ಮೊಬೈಲ್ ಫೋನ್ ನಲ್ಲಿ 3.7 ಇಂಚಿನ ಸೂಪರ್ ಕ್ಲಿಯರ್ LCD ದರ್ಶಕವಿದೆ ಇದು 800x480 pixel resolution ಬೆಂಬಲಿಸುತ್ತದೆ. LED ಫ್ಲಾಶ್ ಸಹಿತ 5 ಮೆಗಾ ಕೆಮೆರಾವಿದ್ದು HD ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ.

ವೇವ್ ವೇವ್ II ಎಸ್ 8530 ನಲ್ಲಿ ಸ್ಯಾಮಸಂಗ್ ನ ಬಾಡ ಮೊಬೈಲ್ ಆಪರೇಟಿಂಗ್ ಸಿಸ್ಟಮ್ ಇದೆ. 1GHz ಪ್ರೊಸೆಸರ್ ಸಮರ್ಥ ಹೊಂದಿದೆ. 2 ಜಿಬಿ ಅಂತರಿಕ ಮೆಮೋರಿ ಜೊತೆ 32 ಜಿಬಿ ತನಕ ವಿಸ್ತರಣೆ ಕೂಡಾ ಮಾಡಿಕೊಳ್ಳಬಹುದು.

ಸ್ಯಾಮ್ ಸಂಗ್ ವೇವ್ II ಎಸ್ 8530 ವಿಶೇಷತೆಗಳು :

* 3.7 ಇಂಚಿನ LCD ಟಚ್ ಸ್ಕ್ರೀನ್
* 480 x 800 pixels ರೆಸೆಲ್ಯೂಷನ್ ಮಲ್ಟಿ ಟಚ್ ಅನುಕೂಲ
* 5 MP ಕೆಮೆರಾ 2592 x 1944 pixels,
* ಬಾಡ OS 1.2
* ARM ಕೊರ್ಟೆಕ್ಸ್ A8 1GHz ಪ್ರೊಸೆಸರ್
* 3ಜಿ HSDPA 3.6 Mbps; HSUPA, 2 Mbps
* ವೈ-ಫೈ802.11 b/g/n
* ಜಿಯೋ ಟ್ಯಾಗಿಂಗ್, ಫೇಸ್ ಡಿಟೆಕ್ಷನ್, ಟಚ್ ಫೋಕಸ್, ಇಮೇಜ್ ಸ್ಟಬಿಲೈಜೇಷನ್
* ಸ್ಟಿರಿಯೋ ಎಫ್ ಎಂ ರೆಕಾರ್ಡಿಂಗ್
* ಎ-ಜಿಪಿಎಸ್, ಟಿವಿ ಔಟ್
* ಲಿಥಿಯನ್-ಐಯಾನ್ 1500 mAh ಬ್ಯಾಟರಿ

135 ಗ್ರಾಂ ತೂಕದ ಸ್ಯಾಮ್ ಸಂಗ್ ವೇವ್ II ಎಸ್ 8530 ಸ್ಮಾರ್ಟ್ ಫೋನ್ ಬೆಲೆ ಸುಮಾರು 19,000 ರು ಆಗಲಿದ್ದು, 1 ವರ್ಷದ ವಾರಂಟಿ ಸಿಗಲಿದೆ. ಪ್ರಮುಖ ಎಲೆಕ್ಟಾನಿಕ್ ಮಳಿಗೆಗಳಲ್ಲಿ ಸದ್ಯದಲ್ಲೇ ಲಭ್ಯವಾಗಲಿದೆ ಎಂದು ಸಂಸ್ಥೆ ತಿಳಿಸಿದೆ.[ಸ್ಮಾರ್ಟ್ ಫೋನ್]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+