ರಾಜೀವ್ ಲಗ್ನಕ್ಕೆ ಹೆತ್ತವರ ವಿರೋಧವಿತ್ತು: ಸೋನಿಯಾ

2006ರ ಆ. 4ರಂದು ಮರಿಯಾ ಶ್ರೈವರ್ ಭಾರತಕ್ಕೆ ಭೇಟಿ ನೀಡಿದ ವೇಳೆ ಸೋನಿಯಾ ಜೊತೆ ನಡೆಸಿದ ಭೇಟಿ ವೇಳೆ ಅವರೊಳಗೆ ಆತ್ಮೀಯ ಸಮಾಲೋಚನೆ ನಡೆಯಿತು. ಸಾಮಾನ್ಯವಾಗಿ ಮಿತಭಾಷಿಯಾಗಿರುವ ಸೋನಿಯಾ ಶ್ರೈವರ್ ಜೊತೆ ಬಿಚ್ಚುಮನಸ್ಸಿನ ಮಾತುಕತೆ ನಡೆಸಿದರು. ತನ್ನ ಬಗ್ಗೆ, ಮಹಿಳಾ ವಿಷಯಗಳ ಬಗ್ಗೆ ಮತ್ತು ರಾಜಕೀಯ ಅನಿವಾರ್ಯತೆಗಳ ಬಗ್ಗೆ ಮಾತನಾಡಿದರು.
ರಾಜೀವ್ ಜೊತೆ ತನ್ನ ವಿವಾಹಕ್ಕೆ ಹೆತ್ತವರು ಆಕ್ಷೇಪ ಸೂಚಿಸಿದ್ದರು. ಆದರೆ ತಾನು ಅವರ ವಿರೋಧವನ್ನು ಲೆಕ್ಕಿಸದೆ ಮುಂದುವರಿದು ರಾಜೀವ್ ಅವರನ್ನು ವಿವಾಹವಾದೆ ಎಂದು ಸೋನಿಯಾ ಶ್ರೈವರ್ ಅವರಲ್ಲಿ ಹೇಳಿದ್ದಾಗಿ ವಿಕಿಲೀಕ್ಸ್ ತಿಳಿಸಿದೆ.
2004ರಲ್ಲಿ ಯುಪಿಎ ವಿಜಯಗಳಿಸಿದ ಬಳಿಕ ಪ್ರಧಾನಿ ಹುದ್ದೆಯನ್ನು ತಾನು ತಿರಸ್ಕರಿಸಲು ಕಾರಣವೇನೆಂದು ತಿಳಿಸಲು ಸೋನಿಯಾ ಇಚ್ಛಿಸಲಿಲ್ಲ. ತಾನು ಮುಂದೊಂದು ದಿನ ಇಡೀ ಕತೆ ಕುರಿತು ಪುಸ್ತಕವೊಂದನ್ನು ಬರೆಯುವುದಾಗಿ ಅವರು ಹೇಳಿದರು. ಬೇರೆ ಯಾರಾದರೂ ಪ್ರಧಾನಿಯಾದಲ್ಲಿ ತನಗೆ ಹಿತವೆನಿಸುವುದು ಮತ್ತು ತಾನು ತನ್ನ ನಿರ್ಧಾರಕ್ಕೆ ವಿಷಾದಿಸುವುದಿಲ್ಲವೆಂದು ಕೂಡ ಶ್ರೈವರ್ ಅವರೊಂದಿಗೆ ಹೇಳಿದರೆಂದು ವಿಕಿಲೀಕ್ಸ್ ತಿಳಿಸಿದೆ.












Click it and Unblock the Notifications