ಹಾಂಗ್ ಕಾಂಗ್ ಓಪನ್ ಗೆದ್ದ ಸೂಪರ್ ಸೈನಾ

saina Nehwal wins Hong Kong open
ಬೀಜಿಂಗ್, ಡಿ.12: ಭಾರತದ ಅದ್ವಿತೀಯ ಬ್ಯಾಡ್ಮಿಂಟನ್ ಆಟಗಾರ್ತಿ ಸೈನಾ ನೆಹ್ವಾಲ್ ಇಂದು ಮತ್ತೊಂದು ದಾಖಲೆ ಮೆರೆದಿದ್ದಾರೆ. ಇಂದು ನಡೆದ ಹಾಂಗ್ ಕಾಂಗ್ ಓಪನ್ ಸೀರಿಸ್ ಫೈನಲ್ ಪಂದ್ಯದಲ್ಲಿ ಚೀನಾದ ಎದುರಾಳಿ ವಾಗ್ ಷಿಕ್ಸಿಯನ್ ಅವರನ್ನು ಸೋಲಿಸಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಈ ಮೂಲಕ ವಿಶ್ವದ ನಂ.2 ಸ್ಥಾನದಲ್ಲಿರುವ ಸೈನಾ, ಮೊದಲ ಸ್ಥಾನದ ಸನಿಹಕ್ಕೆ ಬಂದಿದ್ದಾರೆ.

ಇಂದು ನಡೆದ ಅಂತಿಮ ಹಣಾಹಣಿಯಲ್ಲಿ ಮೊದಲ ಸೆಟ್ ಸೋತರೂ, ಎದೆಗುಂದದೆ ದಿಟ್ಟ ಹೋರಾಟ ನಡೆಸಿದ ಸೈನಾ ಅಂತಿಮವಾಗಿ 15-21, 21-16, 21-17 ಸೆಟ್ ಗಳ ಮೂಲಕ ವಾಗ್ ಷಿಕ್ಸಿಯನ್ ಅವರನ್ನು ಸೋಲಿಸಿ ನಾಲ್ಕನೇ ಸೂಪರ್ ಸೀರಿಸ್ ಪ್ರಶಸ್ತಿಯನ್ನು ಗೆದ್ದರು. ಏಷ್ಯನ್ ಗೇಮ್ಸ್ ಪ್ರಶಸ್ತಿ ಗೆದ್ದಿದ್ದ ಚೀನಾದ ಷಿಕ್ಸಿಯನ್ ವಿರುದ್ಧ ಸೋತಿದ್ದ ಸೈನಾ ಇಂದು ಸೇಡು ತೀರಿಸಿಕೊಂಡರು. ಈ ಮುಂಚೆ ಸತತವಾಗಿ ಮೂರು ಸೂಪರ್ ಸೀರಿಸ್ ಪ್ರಶಸ್ತಿ ಗೆದ್ದು ಹ್ಯಾಟ್ರಿಕ್ ಸಾಧನೆ ಮಾಡಿದ್ದರು.

ಓದಿ: 2010 ಇಸವಿಯಲ್ಲಿ ಕ್ರೀಡಾ ಕಲಿಗಳ ಏಳು ಬೀಳು

ವಿಶ್ವದ ನಂ.1 ಬ್ಯಾಡ್ಮಿಂಟನ್ ತಾರೆ ಹಾಗೂ ಒಲಿಂಪಿಕ್ ಚಿನ್ನದ ಪದಕ ಗಳಿಸುವ ಕನಸು ಕಾಣುತ್ತಿರುವ ಸೈನಾ ಅವರ ಈ ಸಾಧನೆಯನ್ನು ಅವರ ಕುಟುಂಬದವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ. ಇಂಡಿಯನ್ ಓಪನ್, ಸಿಂಗಪುರ ಓಪನ್ ಹಾಗೂ ಇಂಡೋನೇಷಿಯನ್ ಓಪನ್ ಗೆದ್ದ ಸಾಧನೆಯ ಜೊತೆಗೆ ಕಾಮನ್ ವೆಲ್ತ್ ಕ್ರೀಡಾಕೂಟ 2010ರಲ್ಲಿ ಚಿನ್ನದ ಪದಕ ಗಳಿಸಿದ ಸಾಧನೆ ಸೈನಾ ಅವರ ಹೆಸರಲ್ಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+