ಗೌಡರ ಆಸ್ತಿ ಮುಟ್ಟುಗೋಲಿಗೆ ಚಿಂತನೆ : ಯಡಿಯೂರಪ್ಪ
ಶಿವಮೊಗ್ಗ,
ಡಿ. 10 : ಕಳೆದ ಒಂದೂವರೆ ತಿಂಗಳಿಂದ ನನ್ನ ಮೇಲೆ ಇಲ್ಲ ಸಲ್ಲದ ಆರೋಪ ಮಾಡಿ ಷಡ್ಯಂತ್ರ ರೂಪಿಸುತ್ತಿದ್ದಾರೆ. ಈ ಯಡಿಯೂರಪ್ಪ ಯಾರಿಗೂ ಹೆದರುವವನಲ್ಲ. ಹೆದರಿ ಓಡೋಗುವವನೂ ಅಲ್ಲ. ನನ್ನ ಜೊತೆ ಚೆಲ್ಲಾಟ ಬೇಡ. ದೇವೇಗೌಡರ ಅಕ್ರಮ ಆಸ್ತಿಗಳನ್ನು ಶೀಘ್ರದಲ್ಲೇ ಸರಕಾರ ವಶಪಡಿಸಿಕೊಳ್ಳಲಿದೆ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಖಡಕ್ ಎಚ್ಚರಿಕೆ ನೀಡಿದ್ದಾರೆ. id="toptextpromo">ಶಿಕಾರಿಪುರದಲ್ಲಿ
ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಿದ್ದ ಮುಖ್ಯಮಂತ್ರಿಗಳು, ದೇವೇಗೌಡ ಕುಟುಂಬ ಬೆಂಗಳೂರು ಸುತ್ತಮುತ್ತ ಸಾಕಷ್ಟು ಭೂಮಿಯನ್ನು ಒತ್ತುವರಿ ಮಾಡಿಕೊಂಡಿದ್ದಾರೆ. ಇವುಗಳನ್ನು ಮುಟ್ಟುಗೋಲು ಹಾಕಿಕೊಂಡರೆ ಸುಮಾರು ಹತ್ತು ಸಾವಿರ ಕೋಟಿಗಳಷ್ಟು ಬೆಲೆ ಬಾಳುತ್ತದೆ. ಇದನ್ನೆಲ್ಲಾ ಮುಟ್ಟುಗೋಲು ಹಾಕಿಕೊಂಡು ಬಡವರಿಗೆ ಹಂಚಲು ಚಿಂತನೆ ನಡೆಸಲಾಗುತ್ತಿದೆ ಎಂದು ಯಡಿಯೂರಪ್ಪ ಹೇಳಿಕೆ ನೀಡಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮುಂದಿನ
ಬಜೆಟ್ ನಲ್ಲಿ ಶಿಕ್ಷಣಕ್ಕೆ ಒತ್ತು ನೀಡಿ ಆಯವ್ಯಯ ಮಂಡಿಸುತ್ತೇನೆ. ಕೊಳಗೇರಿ ರಹಿತ ಬೆಂಗಳೂರನ್ನಾಗಿ ಮಾಡುವುದು ನನ್ನ ಗುರಿ. ಕಷ್ಟಪಟ್ಟು ದುಡಿಯುವ ವರ್ಗಕ್ಕೆ ಕನಿಷ್ಟ ರೂಪದಲ್ಲಿ ಬಡ್ಡಿ ಸಾಲ ಒದಗಿಸಲಾಗುತ್ತಿದೆ. ಶಿಕಾರಿಪುರದಲ್ಲಿ ತಾಪಂ, ಜಿಪಂ ಗೆಲ್ಲದಿದ್ದರೆ ಮುಂದಿನ ದಿನಗಳಲ್ಲಿ ನಾನು ಶಿಕಾರಿಪುರಕ್ಕೆ ಕಾಲಿಡುವುದಿಲ್ಲ ಎಂದು ಮುಖ್ಯಮಂತ್ರಿಗಳು ಘೋಷಣೆ ಮಾಡಿದ್ದಾರೆ. ಬರೀ ಬೆಂಗಳೂರಿನಲ್ಲಿ ದೇವೇಗೌಡರ ಕುಟುಂಬ ಸುಮಾರು 10 ಸಾವಿರ ಕೋಟಿ ರುಪಾಯಿಗಳ ಆಸ್ತಿ ಸಂಪಾದಿಸಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ.











Click it and Unblock the Notifications