ಕಟ್ಟಾ ವಿರುದ್ಧ ಶೀಘ್ರ ಚಾರ್ಜ್ ಶೀಟ್
ಬೆಂಗಳೂರು,
ಡಿ. 5 : ಕೆಎಐಡಿಬಿ ಭೂಹಗರಣಕ್ಕೆ ಸಂಬಂಧಿಸಿದಂತೆ ತನಿಖೆ ಬಹುತೇಕ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಸಲಾಗವುದು ಎಂದು ಲೋಕಾಯುಕ್ತ ನ್ಯಾಯಮೂರ್ತಿ ಎನ್ ಸಂತೋಷ ಹೆಗ್ಡೆ ತಿಳಿಸಿದ್ದಾರೆ. id="toptextpromo">ಬೆಂಗಳೂರು
ವಕೀಲರ ಸಂಘ ಏರ್ಪಡಿಸಿದ್ದ ಕಾರ್ಯಕ್ರಮವೊಂದರಲ್ಲಿ ಪಾಲ್ಗೊಂಡ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಹಗರಣದ ಆರೋಪದ ಹಿನ್ನೆಲೆಯಲ್ಲಿ ರಾಜೀನಾಮೆ ನೀಡಿರುವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ತನಿಖೆಗೆ ಸಂಪೂರ್ಣ ಸಹಕರಿಸುತ್ತಾರೆ ಎಂಬ ವಿಶ್ವಾಸ ಇದೆ. ತನಿಖೆ ಸುಮಾರು ಮುಕ್ಕಾಲು ಭಾಗ ಮುಗಿದಿದೆ. ಬಾಕಿ ತನಿಖೆ ಪೂರ್ಣಗೊಳಿಸುವ ನಿಟ್ಟಿನಲ್ಲಿ ಲೋಕಾಯುಕ್ತ ಪೊಲೀಸರು ಮುಂದುವರಿದಿದ್ದಾರೆ ಎಂದರು. id='are-slot-1' class='oiad oi-axt oiadv'> id='top-searched-articles'>ಕಟ್ಟಾ
ಸುಬ್ರಹ್ಮಣ್ಯ ನಾಯ್ಡು ತನಿಖೆಗೆ ಸಹಕರಿಸಲ್ಲ ಅಥವಾ ತಲೆಮರೆಸಿಕೊಳ್ಳುತ್ತಾರೆ ಎಂಬ ಸೂಚನೆಗಳು ಸಿಕ್ಕಲ್ಲಿ ಅವರನ್ನು ಬಂಧಿಸುವ ಮತ್ತು ಪಾಸ್ ಪೋರ್ಟ್‌ನ್ನು ಮುಟ್ಟುಗೋಲು ಹಾಕಿಕೊಳ್ಳುವ ಬಗ್ಗೆ ತೀರ್ಮಾನಿಸಲಾಗುವುದು. ಸದ್ಯ ಅಂಥ ಯಾವ ಸ್ಥಿತಿಯೂ ಉದ್ಭವಿಸಿಲ್ಲ ಎಂದು ಸಂತೋಷ ಹಗ್ಡೆ ಸ್ಪಷ್ಟಪಡಿಸಿದ್ದಾರೆ.











Click it and Unblock the Notifications