ಮೈಕ್ರೋಮ್ಯಾಕ್ಸ್ ಆಂಡ್ರ್ಯಾಡ್ ಮಾರುಕಟ್ಟೆಗೆ ಎಂಟ್ರಿ

ಹೊಸ ಮೈಕ್ರೋ ಮ್ಯಾಕ್ಸ್ ಆಂಡ್ರೋ ಎ60 3ಜಿ ಮೊಬೈಲ್ ನಲ್ಲಿ 2.8 ಇಂಚಿನ ಟಿಎಫ್ ಟಿ ಪೂರ್ತಿ ಟಚ್ ಸ್ಕ್ರೀನ್ ಇದೆ. ಫ್ಲಾಶ್ ಸಹಿತ 3.2 ಮೆಗಾ ಪಿಕ್ಸಲ್ ಕೆಮೆರಾಗೆ ಆಟೋ ಫೋಕಸ್ ಸೌಲಭ್ಯವಿದ್ದು, ಆಕರ್ಷಕವಾಗಿದೆ. ಆಂಡ್ರೋ ಎ60 ಮೊಬೈಲ್ ನಲ್ಲಿ ಆಂಡ್ರ್ಯಾಡ್ 2.1 ಎಕ್ಲೇರ್ ಆಪರೇಟಿಂಗ್ ಸಿಸ್ಟಮ್ ಇದ್ದು 600 MHz ಪ್ರೊಸಸರ್ ಸಾಮರ್ಥ್ಯ ಹೊಂದಿದೆ.
ಉಳಿದಂತೆ ಸ್ಮಾರ್ಟ್ ಫೋನ್ ಗಳಲ್ಲಿರುವಂತೆ ವೈಫೈ, ಬ್ಲೂಟೂಥ್, ಎಫ್ ರೇಡಿಯೋ ಅಲ್ಲದೆ ಜಿಪಿಎಸ್ ಸೌಲಭ್ಯವಿದೆ. ಅಂತರಿಕ ಮೆಮೋರಿ 150 ಎಂಬಿಯಷ್ಟಿದ್ದು, ಮೈಕ್ರೋ SD ಕಾರ್ಡು ಮೂಲಕ 32 ಜಿಬಿ ತನಕ ವಿಸ್ತರಿಸಬಹುದಾಗಿದೆ.
ಮೈಕ್ರೋಮ್ಯಾಕ್ಸ್ ಆಂಡ್ರೋ ಎ60ರ ವಿಶೇಷಗಳು:
* 2.8 ಇಂಚು ಟಿಎಫ್ ಟಿ ಟಚ್ ಸ್ಕ್ರೀನ್
* 3.2 ಮೆಗಾ ಪಿಕ್ಸಲ್ ಆಟೋ ಫೋಕಸ್ ಕೆಮೆರಾ [2584x1938 pixels]
* ಆಂಡ್ರ್ಯಾಡ್ 2.1 ಎಕ್ಲೇರ್ ಆಪರೇಟಿಂಗ್ ಸಿಸ್ಟಮ್
* ವೈಫೈ, ಜಿಪಿ ಆರ್ ಎಸ್, 3ಜಿ
* ಸುಮಾರು 105 ಗ್ರಾಂ ತೂಕ.
* 1280 mAh Li-ion ಬ್ಯಾಟರಿ
ಸದ್ಯಕ್ಕೆ ಕಪ್ಪು ಬಣ್ಣದಲ್ಲಿ ಲಭ್ಯವಿರುವ ಮೈಕ್ರೋಮ್ಯಾಕ್ಸ್ ಆಂಡ್ರೋ ಎ60 ಮೊಬೈಲ್ ಫೋನ್ ನ ಬೆಲೆ 8,000 ರು.












Click it and Unblock the Notifications