ಆನಂದರಾವ್ ಸರ್ಕಲ್ ಬಳಿ ರು.20 ಲಕ್ಷ ಮಂಗಮಾಯ
ಬೆಂಗಳೂರು,
ನ.27: ಬೆಟ್ಟ ಹಲಸೂರಿನ ನಿವಾಸಿ ದೇವನಾಥ ಗೌಡ ಎಂಬುವವರ ಕಾರಿನಲ್ಲಿದ್ದ ರು.20 ಲಕ್ಷಗಳನ್ನು ಲಪಟಾಯಿಸಿದ ಘಟನೆ ಆನಂದರಾವ್ ಸರ್ಕಲ್ ಸಮೀಪದ ಲೋಕೋಪಯೋಗಿ ಇಲಾಖೆ ಬಳಿ ಶುಕ್ರವಾರ (ನ.26) ನಡೆದಿದೆ. id="toptextpromo">ಗುತ್ತಿಗೆದಾರರಾಗಿ
ಕೆಲಸ ಮಾಡುತ್ತಿದ್ದ ದೇವನಾಥ್ ಅವರ ಗೆಳೆಯ ಲೋಕೇಶ್ ಬಳಿ ಈ ಹಣವನ್ನು ತೆಗೆದುಕೊಂಡು ಬಂದಿದ್ದರು. ಹಣವನ್ನು ಪ್ಲಾಸ್ಟಿಕ್ ಚೀಲದಲ್ಲಿ ಇಟ್ಟು ಬಿಗಿಯಾಗಿ ಕಟ್ಟಿ ಕಾರಿನ ಡ್ರೈವರ್ ಸೀಟಿನಡಿ ಇಡಲಾಗಿತ್ತು. ಪೊಲೀಸ್ ಮೂಲಗಳು ಕೊಟ್ಟ ವಿವರಗಳು ಹೀಗಿವೆ. id='are-slot-1' class='oiad oi-axt oiadv'> id='top-searched-articles'>ತಮ್ಮ
ಸೋದರ ಮಂಜುನಾಥ್ ಗೌಡ ಹಾಗೂ ಗೆಳೆಯ ಕಿರಣ್ ಕುಮಾರ್ ಅವರನ್ನು ಕರೆತರುವ ಸಲುವಾಗಿ ದೇವನಾಥ್ ಹಡ್ಸನ್ ಸರ್ಕಲ್ ಬಳಿಗೆ ಹೋದರು. ಅಲ್ಲಿಂದ ಅವರು ಸೀದಾ ಆನಂದರಾವ್ ಸರ್ಕಲ್‌ಗೆ ಬಂದಿದ್ದಾರೆ. ಕೆಲಸದ ನಿಮಿತ್ತ ಮೂವರೂ ಲೋಕೋಪಯೋಗಿ ಇಲಾಖೆಯ ಒಳಹೊಕ್ಕಿದ್ದಾರೆ. ಬಳಿಕ ಹಿಂತಿರುಗಿ ಬಂದು ನೋಡುವಷ್ಟರಲ್ಲಿ ಕಾರಿನ ಗಾಜನನ್ನು ಹೊಡೆದ ಆಗಂತುಕರು ರು.20 ಲಕ್ಷಗಳನ್ನು ಮಂಗಮಾಯ ಮಾಡಿದ್ದರು.











Click it and Unblock the Notifications