ಸೂರ್ಯಗ್ರಹಣ ನಂತರ ಸರ್ಕಾರ ಪತನ: ರೇವಣ್ಣ
ಹಾಸನ,
ನ 26 : ಮುಂದಿನ ಸೂರ್ಯಗ್ರಹಣ(ಜನವರಿ, 2011ರಲ್ಲಿ ಸಂಭವಿಸುವ) ನಂತರ ಯಡಿಯೂರಪ್ಪ ಸರ್ಕಾರ ಪತನವಾಗಲಿದೆ. ಬಿಜೆಪಿಗೆ ಕೆಟ್ಟ ಕಾಲ ಆರಂಭವಾಗಲಿದೆ. ರಾಜ್ಯದಲ್ಲಿ ನಡೆಯುತ್ತಿರುವ ಅಕ್ರಮ ಭೂಹಗರಣ ಪ್ರಕರಣವನ್ನು ಸಕ್ರಮ ಮಾಡಲು ಬಿಜೆಪಿ ಹೈಕಮಾಂಡ್ ಸಿಎಂಗೆ ಉತ್ತೇಜನ ನೀಡಿದೆ ಎಂದು ಜೆಡಿಎಸ್ ನಾಯಕ ಎಚ್ ಡಿ ರೇವಣ್ಣ ಭವಿಷ್ಯ ನುಡಿದಿದ್ದಾರೆ. id="toptextpromo">ನಗರದಲ್ಲಿ
ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ರೇವಣ್ಣ, ಬಿಜೆಪಿಯ ಪ್ರಣಾಳಿಕೆಗೂ ತಾನು ನಡೆದುಕೊಳ್ಳುತ್ತಿರುವ ರೀತಿಗೂ ಒಂದಕ್ಕೊಂದು ಸಂಬಂಧವೇ ಇಲ್ಲ. ಮುಂದಿನ ಜಿಲ್ಲಾ ಮತ್ತು ತಾಲೂಕು ಪಂಚಾಯತಿ ಚುನಾವಣೆಯಲ್ಲಿ ಭ್ರಷ್ಟರಿಗೆ ಟಿಕೆಟ್ ನೀಡುತ್ತೇವೆ ಎಂದು ಬಿಜೆಪಿ ತನ್ನ ಪ್ರಣಾಳಿಕೆಯಲ್ಲಿ ಪ್ರಕಟಿಸಲಿ. ಭೂ ಹಗರಣ ಪ್ರಕರಣವನ್ನು ನಿವೃತ್ತ ನ್ಯಾಯಮೂರ್ತಿ ಆಯೋಗಕ್ಕೆ ವಹಿಸಿ, ಲೋಕಾಯುಕ್ತರನ್ನು ನಿರ್ಲಕ್ಷಿಸಿರುವುದಕ್ಕೆ ನಮ್ಮ ವಿರೋಧವಿದೆ ಮತ್ತು ಜೆಡಿಎಸ್ ಇದನ್ನು ಬಹಿಷ್ಕರಿಸುತ್ತದೆ ಎಂದು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ವಿವಿಧ
ಪ್ರಕರಣದ ಬಗ್ಗೆ ಮಾಹಿತಿ ನೀಡುವಂತೆ ಆಯೋಗಕ್ಕೆ 30 ಅರ್ಜಿ ಸಲ್ಲಿಸಿದ್ದೇನೆ. ಆದರೆ ಅಧಿಕಾರಿಗಳು ಮಾಹಿತಿ ನೀಡದೆ ಮುಖ್ಯಮಂತ್ರಿ ಕೈಗೊಂಬೆಯಾಗಿ ವರ್ತಿಸುತ್ತಿದ್ದಾರೆ. ನನ್ನ ಬಳಿಯೂ ಮಾಹಿತಿ ಲಭ್ಯವಿದೆ. ಸೂಕ್ತ ಸಮಯದಲ್ಲಿ ಇದನ್ನು ಬಿಡುಗಡೆ ಮಾಡುತ್ತೇನೆ. ನನ್ನ ಮುಖ ನೋಡಿ ಕಳೆದ ಚುನಾವಣೆಯಲ್ಲಿ ಜನ ಮತ ನೀಡಿದ್ದಾರೆ ಎನ್ನುವ ಮೂಲಕ ತನ್ನ ಪಕ್ಷದ ವರಿಷ್ಠರನ್ನು ಯಡಿಯೂರಪ್ಪ ಹೆದರಿಸಿದ್ದಾರೆ ಎಂದು ರೇವಣ್ಣ ಲೇವಡಿ ಮಾಡಿದರು.











Click it and Unblock the Notifications