ರಾಧಿಕಾ ಹೆಸರಲ್ಲಿ ಎಚ್ಡಿಕೆ ಅಕ್ರಮ ಆಸ್ತಿ : ಆರೋಪ
ಬೆಂಗಳೂರು,
ನ. 25 : ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ತಮ್ಮ ಎರಡನೇ ಪತ್ನಿ ಹೆಸರಿನಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಅಕ್ರಮ ಆಸ್ತಿ ಹೊಂದಿದ್ದಾರೆ ಎಂದು ದಕ ಜಿಲ್ಲಾ ಬಿಜೆಪಿ ಅಧ್ಯಕ್ಷ ಪದ್ಮನಾಭ ಕೊಟ್ಟಾರಿ ಆರೋಪಿಸಿದ್ದಾರೆ. id="toptextpromo">ಮಾಧ್ಯಮ
ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ನೈತಿಕತೆ ಬಗ್ಗೆ ಭಾರಿ ಮಾತನಾಡುವ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲೇ ರಾಧಿಕಾ ಕುಟುಂಬದವರು ದಕ ಜಿಲ್ಲೆಯಲ್ಲಿ ಆಸ್ತಿ ಮಾಡಿದ್ದಾರೆ. ಸುಮಾರು 20 ಕೋಟಿ ರುಪಾಯಿ ಮೌಲ್ಯದ ಜಾಗ ಹೊಂದಿರುವ ಮಾಹಿತಿಯೂ ಇದೆ. ರಾಧಿಕಾ ಕುಟುಂಬದವರಿಗೆ ಅಷ್ಟೊಂದು ಆಸ್ತಿ ಹೇಗೆ ಬಂತು? ಈ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅಗತ್ಯವಿದ್ದರೆ ಎಲ್ಲ ದಾಖಲೆ ಒದಗಿಸಲು ಬಿಜೆಪಿ ಸಿದ್ಧವಿದೆ ಎಂದು ಹೇಳಿದರು ಎಂದು ವಿಜಯ ಕರ್ನಾಟಕ ವರದಿ ಹೇಳಿದೆ. id='are-slot-1' class='oiad oi-axt oiadv'> id='top-searched-articles'>ಸರಕಾರದ
ವಿರುದ್ಧ ಸಮರ ಸಾರಿರುವ ಮಾಜಿ ಸಿಎಂ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರ ಭೂ ಹಗರಣಗಳನ್ನು ಒಂದೊಂದಾಗಿ ಹೊರಗೆಳೆದಿದ್ದರು. ಮುಖ್ಯವಾಗಿ ಡಿನೋಟಿಫೈ ಪ್ರಕರಣವನ್ನು ಎತ್ತಿಕೊಂಡು ಮುಖ್ಯಮಂತ್ರಿ ಅವರನ್ನು ವಜಾಗೊಳಿಸಲು ಸಾಕಷ್ಟು ಪ್ರಯತ್ನ ನಡೆಸಿದರು. ಆದರೆ, ಸ್ವಾಮೀಜಿಗಳ ಬೆಂಬಲಕ್ಕೆ ಮಣಿದಿರುವ ಬಿಜೆಪಿ ಹೈಕಮಾಂಡ್ ಮುಖ್ಯಮಂತ್ರಿಯಾಗಿ ಯಡಿಯೂರಪ್ಪ ಅವರನ್ನು ಮುಂದುವರಿಸಿದ್ದು ವಿಶೇಷವಾಗಿದೆ.











Click it and Unblock the Notifications