ಬ್ಲ್ಯಾಕ್ ಮೇಲರ್ ಯಡಿಯೂರಪ್ಪಗೆ ಧಿಕ್ಕಾರ: ಎಚ್ಡಿಕೆ

ಭ್ರಷ್ಟಾಚಾರ ಆರೋಪದಿಂದ ರೋಸಿ ಹೋಗಿರುವ ಮುಖ್ಯಮಂತ್ರಿ ಯಡಿಯೂರಪ್ಪ ಅಪ್ಪ - ಮಕ್ಕಳ ಬಣ್ಣ ಬಯಲು ಮಾಡುವುದಾಗಿ ಗುಡುಗಿದ್ದಕ್ಕೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ನಮ್ಮ ಬಣ್ಣ ಬಯಲು ಯಾರಿಂದಲೂ ಸಾಧ್ಯವಿಲ್ಲ. ಮುಖ್ಯಮಂತ್ರಿಗಳೇ ಪ್ರಾಕೃತಿಕವಾಗಿ ಹಾಗೂ ರಾಜಕೀಯವಾಗಿ ಬಣ್ಣ ಬದಲಾಯಿಸುತ್ತಾ ಇರುತ್ತಾರೆ ಎಂದು ತಿರುಗೇಟು ನೀಡಿದ್ದಾರೆ.
ಪಾಪ.... ಮುಖ್ಯಮಂತ್ರಿಗಳು ಉದ್ವೇಗಕ್ಕೆ ಒಳಗಾಗಿ ಮಾತನಾಡಿದ್ದಾರೆ. ನಮ್ಮ ಬಣ್ಣ ಬಯಲು ಮಾಡಲು ಅವರ ಹಣೆ ಬರಹದಲ್ಲಿ ಸಾಧ್ಯವಿಲ್ಲ. ನಮ್ಮ ಬಗ್ಗೆ ಏನಾದ್ರೂ ದಾಖಲೆ ಇದ್ದರೆ ಸಾರ್ವಜನಿಕವಾಗಿ ಇಡಲಿ. ಚರ್ಚೆಗೆ ಸಿದ್ಧ ಎಂದು ಈ ಸಂದರ್ಭದಲ್ಲಿ ಸವಾಲು ಹಾಕಿದರು.
ರಾಜ್ಯದಲ್ಲಿ ಜೆಡಿಎಸ್ ನಿರ್ನಾಮ ಮಾಡುತ್ತೇನೆ ಎಂದು ಶಪಥ ತೊಟ್ಟಿರುವ ಮುಖ್ಯಮಂತ್ರಿ ಯಡಿಯೂರಪ್ಪ ಕಾಂಗ್ರೆಸ್‌ನಿಂದ ರಕ್ಷಣೆ ಪಡೆಯುತ್ತಿದ್ದಾರೆ. ಒಂದು ವೇಳೆ ರಾಜೀನಾಮೆ ಕೊಡದೇ ಅಧಿಕಾರದಲ್ಲಿ ಮುಂದುವರೆದರೆ, ಸಂಸತ್ತಿನ ಒಳಗೆ ಹಾಗೂ ಹೊರಗೆ ತೀವ್ರ ಚಳವಳಿ ಹಾಗೂ ಪ್ರತಿಭಟನೆ ನಡೆಸುವುದಾಗಿ ಹೇಳಿದರು












Click it and Unblock the Notifications