ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಪಾಯ ಬಂದಾಗೆಲ್ಲ ಉಪಾಯದಿಂದ ಪಾರಾದ ಯಡ್ಡಿ

By * ಮೃತ್ಯುಂಜಯ ಕಲ್ಮಠ
|
Google Oneindia Kannada News

Yeddyurappa
ಬೆಂಗಳೂರು, ನ. 19 : ರಾಜ್ಯ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ವಾತಾವರಣ ಉಂಟಾಗಿದೆ. ಸ್ವತಃ ಮುಖ್ಯಮಂತ್ರಿ ಸೇರಿದಂತೆ ಸಂಪುಟ ಅನೇಕ ಸಚಿವರು ಭೂಗಳ್ಳತನ ನಡೆಸಿದ ಆರೋಪ ಹೊತ್ತಿದ್ದಾರೆ. ಡಿನೋಟಿಫಿಕೇಷನ್ ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪ ಮನೆ ಮಂದಿಗೆಲ್ಲಾ ಬೇಕಾಬಿಟ್ಟಿಯಾಗಿ ಸರಕಾರಿ ಭೂಮಿಯನ್ನು ಹಂಚಿಕೆ ಮಾಡಿ ಖೆಡ್ಡಾಕ್ಕೆ ಬಿದ್ದಿದ್ದಾರೆ.

ದಕ್ಷಿಣ ಭಾರತದ ಮೊದಲ ಬಿಜೆಪಿ ಸರಕಾರದ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಹಾಗೂ ಅಗ್ಗಳಿಕೆ ಹೊಂದಿರುವ ಯಡಿಯೂರಪ್ಪ ಈ ಎರಡೂವರೆ ವರ್ಷ ನಡೆದುಕೊಂಡ ಬಂದ ಹಾದಿ ಅಷ್ಟೂ ಸುಲಭವೇನಲ್ಲ. ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸ್ವಯಂಕೃತವಾಗಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ಯಡಿಯೂರಪ್ಪ ಅವರ ಮೇಲೆ ಭೂ-ಹಗರಣದ ಆರೋಪ ಬಂದಿರುವುದರಿಂದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುತ್ತಾರಾ ಎಂಬುದು ಕುತೂಹಲದ ಸಂಗತಿಯಾಗಿದೆ.

ಇದೇನೇ ಇರಲಿ, ಈ ಎರಡೂವರೆ ವರ್ಷಗಳಲ್ಲಿ ಮುಖ್ಯಮಂತ್ರಿಗಳು ನಡೆದುಕೊಂಡ ಬಂದ ದಾರಿಯನ್ನು ಇಲ್ಲಿ ಪಟ್ಟಿ ಮಾಡಲಾಗಿದೆ. 20/20 ಸರಕಾರದಿಂದ ಆರಂಭವಾದ ಯಡಿಯೂರಪ್ಪ ಅವರ ಸಮಸ್ಯೆಗಳು ಇದೀಗ ಅವರ ಕುರ್ಚಿಗೆ ಎಳ್ಳುನೀರು ಬಿಡುವ ಹಂತಕ್ಕೆ ಬಂದು ತಲುಪಿದೆ.

ಮುಖ್ಯಾಂಶಗಳು

* 20/20 ಸರಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಕುಮಾರಸ್ವಾಮಿ ಅವರ ಮುಗಿದ ನಂತರ ಯಡಿಯೂರಪ್ಪ ಅವರಿಗೆ ಅಧಿಕಾರ ನೀಡಬೇಕಿತ್ತು. ಆದರೆ, ದೇವೇಗೌಡರು ಷರತ್ತು ಮುಂದಿಟ್ಟಿದ್ದರಿಂದ ಅವಧಿಗೂ ಮುಂಚೆ ವಿಧಾನಸಭೆ ಚುನಾವಣೆಗೆ ಘೋಷಣೆ.
* ಜೆಡಿಎಸ್ ವಚನ ಭ್ರಷ್ಟತೆ, ಕಾಂಗ್ರೆಸ್ ದುರಾಡಳಿತ ಹೇಳಿಕೊಂಡ ರಾಜ್ಯಾದ್ಯಂತ ತಿರುಗಾಡಿದ ಯಡಿಯೂರಪ್ಪ ಅವರನ್ಮು ರಾಜ್ಯ ಮತದಾರ ಕೈಹಿಡಿದ.
* 2008ರಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಬಹುದೊಡ್ಡ ಪಕ್ಷವಾಗಿ ಹೊರಹೊಮ್ಮಿತು. 110 ಬಿಜೆಪಿ ಶಾಸಕರು ಆಯ್ಕೆ.
* ಸರಕಾರಕ್ಕೆ ಇನ್ನೂ ನಾಲ್ಕು ಶಾಸಕರ ಕಡಿಮೆ ಇದ್ದಾಗ ಪಕ್ಷೇತರ 5 ಮಂದಿ ಶಾಸಕರು ಸರಕಾರಕ್ಕೆ ಬೆಂಬಲ. ಬೆಂಬಲ ನೀಡಿದ ಪಕ್ಷೇತರರು ಸಚಿವ ಪಟ್ಟ.
* ಸರಕಾರ ಸುಭದ್ರಕ್ಕಾಗಿ ಆಪರೇಷನ್ ಕಮಲ ಶುರು. ಪ್ರತಿಪಕ್ಷದ ಶಾಸಕರನ್ನು ಕಾಂಚಾಣದ ಮೂಲಕ ಖರೀದಿ.
* ಮುಖ್ಯಮಂತ್ರಿ ಯಡಿಯೂರಪ್ಪ ಅವರ ಸಿಡಿಮಿಡಿ ಮತ್ತು ದುರಂಹಕಾರದ ವರ್ತನೆಗೆ ಮೊದಲ ಬಂಡಾಯ ಬಾವುಟ ಹಾರಿಸಿದ್ದು ಗಣಿಧಣಿಗಳಾದ ಬಳ್ಳಾರಿ ರೆಡ್ಡಿ ಸಹೋದರರು.
* 2009ರ ಅಕ್ಟೋಬರ್ ನಲ್ಲಿ ಸುಮಾರು 15 ದಿನಗಳ ಕಾಲ ಯಡಿಯೂರಪ್ಪ ವಿರುದ್ಧ ರೆಡ್ಡಿಗಳ ಸಮರ. ನಾಯಕತ್ವ ಬದಲಾವಣೆಗೆ ಪಟ್ಟು ಜೊತೆಗೆ ಶೋಭಾ ಕರಂದ್ಲಾಜೆ ಅವರನ್ನು ಸಂಪುಟದಿಂದ ಕೈಬಿಡಬೇಕು ಮತ್ತು ಕೆಲ ಅಧಿಕಾರಿಗಳನ್ನು ಎತ್ತಂಗಡಿ ಸೇರಿ ಹಲವು ಬೇಡಿಕೆ.
* ಬಿಜೆಪಿ ವರಿಷ್ಠರು ಮುಖ್ಯವಾಗಿ ಕೇಂದ್ರ ಪ್ರತಿಪಕ್ಷ ನಾಯಕಿ ಸುಷ್ಮಾ ಸ್ವರಾಜ್ ಅವರ ಮಧ್ಯೆ ಪ್ರವೇಶದಿಂದ ಬಂಡಾಯ ಶಮನ.
* ಸಂಪುಟದಿಂದ ಶೋಭಾ ಕರಂದ್ಲಾಜೆ ಔಟ್, ಸಿಎಂ ಆಪ್ತ ಕಾರ್ಯದರ್ಶಿ ವಿಪಿ ಬಳಿಗಾರ್ ಅವರ ವರ್ಗಾವಣೆ ಮೂಲಕ ಸಮರಕ್ಕೆ ಇತಿಶ್ರೀ. ಅಲ್ಲಿಗೆ ಯಡಿಯೂರಪ್ಪ ಅವರ ಕುರ್ಚಿಗೆ ಎದುರಾಗಿದ್ದ ಬಹುದೊಡ್ಡ ಗಂಡಾಂತರ ಪಾರು. ಮುಖ್ಯಮಂತ್ರಿ ಕುರ್ಚಿ ಉಳಿಸಿಕೊಳ್ಳುವಲ್ಲಿ ಯಡಿಯೂರಪ್ಪ ಸಫಲ. ಮೊದಲ ಪ್ರಯತ್ನದಲ್ಲಿ ಅವರಿಗೆ ಗೆಲುವು.
* ಆಪರೇಷನ್ ಕಮಲದ ಮೂಲಕ ಪಕ್ಷ ಸೇರಿದ್ದ ಶಾಸಕರನ್ನು ಬಿಜೆಪಿ ಮೂಲಕ ಗೆಲ್ಲಿಸಿಕೊಟ್ಟಿದ್ದು, ಅದರ ಜೊತೆಗೆ ಅಪಾಯವನ್ನು ತಂದುಕೊಂಡಿದ್ದು.
* ಅಬಕಾರಿ ಮಂತ್ರಿಯಾಗಿರುವ ಎಂಪಿ ರೇಣುಕಾಚಾರ್ಯ ಅವರಿಂದ ಬಂಡಾಯ. ಬಿಜೆಪಿ 20 ಶಾಸಕರೊಂದಿಗೆ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರಕಾರ ರಚಿಸಲು ನಡೆಸಿದ ಯತ್ನ. ಎಚ್ಚೆತ್ತುಕೊಂಡ ಮುಖ್ಯಮಂತ್ರಿ ಬ್ಲ್ಯಾಕ್ ಮೇಲ್ ತಂತ್ರಕ್ಕೆ ಮಣಿದು ರೇಣುಕಾಚಾರ್ಯಗೆ ಸಂಪುಟದಲ್ಲಿ ಮಂತ್ರಿ ಸ್ಥಾನ.
* 2010ರ ಸೆಪ್ಟೆಂಬರ್ ನಲ್ಲಿ ಸಂಪುಟ ಪುನಾರಚನೆ ಸೋಮಣ್ಣ, ಶೋಭಾ ಕರಂದ್ಲಾಜೆ, ಅನೇಕಲ್ ನಾರಾಯಣಸ್ವಾಮಿ, ವಿಜಯ್ ಶಂಕರ್ ಅವರಿಗೆ ಸಂಪುಟದಲ್ಲಿ ಸ್ಥಾನ. ಸಚಿವರಾದ ಶಿವನಗೌಡ ನಾಯಕ, ಅರವಿಂದ ಲಿಂಬಾವಳಿ ಮತ್ತು ಗೂಳಿಹಟ್ಟಿ ಶೇಖರ್ ಅವರಿಗೆ ಸಂಪುಟದಿಂದ ಕೊಕ್.
* ಕೆಐಎಡಿಬಿ ಹಗರಣದಲ್ಲಿ ಕಟ್ಟಾ ಸುಬ್ರಮಣ್ಯ ನಾಯ್ಡು ಹೆಸರು. ಸಾಕ್ಷಿ ನಾಶಕ್ಕೆ ಯತ್ನಿಸಿದ ಬಿಬಿಎಂಪಿ ಸದಸ್ಯ ಜಗದೀಶ್ ಕಟ್ಟಾ ಅವರು ಲೋಕಾಯುಕ್ತ ಪೊಲೀಸರು ಬಲೆಗೆ, ಪೊಲೀಸರಿಂದ ಬಂಧನ. ಜಾಮೀನ ಮೇಲೆ ಬಿಡುಗಡೆ. ಇದು ಕೂಡಾ ಯಡಿಯೂರಪ್ಪ ಅವರನ್ನು ತೀವ್ರ ಇಕ್ಕಟ್ಟಿಗೆ ಸಿಲುಕಿಸಿದ ಪ್ರಕರಣ.
* ಮತ್ತೆ ಪಕ್ಷದೊಳಗೆ ಬಂಡಾಯ ಶುರು. 2010 ರ ಅಕ್ಟೋಬರ್ ತಿಂಗಳು ರಾಜ್ಯದಲ್ಲಿ ರಾಜಕೀಯ ಮೇಲಾಟಗಳು.
* ಪಕ್ಷೇತರ 5 ಮಂದಿ ಶಾಸಕರು ಹಾಗೂ ಬಿಜೆಪಿ 11 ಶಾಸಕರು ನಾಯಕತ್ವ ವಿರುದ್ಧ ಬಂಡಾಯ. ಜೆಡಿಎಸ್ ಜೊತೆಗೆ ಕೈಜೋಡಣೆ. ಕಾಂಗ್ರೆಸ್ ಪರೋಕ್ಷ ಬೆಂಬಲ.
ಎಚ್ ಡಿ ಕುಮಾರಸ್ವಾಮಿ ಅವರು 16 ಮಂದಿ ಶಾಸಕರ ತಮ್ಮೊಂದಿಗಿಟ್ಟುಕೊಂಡು ಸರಕಾರ ಕೆಡವಲು ಪ್ರಯತ್ನ.
* ಸರಕಾರ ಬೀಳಿಸುವ ಉದ್ದೇಶದಿಂದ ಬಿಜೆಪಿ ಮತ್ತು ಪಕ್ಷೇತರ ಶಾಸಕರನ್ನು ಗೋವಾ ಮತ್ತು ಚೆನ್ನೈ ರೆಸಾರ್ಟ್ ಗೆ ರವಾನೆ.
* ರೆಸಾರ್ಟ್ ನಿಂದಲೇ ಸರಕಾರಕ್ಕೆ ನೀಡಿದ್ದ ಬೆಂಬಲ ವಾಪಸ್, ರಾಜ್ಯಪಾಲರಿಗೆ ಬಿಜೆಪಿ ಮತ್ತು ಪಕ್ಷೇತರ ಶಾಸಕರ ಪತ್ರ ರಾಜಭವನದ ಅಂಗಳಕ್ಕೆ.
* ರಾಜ್ಯಪಾಲರಿಂದ ವಿಶ್ವಾಸಯಾಚಿಸಲು ಯಡಿಯೂರಪ್ಪ ಅವರಿಗೆ ಸೂಚನೆ.
* ಅಕ್ಟೋಬರ್ 11 ರಂದು ತೀವ್ರ ಗದ್ದಲ, ಗೊಂದಲ ನಡುವೆ ಸರಕಾರದ ವಿಶ್ವಾಸಯಾಚನೆ ಮತ್ತು ಅದರಲ್ಲಿ ಗೆಲುವು.
* ಮಾಜಿ ಮಂತ್ರಿ ಗೂಳಿಹಟ್ಟಿ ಶೇಖರ್ ಅಂಗಿ ಹರಿದುಕೊಂಡು ಮಂಗನಂತೆ ಕುಣಿದಾಡಿದ್ದು. ಒಂದಡೆಯಾದರೆ, ಬಿಜೆಪಿ ಮತ್ತು ಪಕ್ಷೇತರ ಬಂಡಾಯ ಶಾಸಕರ ಹಾಗೂ ಪ್ರತಿಪಕ್ಷಗಳ ಶಾಸಕರು ಸರಕಾರ ಮತ್ತು ಮುಖ್ಯಮಂತ್ರಿ ವಿರುದ್ಧ ಕೀಳು ಪದ ಪ್ರಯೋಗ.
* ವಿಧಾನಸಭೆಗೆ ಮೊದಲ ಬಾರಿಗೆ ಖಾಕಿಧಾರಿಗಳ ಪ್ರವೇಶ. ಇದನ್ನು ವಿರೋಧಿಸಿ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಸರಕಾರದ ವಿರುದ್ಧ ಧರಣಿ.
* ವಿಪ್ ಉಲ್ಲಂಘಿಸಿದ ಆರೋಪದ ಮೇಲೆ 11 ಬಿಜೆಪಿ ಮತ್ತು 5 ಮಂದಿ ಪಕ್ಷೇತರ ಶಾಸಕರ ಶಾಸಕತ್ವ ಅನರ್ಹತೆಗೆ ಸರಕಾರದಿಂದ ಸ್ಪೀಕರ್ ಗೆ ಪತ್ರ. 16 ಮಂದಿ ಶಾಸಕರ ಶಾಸಕ ಸ್ಥಾನ ಅನರ್ಹ.
* ಕಾನೂನು ಪ್ರಕಾರ ವಿಶ್ವಾಸಮತ ಯಾಚಿಸಿಲ್ಲ ಎಂದು ಪ್ರತಿಪಕ್ಷಗಳು ರಾಜ್ಯಪಾಲರಿಗೆ ದೂರು. ಕೇವಲ ಮೂರೇ ದಿನದೊಳಗೆ ಮತ್ತೊಮ್ಮೆ ವಿಶ್ವಾಸಮತಯಾಚನೆಗೆ ಸರಕಾರಕ್ಕೆ ರಾಜ್ಯಪಾಲರ ಸೂಚನೆ.
* ಅ.14ರಂದು ನಡೆದ ಎರಡನೇ ವಿಶ್ವಾಸಮತದಲ್ಲಿ ಯಡಿಯೂರಪ್ಪ ನೇತೃತ್ವದ ಸರಕಾರಕ್ಕೆ ಗೆಲುವು. ಯಡಿಯೂರಪ್ಪ ಅವರಿಗೆ ಮತ್ತೊಮ್ಮೆ ಜಯಭೇರಿ.
ಅನರ್ಹಗೊಂಡಿರುವ ಶಾಸಕರು ಹೈಕೋರ್ಟ್ ಮೆಟ್ಟಿಲು ತುಳಿದರು.
* ವಿಚಾರಣೆ ನಡೆಸಿದ ಹೈಕೋರ್ಟ್ ಸ್ಪೀಕರ್ ಕ್ರಮ ಎತ್ತಿ ಹಿಡಿಯಿತು. 11 ಬಿಜೆಪಿ ಶಾಸಕರ ಅನರ್ಹತೆ ಸರಿ ಎಂದು ನ್ಯಾಯಾಲಯ ಘೋಷಣೆ.
ಪಕ್ಷೇತರ ಶಾಸಕರ ಶಾಸಕ ಸ್ಥಾನದ ಕುರಿತು ವಿಚಾರಣೆ ಇನ್ನೂ ಮುಂದುವರೆದಿದೆ.
* ಇದೀಗ ಮುಖ್ಯಮಂತ್ರಿ ಡಿನೋಟಿಫಿಕೇಷನ್ ಹಗರಣದಲ್ಲಿ ಭಾಗಿ. ಕುಟುಂಬ ಸದಸ್ಯರಿಗೆ ಕೋಟ್ಯಂತರ ರುಪಾಯಿ ಬೆಲೆ ಬಾಳುವ ಭೂಮಿ ನೀಡಿರುವುದು. ಸ್ವಜನ ಪಕ್ಷಪಾತ ನಡೆಸಿರುವ ಆರೋಪ. ಸುಮಾರು 5000 ಕೋಟಿ ರುಪಾಯಿ ನಷ್ಟ ಎಂಬ ಅಂದಾಜು. ಮುಖ್ಯಮಂತ್ರಿ ತಲೆದಂಡಕ್ಕೆ ಸಿದ್ಧತೆ. ನ.25ಕ್ಕೆ ಬೆಂಗಳೂರಿಗೆ ವರಿಷ್ಠರ ಆಗಮನ.

English summary
Karnataka Gods and goddesses, saints and seers, astrologers and angels together have conspired to save Karnataka Chief Minister BS Yeddyrappa from evil forces. But for the almightys intervention BSY would not have escaped from several onslaughts challenging his chief ministership. Read the sensational mile stones (pit falls) of Chief ministers 2.5 year tumultuous term "BSY Great Escapes".
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X