ಸುದರ್ಶನ್ ರಾಷ್ಟ್ರದ ಕ್ಷಮೆ ಕೇಳಲಿ : ಲಾಲು

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಸುದರ್ಶನ್ ಹೇಳಿಕೆ ಖಂಡನೀಯ. ಟೀಕಿಸುವುದಕ್ಕೆ ವಿರೋಧವಿಲ್ಲ. ಆದರೆ, ಇಂತಹ ಕೀಳು ಅಭಿರುಚಿಯ ಆರೋಪಗಳು ಸರಿಯಲ್ಲ. ಇದರಿಂದ ದೇಶದಲ್ಲಿ ಅಶಾಂತಿ ಉಂಟಾಗಲು ಕಾರಣವಾಗುತ್ತದೆ. ಹೀಗಾಗಿ ಸುದರ್ಶನ್ ಕೂಡಲೇ ದೇಶದ ಕ್ಷಮೆ ಕೇಳಬೇಕು ಎಂದು ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಶಿಸ್ತಿನ ಸಂಘಟನೆ ಎಂದೇ ಹೆಸರುವಾಸಿಯಾಗಿರುವ ಆರೆಸ್ಸೆಸ್ ನಲ್ಲಿ ಅಶಿಸ್ತು ಮನೆ ಮಾಡಿದೆ. ಈ ಹಿಂದೆ ಅಧ್ಯಕ್ಷರಾಗಿದ್ದ ಸಂಘಟದ ಅಧ್ಯಕ್ಷರೆ ವಿರೋಧಿ ಪಕ್ಷದ ನಾಯಕರಿಗೆ ಮನಸ್ಸಿಗೆ ಬಂದಂತೆ ಟೀಕೆ ಮಾಡುವುದು ಎಲ್ಲಿಯ ಶಿಸ್ತು. ಸುದರ್ಶನ ಹೇಳಿಕೆ ಸಮರ್ಥಿನಿಯವಲ್ಲ. ಇದರಿಂದ ಅವರು ಕೂಡಲೇ ದೇಶದ ಕ್ಷಮೆ ಯಾಚಿಸಬೇಕು ಎಂದು ಲಾಲು ಆಗ್ರಹಿಸಿದ್ದಾರೆ.
ಸೋನಿಯಾ ಗಾಂಧಿ ಅಮೆರಿಕದ ಏಜಂಟ್, ಮಾಜಿ ಪ್ರಧಾನಮಂತ್ರಿಗಳಾದ ಇಂದಿರಾ ಗಾಂಧಿ, ರಾಜೀವ ಗಾಂಧಿ ಅವರ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಸುದರ್ಶನ್ ಭೋಪಾಲ್ ನಲ್ಲಿ ಮಾಧ್ಯಮಗಳಿಗೆ ವಿವರಿಸಿದ್ದರು.












Click it and Unblock the Notifications