ನ.3 ರಂದು ಸಂಪುಟ ವಿಸ್ತರಣೆ : ಯಡಿಯೂರಪ್ಪ

ಕಳೆದ ಬಾರಿ ಸಂಪುಟ ವಿಸ್ತರಣೆಯ ವೇಳೆ ಭುಗಿಲೆದ್ದ ಬಂಡಾಯದ ಬೇಗೆ ಸರಕಾರವನ್ನು ಪತನಗೊಳಿಸುವತ್ತ ಸಾಗಿತ್ತು. ಈ ಸಂದರ್ಭದಲ್ಲಿ ಇಲ್ಲಸಲ್ಲದ ಕಸರತ್ತು ನಡೆಸಿದ ಮುಖ್ಯಮಂತ್ರಿ ಯಡಿಯೂರಪ್ಪ ಕೊನೆಗೂ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಖಾಲಿ ಇರುವ 6 ಸ್ಥಾನಗಳನ್ನು ಭರ್ತಿ ಮಾಡಲು ಸರಕಾರ ಇದೀಗ ಮುಂದಾಗಿದೆ.
ಸರಕಾರ ಇಕ್ಕಟ್ಟಿಗೆ ಸಿಲುಕಿದ್ದಾಗ ಸರಕಾರಕ್ಕೆ ಸಾಥ್ ನೀಡಿದ್ದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್, ರಾಜೂಗೌಡರಿಗೆ ಈಗಾಗಲೇ ಸಂಪುಟದಲ್ಲಿ ಸ್ಥಾನ ನೀಡಲು ಯಡಿಯೂರಪ್ಪ ನಿರ್ಧರಿಸಿದ್ದು, ಉಳಿದಂತೆ ಸಂಭವನೀಯರ ಪಟ್ಟಿಯಲ್ಲಿ ಸಿ.ಟಿ.ರವಿ, ಅಪ್ಪಚ್ಚು ರಂಜನ್, ಸೊಗಡು ಶಿವಣ್ಣ ಹಾಗೂ ಅಪ್ಪುಪಟ್ಟಣ ಶೆಟ್ಟಿಯವರ ಹೆಸರು ಕೇಳಿ ಬರುತ್ತಿವೆ. ಚಿಕ್ಕಮಗಳೂರು ಜಿಲ್ಲೆಯ ಸಿ.ಟಿ.ರವಿ ಅಥವಾ ಜೀವರಾಜ್‌ರಲ್ಲಿ ಒಬ್ಬರು ಸಚಿವರಾಗಿ ಆಯ್ಕೆಯಾಗುವುದು ಖಚಿತವಾಗಿದೆ.
ನ.3 ಕ್ಕೆ ಸಂಪುಟ ವಿಸ್ತರಣೆ : ಚಿಕ್ಕಬಳ್ಳಾಪುರದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ವರಿಷ್ಠರೊಂದಿಗೆ ಚರ್ಚಿಸಿ ನ.3ರಂದು ಸಂಪುಟ ವಿಸ್ತರಣೆ ಮಾಡಲಾಗುವುದು ಎಂದು ಹೇಳಿದ್ದಾರೆ.











Click it and Unblock the Notifications