ನಾಗ್ಪುರ ವೈದ್ಯೆ ಮೇಲೆ ಸಾಮೂಹಿಕ ಅತ್ಯಾಚಾರ

ನಂಬಿಸಿ ಮೋಸ ಮಾಡಿದ ದುರುಳರು: ಗಂಡ ಮತ್ತು ಮಕ್ಕಳಿಂದ ದೂರವಿರುವ ವೈದ್ಯೆ ಮಾನಸಿಕ ನೆಮ್ಮದಿ ಹುಡುಕುವ ಸಮಯದಲ್ಲಿ ಸಿಕ್ಕವನೇ ನಕಲಿ ಆಧ್ಯಾತ್ಮಿಕ ಸಲಹೆಗಾರ ಅಬ್ದುಲ್ ಮನ್ನನ್. ಆತನ ಮಾತುಗಳಿಂದ ಮಾನಸಿಕ ಸಂಕಟಗಳು ಮುಕ್ತವಾಗುತ್ತದೆ ಎಂಬ ನಂಬಿಕೆಯಿಂದ ಆತನ ಮಾರ್ಗದರ್ಶನದಲ್ಲೇ ಕೆಲ ದಿನಗಳ ಕಾಲ ಸಾಗುತ್ತಾಳೆ.
ಹೀಗೆ ಮುಂಬೈನ ಹೋಟೆಲ್ ವೊಂದರಲ್ಲಿ ಆಕೆಯನ್ನು ಕರೆಸಿಕೊಂಡ ಮನ್ನನ್, ಆಕೆಗೆ ಮಾದಕಪೇಯ ನೀಡುತ್ತಾನೆ. ಆಕೆಗೆ ಮತ್ತೇರಿದ ಮೇಲೆ ಅತ್ಯಾಚಾರವೆಸಗುತ್ತಾನೆ. ನಂತರ ಆತನ ನಾಲ್ವರು ಪುತ್ರರೂ ಮತ್ತು ಇತರ ಮೂವರು ಸೇರಿ ಸಾಮೂಹಿಕವಾಗಿ ಅತ್ಯಾಚಾರ ಎಸೆಗಿರುತ್ತಾರೆ ಎಂಬುದು ದೂರಿನಲ್ಲಿ ಹೇಳಲಾಗಿದೆ.
ಈ ದುಷ್ಕೃತ್ಯಕ್ಕೆ ಮನ್ನನ್ ಸೊಸೆ ಕೂಡಾ ಸಹಕರಿಸಿದ್ದಾಳೆ. ಅತ್ಯಾಚಾರದ ದೃಶ್ಯಗಳ ಫೋಟೊಗಳನ್ನು ಹಿಡಿದುಕೊಂಡು ವೈದ್ಯೆಯನ್ನು ನಿರಂತರವಾಗಿ ಶೋಷಣೆಗೆ ಒಳಪಡಿಸುತ್ತಾ ಬಂದಿರುತ್ತಾರೆ. ಇವರ ಬ್ಲ್ಯಾಕ್ ಮೇಲ್ ಬಲೆಗೆ ಬಿದ್ದ ವೈದ್ಯೆ ಸುಮಾರು 6.5 ಲಕ್ಷ ರೂ. ಹಣ ನೀಡಿರುತ್ತಾಳೆ. ಆದರೆ, ಮನ್ನನ್ ಕುಟುಂಬದ ಕಾಟ ಅತಿಯಾದಾಗ ವಿಧಿಯಿಲ್ಲದೆ ಪೊಲೀಸರ ಮೊರೆ ಹೊಕ್ಕಿದ್ದಾಳೆ. ಗಿಟ್ಟಿಖಾದನ್ ಪೊಲೀಸ್ ಠಾಣೆ ಪೊಲೀಸರು ಅತ್ಯಾಚಾರ ಹಾಗೂ ಬ್ಲ್ಯಾಕ್ ಮೇಲ್ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ವಿಚಾರಣೆ ಮುಂದುವರೆದಿದೆ.
ವಿಡಿಯೋಗಳು:.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡು |
ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications