ಬೋಪಯ್ಯಗೆ ಏಕೆ ಡಬ್ಬಲ್ ಸಂಬಳ: ರೇವಣ್ಣ

HD Revanna
ಬೆಂಗಳೂರು, ಅ.26: ವಿಧಾನಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಬಿಜೆಪಿ ಪಕ್ಷಪಾತಿ ಎಂದು ಜರೆಯುತ್ತಿದ್ದ ಜೆಡಿಎಸ್ ಶಾಸಕಾಂಗಸಭೆಯ ನಾಯಕ ಎಚ್.ಡಿ.ರೇವಣ್ಣ, ಸೋಮವಾರ ಸಭಾಧ್ಯಕ್ಷರ ಸಂಬಳ ಇದ್ದಕ್ಕಿಂದ್ದತೆ ಡಬಲ್ ಆಗಿರುವ ಬಗ್ಗೆ ಸಂಶಯ ವ್ಯಕ್ತಪಡಿಸಿದರು. ಹೆಚ್ಚುವರಿ ಸಂಬಳದ ಲಾಭ ಪಡೆದು ವಂಚಿಸುತ್ತಿದ್ದಾರೆ ಎಂದು ಗಂಭೀರ ಆರೋಪ ಮಾಡಿ, ಈ ಕುರಿತು ಮಾಹಿತಿ ಹಕ್ಕು ಕಾಯಿದೆ ಸೌಲಭ್ಯ(‍RTI)ದ ಸಂಗ್ರಹಿಸಿದ್ದ ದಾಖಲೆಗಳನ್ನು ಮಾಧ್ಯಮದ ಮುಂದೆ ಪ್ರದರ್ಶಿಸಿದರು.

ಆದರೆ, ರೇವಣ್ಣ ಅವರ ಆರೋಪವನ್ನು ಸ್ಪಷ್ಟವಾಗಿ ತಳ್ಳಿಹಾಕಿರುವ ವಿಧಾನಸಭಾಧ್ಯಕ್ಷ ಕೆ.ಜಿ. ಬೋಪಯ್ಯ, ತಮ್ಮ ಮೇಲಿನ ಆರೋಪಗಳು ಸುಳ್ಳು. ಅವರಷ್ಟು ಕೀಳುಮಟ್ಟಿಗೆ ಇಳಿದು ನಾನು ಪ್ರತಿಕ್ರಿಯಿಸಲಾರೆ. ಕರ್ನಾಟಕದಲ್ಲಿ ಅಪ್ಪ ಮಕ್ಕಳು ಮಾತ್ರ ಸತ್ಯ ಹರಿಶ್ಚಂದ್ರರು ಎಂದು ಪ್ರತಿಬಿಂಬಿಸಲು ಹೊರಟಂತಿದೆ. ಮೊದಲು ರೇವಣ್ಣ ಆರೋಪವನ್ನು ಸಾಬೀತು ಪಡಿಸಲಿ ಎಂದು ಹೇಳಿದರು.

ವಜಾಕ್ಕೆ ಆಗ್ರಹ : ವಿಧಾನಸಭಾಧ್ಯಕ್ಷರಾಗಿ ಎರಡು ಬಂಗಲೆಗಳನ್ನು ಹೊಂದಿರುವ ಕೆ.ಜಿ. ಬೋಪಯ್ಯ ಅಧ್ಯಕ್ಷ, ಉಪಾಧ್ಯಕ್ಷರ ಹೆಸರಿನಲ್ಲೂ ಸರಕಾರದಿಂದ ಮನೆಬಾಡಿಗೆ ಸೇರಿದಂತೆ ಹಲವು ಭತ್ಯೆಗಳನ್ನು ಪಡೆದು ಸರಕಾರಕ್ಕೆ ವಂಚಿಸುತ್ತಿದ್ದಾರೆ. ಈ ರೀತಿಯಾಗಿ ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡ ಸಭಾಧ್ಯಕ್ಷರ ವಿರುದ್ಧ ಲೋಕಾಯುಕ್ತರು ಸ್ವಯಂ ಪ್ರೇರಣೆಯಿಂದ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ತನಿಖೆ ನಡೆಸಬೇಕು ಎಂದು ರೇವಣ್ಣ ಒತ್ತಾಯಿಸಿದರು.

ಅಧ್ಯಕ್ಷ-ಉಪಾಧ್ಯಕ್ಷರ ವೇತನ: 2009ರ ನವಂಬರ್‌ನಲ್ಲಿ ವಿಧಾನಸಭಾಧ್ಯಕ್ಷರಾಗಿದ್ದ ಜಗದೀಶ್ ಶೆಟ್ಟರ್ ರಾಜೀನಾಮೆ ನೀಡಿದ್ದರು. ಅಂದಿನಿಂದ ಹಂಗಾಮಿ ಸಭಾಧ್ಯಕ್ಷರಾಗಿದ್ದ ಬೋಪಯ್ಯ ನವೆಂಬರ್ ಮತ್ತು ಡಿಸೆಂಬರ್ ತಿಂಗಳ ಅಧ್ಯಕ್ಷ-ಉಪಾಧ್ಯಕ್ಷರ ಎರಡೂ ಹುದ್ದೆಗಳ ತಲಾ 20 ಸಾವಿರ ವೇತನವನ್ನು ಪಡೆದಿದ್ದಾರೆ.

ಬೆಂಗಳೂರಿನ ಶಾಸಕರ ಭವನದಲ್ಲಿ ಅತೀ ಗಣ್ಯರಿಗೆ ಮೀಸಲಾದ 440 ಹಾಗೂ 224ನೆ ಸಂಖ್ಯೆಯ ನಿವಾಸಗಳನ್ನು ಹೊಂದಿರುವ ಕೆ.ಜಿ.ಬೋಪಯ್ಯ ಎರಡು ತಿಂಗಳ ಕಾಲ ಕಾನೂನು ಬಾಹಿರವಾಗಿ ಸರಕಾರದಿಂದ ತಲಾ 40 ಸಾವಿರ ರೂ. ಹಣವನ್ನು ಬಾಡಿಗೆ ರೂಪದಲ್ಲಿ ಪಡೆದಿದ್ದಾರೆ ಎಂದು ರೇವಣ್ಣ ಆರೋಪಿಸಿದರು.

ದಿನದ 24 ಗಂಟೆಗಳ ಕಾಲ ತಮ್ಮ ಕಚೇರಿಯಲ್ಲಿಯೇ ಇದ್ದು, ರಾತ್ರಿ ವೇಳೆ ವಿಪಕ್ಷ ಶಾಸಕರಿಂದ ರಾಜೀನಾಮೆ ಪಡೆದು ವಾಮಮಾರ್ಗ ಅನುಸರಿಸುತ್ತಿರುವ ಬೋಪಯ್ಯ, ವಿಧಾನಸಭೆಯ ಕಾರ್ಯದರ್ಶಿಗಳಿಂದ ರಾಜೀನಾಮೆ ಪತ್ರ ತರಿಸಿಕೊಳ್ಳುವುದು ಇದೀಗ ಗುಟ್ಟಾಗಿ ಉಳಿದಿಲ್ಲ. ಸರ್ಕಾರದ ಕೈಗೊಂಬೆಯಂತೆ ವರ್ತಿಸುತ್ತಿರುವ ಬೋಪಯ್ಯ ಅವರನ್ನು ರಾಜ್ಯಪಾಲರು ವಜಾಗೊಳಿಸಬೇಕು ಎಂದು ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.


ವಿಡಿಯೋಗಳು:
.ದೇವೇಗೌಡ ಆಧುನಿಕ ಭಸ್ಮಾಸುರ: ಬಚ್ಚೇಗೌಡ | ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು |

ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ | ಟ್ವಿಟ್ಟರಲ್ಲಿ ಹಿಂಬಾಲಿಸಿ | ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಸುದ್ದಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+