ಲಿಫ್ಟಲ್ಲಿ ಸಿಲುಕಿ ಜೆಪಿನಗರದಲ್ಲಿ ಪುಟ್ಟ ಕಂದಮ್ಮನ ಬಲಿ

ಮೃತಪಟ್ಟ ಲಕ್ಷ್ಮಿಯನ್ನು ಸಾಯಿರಾಮ್ ಸಂಧ್ಯಾ ಅಪಾರ್ಟ್ಮೆಂಟ್ ನ ಸೆಕ್ಯೂರಿಟಿ ಗಾರ್ಡ್ ದೀಪೇಂದ್ರ ಎಂಬುವರ ಮಗಳು ಎಂದು ಗುರುತಿಸಲಾಗಿದೆ. ಪೋಷಕರ ಅಜಾಗರೂಕತೆ ಮಗುವಿನ ಸಾವಿಗೆ ಕಾರಣ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.
ನಿನ್ನೆ ರಾತ್ರಿ ಲಿಫ್ಟ್ ನಲ್ಲಿ ಮಗು ಆಟವಾಡುತ್ತಿದ್ದಳು, ಲಿಫ್ಟ್ ಮೇಲೆ ಕೆಳಗೆ ಹೋಗಿ ಬರುತ್ತಿತ್ತು. ಈ ಸಂದರ್ಭದಲ್ಲಿ ಲಿಫ್ಟ್ ಬಾಗಿಲುಗಳು ಮುಚ್ಚಿಕೊಳ್ಳುವಾಗ ಮಗುವಿನ ತಲೆ ಲಿಫ್ಟ್ ನ ಬಾಗಿಲುಗಳ ಮಧ್ಯೆ ಸಿಲುಕಿಕೊಂಡಿತ್ತು.ತೀವ್ರ ಗಾಯಗೊಂಡ ಮಗುವನ್ನು ಸಮೀಪದ ರಾಜಶೇಖರ್ ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಮಾರ್ಗ ಮಧ್ಯದಲ್ಲೇ ಮಗು ಸಾವನ್ನಪ್ಪಿತು. ಈ ಬಗ್ಗೆ ಪ್ರಕರಣವನ್ನು ದಾಖಲಿಸಿಕೊಂಡಿರುವ ಜೆಪಿ ನಗರ ಪೊಲೀಸರು ತನಿಖೆ ನಡೆಸಿದ್ದಾರೆ.
ವಿಡಿಯೋಗಳು:.ಖೆಡ್ಡಾಕ್ಕೆ ಬಿದ್ದ ಬಿಜೆಪಿ ಶಾಸಕ ಸುರೇಶ್ ಗೌಡ |ಶಾಸಕನಿಗೆ ಡಿಮ್ಯಾಂಡಪ್ಪೋ ಡಿಮ್ಯಾಂಡು | ರಿಂಗ ರಿಂಗಾ ಪಾಲಿಟಿಕ್ಸ್ ರಿಮಿಕ್ಸ್ |
ಟ್ವಿಟ್ಟರಲ್ಲಿ ನಮ್ಮನ್ನು ಹಿಂಬಾಲಿಸಿ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಕನ್ನಡ ಸುದ್ದಿಗಳ SMS












Click it and Unblock the Notifications