ಭಾರತದ ನಕಲಿ ನೋಟು ಪಾಕ್ ನಲ್ಲಿ ತಯಾರಿಕೆ
ಪಾಟ್ನಾ,
ಅ. 25 : ಪಾಕಿಸ್ತಾನ ಅಕ್ರಮವಾಗಿ ನಕಲಿ ನೋಟುಗಳನ್ನು ಭಾರತದೊಳಗೆ ಚಲಾವಣೆ ಮಾಡುತ್ತಿರುವುದರಿಂದ ಜರ್ಮನಿಯಿಂದ ರಫ್ತಾಗುತ್ತಿರುವ ಪೇಪರ್ ಮತ್ತು ಇಂಕ್ ನ್ನು ನಿಲ್ಲಿಸುವಂತೆ ಜರ್ಮನಿಗೆ ಮನವಿ ಮಾಡಿಕೊಳ್ಳಬೇಕು ಎಂದು ಬಿಜೆಪಿ ನಾಯಕ ರಾಜನಾಥ್ ಸಿಂಗ್ ಕೇಂದ್ರ ಸರಕಾರವನ್ನು ಆಗ್ರಹಿಸಿದ್ದಾರೆ. id="toptextpromo">ವಿಧಾನಸಭೆ
ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ಅವರು, ಪಾಕಿಸ್ತಾನದ ಕ್ವಿಟ್ಟಾದಲ್ಲಿರುವ ಕಂಪನಿಯೊಂದು ಭಾರತದ ನಕಲಿ ನೋಟುಗಳನ್ನು ತಯಾರಿಸಿ ನೇಪಾಳ ಮೂಲಕ ಭಾರತದೊಳಗೆ ಚಲಾವಣೆ ಮಾಡುವ ಹುನ್ನಾರ ನಡೆಸಿದೆ. ಈ ಬಗ್ಗೆ ಈಗಾಗಲೇ ಅನೇಕ ಸಾರಿ ಪತ್ರಿಕೆಗಳಲ್ಲಿ ವರದಿಯೂ ಆಗಿದೆ. ಹೀಗಿರುವಾಗ. ಪಾಕಿಸ್ತಾನಕ್ಕೆ ಪೇಪರ್ ಮತ್ತು ಇಂಕ್ ರಫ್ತನ್ನು ಸ್ಥಗಿತಗೊಳಿಸುವಂತೆ ಜರ್ಮನಿಗೆ ಕೇಂದ್ರ ಮನವಿ ಮಾಡಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಪಾಕಿಸ್ತಾನದಲ್ಲಿ
ಭಾರತದ ನಕಲಿ ನೋಟುಗಳು ತಯಾರಿಕೆ ನಡೆಯುತ್ತಿದ್ದರೂ ಕೇಂದ್ರ ಸರಕಾರ ಸುಮ್ಮನೆ ಕುಳಿತಿದೆ. ಕೇಂದ್ರ ವಿದೇಶಾಂಗ ಇಲಾಖೆ ನಿಷ್ಕ್ರಿಯಗೊಂಡಿದೆ. ಸರಕಾರದ ಈ ನಿರ್ಲಕ್ಷ್ಯ ಧೋರಣೆಯಿಂದ ಬೆಲೆ ತೆರುವ ಕಾಲ ದೂರವಿಲ್ಲ ಎಂದು ರಾಜನಾಥ್ ಸಿಂಗ್ ಎಚ್ಚರಿಸಿದರು.











Click it and Unblock the Notifications