ಮುಂದುವರೆದ ಅಧಿಕಾರಿಗಳ ವರ್ಗಾವಣೆ ಪರ್ವ

Pankaj Kumar Pandey
ಬೆಂಗಳೂರು, ಅ. 21: ಆಡಳಿತ ಯಂತ್ರದ ಸರ್ಜರಿ ಜೊತೆಗೆ ಅಧಿಕಾರಿ ವರ್ಗಕ್ಕೂ ಸರ್ಜರಿ ಆರಂಭಿಸಿರುವ ರಾಜ್ಯಸರ್ಕಾರ, ವರ್ಗಾವಣೆ ಪರ್ವವನ್ನು ಮುಂದುವರೆಸಿದ್ದು, 18 ಐಎಎಸ್ ಹಾಗೂ 7 ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಸಿಎಂ ಕಚೇರಿಯಿಂದಲೇ ಬದಲಾವಣೆಗಳು ಆರಂಭವಾಗಿದ್ದು, ಶಿವಮೊಗ್ಗ ಜಿಲ್ಲಾಧಿಕಾರಿಯಾಗಿದ್ದ ಪಂಕಜ್ ಕುಮಾರ್ ಪಾಂಡೆ ಅವರನ್ನು ಸಿಎಂ ಜಂಟಿ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.

ಕಾರ್ಯದರ್ಶಿಯಾಗಿದ್ದ ಲಕ್ಷ್ಮಿ ನಾರಾಯಣ ಅವರಿಗೆ ವಸತಿ ಇಲಾಖೆ ಕಾರ್ಯದರ್ಶಿಯಾಗಿ ಹೆಚ್ಚುವರಿ ಜವಾಬ್ದಾರಿಯನ್ನು ನೀಡಲಾಗಿದೆ. ಸಿಎಂ ಜಂಟಿ ಕಾರ್ಯದರ್ಶಿಯಾಗಿದ್ದ ಬಿ.ಜಿ. ನಂದಕುಮಾರ್ ಅವರನ್ನು ಧಾರ್ಮಿಕ ಹಾಗೂ ದತ್ತಿ ಇಲಾಖೆ ಆಯುಕ್ತರ ಹುದ್ದೆ ನೀಡಿ ವರ್ಗಾವಣೆ ಮಾಡಲಾಗಿದೆ. ಎಸ್ ಪ್ರಭು ಅವರು ಪ್ರಧಾನ AG ಆಗಿ ಅಧಿಕಾರವಹಿಸಿಕೊಂಡಿದ್ದಾರೆ. (A&E)

ವರ್ಗಾವಣೆಗೊಂಡ ಅಧಿಕಾರಿಗಳ ಪಟ್ಟಿ ಇಂತಿದೆ:

1. ರಾಘವನ್ ಸುರೇಶ್: ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ವಿಶೇಷಾಧಿಕಾರಿ.,
2. ಬೆವಿಸ್ ಎ.ಕೌಟಿನ್ ಹೋ: ಅಧ್ಯಕ್ಷರು, ನಗರಾಭಿವೃದ್ಧಿ ಮತ್ತು ಆರ್ಥಿಕ ನಿಗಮ, ಬೆಂಗಳೂರು.
3. ಡಾ.ಎಸ್.ಎಂ.ಜಾಮ್‌ದಾರ್: ಮುಖ್ಯಸ್ಥರು,ಬೆಂಗಳೂರು ಮಹಾನಗರ ಅಭಿವೃದ್ಧಿ ಪ್ರಾಧಿಕಾರ ಮತ್ತು ಪ್ರಭಾರಿ ಸಿಎಂಡಿ, ಕರ್ನಾಟಕ ಸಾರ್ವಜನಿಕ ಸ್ವತ್ತುಗಳ ನಿಗಮ.
4. ಯೋಗೇಂದ್ರ ತ್ರಿಪಾಠಿ: ವ್ಯವಸ್ಥಾ ಪಕ ನಿರ್ದೇಶಕರು, ಕರ್ನಾಟಕ ವಿದ್ಯುತ್ ನಿಗಮ ನಿಯಮಿತ, ಬೆಂಗಳೂರು., 5. ವಂದಿತಾ ಶರ್ಮಾ: ಸರ್ಕಾರದ ಕಾರ್ಯದರ್ಶಿ, ತೋಟಗಾರಿಕೆ ಇಲಾಖೆ. ಪ್ರಧಾನ ಕಾರ್ಯದರ್ಶಿ ಆಹಾರ ಸಂಸ್ಕರಣೆ ಹಾಗೂ ಬೆಳೆ ತಂತ್ರಜ್ಞಾನ ಇಲಾಖೆ
6. ಸಂದೀಪ್ ದವೆ: ವ್ಯವಸ್ಥಾಪಕ ನಿರ್ದೇಶಕ, ರಾಜ್ಯ ಕೈಗಾರಿಕಾ ಹೂಡಿಕೆ ಹಾಗೂ ಅಭಿವೃದ್ಧಿ ನಿಗಮ, ಬೆಂಗಳೂರು.,
7. ಡಾ.ಎನ್.ನಾಗಾಂಬಿಕಾ ದೇವಿ: ಆಯುಕ್ತರು, ರೇಷ್ಮೆ ಅಭಿವೃದ್ಧಿ ಮಂಡಳಿ, ಬೆಂಗಳೂರು.,
8. ಜಿ.ವಿ.ಕೊಂಗವಾಡ: ವ್ಯವಸ್ಥಾಪಕ ನಿರ್ದೇಶಕರು, ರಾಜ್ಯ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಬೆಂಗಳೂರು.
9. ಎಸ್.ಜಿ.ಹೆಗಡೆ: ರಿಜಿಸ್ಟ್ರಾರ್, ಕೋ-ಆಪರೇ ಟಿವ್ ಸೊಸೈಟಿಸ್, ಬೆಂಗಳೂರು.,
10. ಜಿ.ಎಲ್.ಚಂದ್ರಶೇಖರಯ್ಯ: ನಿರ್ದೇಶಕರು, ಗ್ರಾಮೀಣಾಭಿವೃದ್ಧಿ ಹಾಗೂ ಸರ್ಕಾರ ಜಂಟಿ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆ, ಬೆಂಗಳೂರು.
11. ಎಚ್.ಆರ್.ಶ್ರೀನಿವಾಸ: ನಿರ್ದೇಶಕರು, ಗಣಿ ಮತ್ತು ಭೂ ವಿಜ್ಞಾನ ಇಲಾಖೆ, ಬೆಂಗಳೂರು.,
12. ಪಿ.ಮಣಿವಣ್ಣನ್: ವ್ಯವಸ್ಥಾಪಕ ನಿರ್ದೇಶಕರು, ಬೆಸ್ಕಾಂ, ಬೆಂಗಳೂರು.,
13. ಎಂ.ಇ.ಶಿವಲಿಂಗಮೂರ್ತಿ: ಹೆಚ್ಚುವರಿ ನಿರ್ದೇಶಕರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೆಂಗಳೂರು.
14. ಕೆ.ರಾಮಣ್ಣ ನಾಯಕ್: ಡಿಐಜಿ, ನೋಂದಣಿ ಮತ್ತು ಮುದ್ರಾಂಕ, ಬೆಂಗಳೂರು.
15. ಪಂಕಜ್‌ಕುಮಾರ್ ಪಾಂಡೆ: ಸರ್ಕಾರದ ಜಂಟಿ ಕಾರ್ಯದರ್ಶಿ ಹಾಗೂ ಮುಖ್ಯಮಂತ್ರಿಯ ಜಂಟಿ ಕಾರ್ಯದರ್ಶಿ., 16. ಎಂ.ಲಕ್ಷ್ಮಿ ನಾರಾಯಣ: ವಸತಿ ಇಲಾಖೆಯ ಸರ್ಕಾರದ ಕಾರ್ಯದರ್ಶಿ.,
17. ಬಿ.ಜಿ.ನಂದಕುಮಾರ್: ಆಯುಕ್ತರು ಧಾರ್ಮಿಕ ದತ್ತಿ ಇಅಲಾಖೆ, ಜಂಟಿ ಕಾರ್ಯದರ್ಶಿ, ಕಂದಾಯ ಇಲಾಖೆ, ಬೆಂಗಳೂರು.,
18. ಎನ್.ಕೃಷ್ಣಪ್ಪ: ಮುಖ್ಯ ಕಾರ್ಯನಿವಾರ್ಹಕ ಅಧಿಕಾರಿ(ಸಿಇಒ), ಜಿಲ್ಲಾ ಪಂಚಾಯತ್, ಕೊಡಗು.

ಕೆಎಎಸ್ ಅಧಿಕಾರಿಗಳು:
* ಡಿ.ಮಲ್ಲು: ಅಪರ ಆಯುಕ್ತರು(ಭೂ ನಿರ್ವಹಣೆ ಮತ್ತು ಇತರ) ಪ್ರಾದೇಶಿಕ ಆಯುಕ್ತರ ಕಚೇರಿ, ಬೆಂಗಳೂರು.,
* ಕೆ.ವಿ.ನಂಜುಂಡೇಗೌಡ: ವ್ಯವಸ್ಥಾಪಕ ನಿರ್ದೇಶಕರು, ಡಿ.ದೇವರಾಜ್ ಅರಸ್ ಟ್ರಕ್ ಟರ್ಮಿನಲ್ ಲಿಮಿಟೆಡ್, ಬೆಂಗಳೂರು.
* ಎಂ.ಆರ್.ಸೋಮಶೇಖರಪ್ಪ: ಜಂಟಿ ನಿದೇರ್ಶಕರು, ಪೌರಾಡಳಿತ ನಿರ್ದೇಶನಾಲಯ, ಬೆಂಗಳೂರು., * ಹಿತೇಶ್‌ಮುಲ್ ಹಕ್: ಯೋಜನಾ ನಿರ್ದೇಶಕರು, ಡಿಯುಡಿಸಿ, ರಾಯಚೂರು.,
* ಎಂ.ಆರ್.ರವಿಕುಮಾರ್: ವಿಶೇಷ ಭೂ ಸ್ವಾಧೀನಾಧಿಕಾರಿ, ಕರ್ನಾಟಕ ಗೃಹ ಮಂಡಳಿ, ಬೆಂಗಳೂರು.
* ಎ.ಮರೀಗೌಡ: ವಿಶೇಷ ಭೂ ಸ್ವಾಧೀನಾಧಿಕಾರಿ, ಹಾಸನ.,
* ಎನ್.ಸೂರ್ಯ ನಾರಾಯಣ: ಸಹಾಯಕ ಆಯುಕ್ತರು, ಗ್ಯಾಸ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್, ಬೆಂಗಳೂರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+