ವರ್ತೂರು ಪ್ರಕಾಶ್ ಗೆ ಸಚಿವಸ್ಥಾನ ?

Varthur Prakash
ಬೆಂಗಳೂರು, ಅ. 15 : ಬಿಜೆಪಿ ಸರಕಾರಕ್ಕೆ ಆಪದ್ಬಾಂಧವನಂತೆ ಬಂದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್‌ಗೆ ಸಚಿವ ಸ್ಥಾನ ಒಲಿದು ಬರಲಿದೆ. ಕಷ್ಟದಲ್ಲಿ ಸರಕಾರ ಉಳಿಸಿದ ವರ್ತೂರ್‌ಗೆ ಮಂತ್ರಿ ಸ್ಥಾನದ ಆಮಿಷ ತೋರಿಸಿ ಬೆಂಬಲ ಪಡೆಯಲಾಗಿದೆ.

ಕೊಟ್ಟ ಮಾತಿನಂತೆ ವಾರದೊಳಗೆ ಸಂಪುಟ ವಿಸ್ತರಣೆ ಮಾಡಿ, ಸಂಪುಟಕ್ಕೆ ಸೇರಿಸಿಕೊಳ್ಳಲು ಮುಖ್ಯಮಂತ್ರಿ ಯಡಿಯೂರಪ್ಪ ಮುಂದಾಗಿದ್ದಾರೆ. ಭಿನ್ನಮತೀಯ ಚಟುವಟಿಕೆ ಆರೋಪದ ಮೇಲೆ ನಾಲ್ವರು ಪಕ್ಷೇತರರು ಹಾಗೂ ಪಕ್ಷದ ಇಬ್ಬರು ಸಚಿವರನ್ನು ವಜಾಗೊಳಿಸಲಾಗಿದೆ. ಇದರಿಂದ 6 ಸ್ಥಾನ ಖಾಲಿ ಇವೆ. ಇದರಲ್ಲಿ 2 ಸ್ಥಾನ ಮಾತ್ರ ಭರ್ತಿ ಮಾಡಿ, ನಾಲ್ಕು ಸ್ಥಾನ ಖಾಲಿ ಇಟ್ಟುಕೊಳ್ಳಲು ನಿರ್ಧರಿಸಲಾಗಿದೆ.

ಐವರು ಪಕ್ಷೇತರರು ಸೇರಿ 16 ಶಾಸಕರು ಅನರ್ಹಗೊಂಡಿರುವುದರಿಂದ ಸರಕಾರ ಅಲ್ಪ ಬಹುಮತಕ್ಕಿಳಿದಿದೆ. ಇದರಿಂದ ಸರಕಾರಕ್ಕೆ ಅಪಾಯ ಯಾವತ್ತೂ ತಪ್ಪಿದ್ದಲ್ಲ. ಮರು ಚುನಾವಣೆಯಲ್ಲಿ ಗೆಲ್ಲುವವರೆಗೂ ಈಗಿರುವ ಶಾಸಕರ ಸಂಖ್ಯೆ ಕಾಪಾಡಿಕೊಳ್ಳಬೇಕು. ಇದು ಸಾಧ್ಯವಾಗದೇ ಹೋದರೆ ಸರಕಾರ ಪತನವಾಗುವುದು ಖಚಿತ. ಈ ಹಿನ್ನೆಲೆಯಲ್ಲಿ ಸರಕಾರ ಸುಭದ್ರ ಗೊಳಿಸಲು ಆಪರೇಷನ್ ಕಮಲ ನಡೆಸಬೇಕು ಎಂಬ ಆಲೋಚನೆ ಇದೆ.

ಇದಕ್ಕೆ ಪಕ್ಷದಲ್ಲಿ ಒಮ್ಮತಾಭಿಪ್ರಾಯ ಸಿಕ್ಕರೆ ಮುಂದಿನ ಹೆಜ್ಜೆ ಇಡಲು ಹಾಗೂ ಸಂಪುಟದಲ್ಲಿ 4 ಸ್ಥಾನಗಳನ್ನು ಖಾಲಿ ಇಟ್ಟುಕೊಳ್ಳಲು ಚಿಂತನೆ ನಡೆದಿದೆ. ಈ ನಿರ್ಧಾರದಿಂದ ಸಂಪುಟ ಸೇರುವ ನಿರೀಕ್ಷೆಯಲ್ಲಿರುವ ಹಿರಿಯ ಶಾಸಕರಿಗೆ ನಿರಾಶೆ ಆಗಬಹುದು. ಶಾಸಕರಾದ ಸಿ.ಟಿ.ರವಿ, ಸೊಗಡು ಶಿವಣ್ಣ, ಅಪ್ಪಚ್ಚು ರಂಜನ್, ಅಪ್ಪು ಪಟ್ಟಣ ಶೆಟ್ಟಿ ಸೇರಿದಂತೆ ಹಲವರು ಸಂಪುಟ ಸೇರುವ ನಿರೀಕ್ಷೆಯಲ್ಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+