ಶೀಘ್ರದಲ್ಲಿ ರಾಜ್ಯಪಾಲ ಭಾರದ್ವಾಜ್ 'ರಾಜ್' ಅಂತ್ಯ?
ನವದೆಹಲಿ,
ಅ. 14 : ಕರ್ನಾಟಕದ ರಾಜ್ಯಪಾಲ ಎಚ್ ಆರ್ ಭಾರದ್ವಾಜ್ ಅವರನ್ನು ಹಿಂದಕ್ಕೆ ಕರೆಸಿಕೊಳ್ಳಬೇಕು ಎಂದು ಬಿಜೆಪಿ ಕೇಂದ್ರಕ್ಕೆ ಮನವಿ ಮಾಡಿಕೊಂಡಿರುವ ಬೆನ್ನಲ್ಲೇ ಕಾಂಗ್ರೆಸ್ ಹೈಕಮಾಂಡ್ ಕೂಡಾ ಈ ಬಗ್ಗೆ ಚಿಂತನೆ ನಡೆಸಿದೆ. ಇದರ ಜೊತೆಗೆ ಕಾಂಗ್ರೆಸ್ ನಲ್ಲಿ ಭಾರದ್ವಾಜ್ ಅವರನ್ನು ಪದಚ್ಯುತಿಗೊಳಿಸಬೇಕೆಂದು ತೆರಮರೆಯಲ್ಲೇ ಕಸರತ್ತು ತೀವ್ರಗೊಂಡಿದೆ. id="toptextpromo">ಕಾಂಗ್ರೆಸ್
ಪಕ್ಷದ ಮೂಲಗಳು ಈ ವಿಷಯ ಬಹಿರಂಗಗೊಂಡಿದ್ದು, ತಮ್ಮ ನಿಲುವು ಏನೆಂಬುದನ್ನು ಕೇಂದ್ರಕ್ಕೆ ತಿಳಿಸಲಾಗಿದೆ ಎಂದು ಹೇಳಿದೆ. ಭಾರದ್ವಾಜ್ ಅವರು ನಡೆದುಕೊಳ್ಳುತ್ತಿರುವ ರೀತಿ ಅವರು ರಾಜ್ಯಪಾಲರಾಗಲಿಕ್ಕೆ ಅರ್ಹರಲ್ಲ ಎನ್ನುವ ಮಾತಿದೆ. ಅಷ್ಟೇ ಅಲ್ಲ ಅವರಿಂದಾಗಿ ರಾಜ್ಯಪಾಲರ ಹುದ್ದೆಗೆ ಕುಂದುಂಟಾಗಿದೆ ಎಂದು ಕಾಂಗ್ರೆಸ್ ಕೇಂದ್ರಕ್ಕೆ ಮನವರಿಕೆ ಮಾಡಿಕೊಟ್ಟಿದೆ. id='are-slot-1' class='oiad oi-axt oiadv'> id='top-searched-articles'>ಸ್ಪೀಕರ್
ಅವರಿಗೆ ನಿರ್ದೇಶನ ನೀಡಿದ್ದು, ಪುನಃ ವಿಶ್ವಾಸಮತ ಯಾಚನೆಗೆ ಅವಕಾಶ ನೀಡಿರುವುದು ವ್ಯತಿರಿಕ್ತ ಬೆಳವಣಿಗೆಯಾಗಿದೆ. ಇದು ರಾಜ್ಯಪಾಲರ ಹುದ್ದೆಗೆ ಅಗೌರವ ತರುವಂತಾದ್ದಾಗಿದೆ ಎಂದು ಕಾಂಗ್ರೆಸ್ ವಲಯದ ಅಸಮಾಧಾನವಾಗಿದೆ. ಭಾರದ್ವಾಜ್ ಸಂವಿಧಾನ ಕಾವಲುಗಾರನಾಗಿ ಉಳಿದಿಲ್ಲ. ಭಾರದ್ವಾಜ್ ಮಿತಿಮೀರುತ್ತಿದ್ದಾರೆ. ಈ ಎಲ್ಲ ಅಂಶಗಳನ್ನು ಹೈಕಮಾಂಡ್ ಗಮನಕ್ಕೆ ತರಲಾಗಿದೆ ಎಂದು ಕಾಂಗ್ರೆಸ್ ಹೇಳಿದೆ. ಈ ಮಧ್ಯೆ ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರು ಭಾರದ್ವಾಜ್ ವಿರುದ್ಧ ದಾಳಿ ಮುಂದುವರಿಸಿದ್ದು, ಕಾಂಗ್ರೆಸ್ ಏಜೆಂಟ್ ಎಂದು ಆಕ್ರೋಶ ವ್ಯಕ್ತಪಡಿಸುತ್ತಿವೆ.











Click it and Unblock the Notifications