ಜೆಡಿಎಸ್‌ನವರು ಗೂಂಡಾಗಳು: ಶೋಭಾ ಕರಂದ್ಲಾಜೆ
ತುಮಕೂರು,
ಅ.9: ಜೆಡಿಎಸ್ ವಿರುದ್ಧ ಇಂಧನ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವೆ ಶೋಭ ಕರಂದ್ಲಾಜೆ ಆಕ್ರೋಶ ವ್ಯಕ್ತಪಡಿಸಿದ್ದು, ಅವರು ಗೂಂಡಾಗಳು. ಸುಳ್ಳು ಸುದ್ದಿ ಹಬ್ಬಿಸಿ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ. id="toptextpromo">ಜೆಡಿಎಸ್
ಅವರ ಹಸ್ತಕ್ಷೇಪದಿಂದ ರಾಜ್ಯ ರಾಜಕೀಯ ವಲಯದಲ್ಲಿ ಅಲ್ಲೋಲ ಕಲ್ಲೋಲ ಉಂಟಾಗಿದೆ. ನಿರಾಧಾರ ಸುದ್ದಿಗಳನ್ನು ಸೃಷ್ಟಿ ಮಾಡಿ ಜನತೆಯನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಶಂಕರಲಿಂಗೇಗೌಡರನ್ನು ಜೆಡಿಎಸ್‌ನವರು ಭೇಟಿ ಮಾಡುವ ಉದ್ದೇಶವಾದರೂ ಏನು ಎಂದು ಶೋಭಾ ಪ್ರಶ್ನಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ರೇವಣ್ಣ
ಮತ್ತು ದತ್ತ ಅವರು ಶಾಸಕರ ಭವನಕ್ಕೆ ಬಂದು ಶಂಕರಲಿಂಗೇಗೌಡರನ್ನು ಭೇಟಿ ಮಾಡಲು ಪ್ರಯತ್ನಿಸಿದ್ದು ಎಷ್ಟು ಸರಿ ಎಂದರು. ಗೋವಾದಲ್ಲಿ ಬಿಜೆಪಿ ಶಾಸಕರನ್ನು ಗೃಹಬಂಧನದಲ್ಲಿ ಇಡಲಾಗಿದೆ. ಹೋಟೆಲ್ ನ ಸುತ್ತ ಪೊಲೀಸ್ ಕಾವಲು ಹಾಕಲಾಗಿದೆ. ಶಾಸಕರನ್ನು ಭೇಟಿ ನೀಡಲು ಪ್ರಯತ್ನಿಸುತ್ತಿಲ್ಲ ಎಂದು ಆರೋಪಿಸಿದರು.











Click it and Unblock the Notifications