ರೇಣುಕಾಚಾರ್ಯರನ್ನು ಏಕಾಂಗಿ ಮಾಡಿದ 13 ಶಾಸಕರು

Dissidents dump Renukachrya
ಗೋವಾ, ಅ.9: ಇಲ್ಲಿನ ತಾಜ್ ಎಕ್ಸೋಟಿಕಾದಲ್ಲಿ ನಡೆಯುತ್ತಿದ 48 ಗಂಟೆಗಳ ರಾಜಕೀಯ ಹೈಡ್ರಾಮ ಶನಿವಾರ ಮಧ್ಯಾಹ್ನದ ಬಳಿಕ ಹೊರ ತಿರುವು ಪಡೆದುಕೊಂಡಿದೆ. ಪಕ್ಷೇತರರು ಸೇರಿದಂತೆ ಎಲ್ಲ 13 ಅತೃಪ್ತ ಶಾಸಕರು ರೆಸಾರ್ಟ್‌ನಿಂದ ಹೊರಬಿದ್ದ ಬಳಿಕ ಏಕಾಂಗಿಯಾಗಿ ಉಳಿದ ಅಬಕಾರಿ ಸಚಿವ ರೇಣುಕಾಚಾರ್ಯ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ಹೊಸ ಬಾಂಬ್ ಸಿಡಿಸಿದರು.

ಎಲ್ಲಾ 13 ಶಾಸಕರನ್ನು ಜೆಡಿಎಸ್‌ ಬಲವಂತವಾಗಿ ಕರೆದುಕೊಂಡು ಹೋಗಿದ್ದಾರೆ. ನೂರಕ್ಕೂ ಅಧಿಕ ಗೂಂಡಾಗಳು ಎಲ್ಲಾ ಶಾಸಕರನ್ನು ಎತ್ತಿಹಾಕಿಕೊಂಡು ಹೋಗಿದ್ದಾರೆ. ಒಬ್ಬೊಬ್ಬ ಶಾಸಕನಿಗೆ ರು.20ರಿಂದ ರು.25 ಕೋಟಿ ಕೊಡುವ ಆಮೀಷವನ್ನು ಒಡ್ಡಲಾಗಿದೆ ಎಂದು ಅವರು ಗಂಭೀರವಾಗಿ ಆರೋಪಿಸಿದ್ದಾರೆ.

ಜೆಡಿಎಸ್ ಶಾಸಕ ಜಮೀರ್ ಅಹ್ಮದ್ ಖಾನ್ ಜೊತೆ 13 ಅತೃಪ್ತ ಶಾಸಕರು ಹೊರಬಿದ್ದ ಬಳಿಕ ಗೋವಾ ಪ್ರಹಸನಕ್ಕೆ ತೆರೆಬಿದ್ದಿದೆ. ಈ ಎಲ್ಲಾ ಅತೃಪ್ತ ಶಾಸಕರು ಮುಂಬೈ, ಪುಣೆ ಅಥವಾ ಉದಯಪುರಕ್ಕೆ ಹೋಗಲಿದ್ದಾರೆ ಎಂಬ ಮಾಹಿತಿ ಇದೆ. ಇವರೆಲ್ಲರಿಗಾಗಿ ವಿಶೇಷ ವಿಮಾನವನ್ನು ವ್ಯವಸ್ಥೆ ಮಾಡಲಾಗಿದೆ ಎನ್ನಲಾಗಿದೆ. ಇಂಡಿ ಶಾಸಕ ಸಾರ್ವಭೌಮ ಬಗಲಿ ಅವರನ್ನು ಬಲವಂತವಾಗಿ ಗೂಂಡಾಗಳು ಎತ್ತು ಹಾಕಿಕೊಂಡು ಹೋದರು ಎಂದು ರೇಣುಕಾಚಾರ್ಯ ಹೇಳಿದರು.

ಬೇಳೂರು ಗೋಪಾಲಕೃಷ್ಣ ಪ್ರತಿಕ್ರಿಯೆ: ರೇಣುಕಾಚಾರ್ಯ ಅವರು ನಮ್ಮ ಮನೆಯಲ್ಲಿ ಸ್ವಲ್ಪ ಸಮಸ್ಯೆ ಇದೆ ಎಂದರು. ಹಾಗಾಗಿ ನಾವು ಅವರನ್ನು ಕಳುಹಿಸಿದೆವು. ರೇಣುಕಾಚಾರ್ಯ ಆರೋಪ ಸತ್ಯಕ್ಕೆ ದೂರವಾದ ಮಾತು. ಗೂಂಡಾಗಳು ಬಲವಂತವಾಗಿ ನಮ್ಮನ್ನು ಎತ್ತಿಹಾಕಿಕೊಂಡು ಬಂದರು ಎಂಬ ಮಾತಿನಲ್ಲಿ ಹುರುಳಿಲ್ಲ ಎಂದು ರೇಣುಕಾಚಾರ್ಯ ಅವರ ಬೆಂಬಲಿಗ ಬೇಳೂರು ಗೋಪಾಲಕೃಷ್ಣ ಅವರು ಕಥೆಯ ಇನ್ನೊಂದು ಬದಿಯನ್ನು ತೆರೆದಿಟ್ಟಿದ್ದಾರೆ.

ಇಲ್ಲಿ ಯಾವುದೇ ಸಮಸ್ಯೆಯೂ ಇಲ್ಲ. ನಾವು 13 ಮಂದಿಯೂ ಒಟ್ಟಾಗಿಯೇ ಇದ್ದೇವೆ. ನಮ್ಮನ್ನು ಯಾರೂ ಎಳೆದುಕೊಂಡು ಬಂದಿಲ್ಲ. ನಮ್ಮಷ್ಟಕ್ಕೆ ನಾವೇ ಬಂದಿದ್ದೇವೆ. ನಮ್ಮೊಂದಿಗೆ ಇನ್ನೂ 6 ಮಂದಿ ಶಾಸಕರು ಸೇರ್ಪಡೆಯಾಗಲಿದ್ದಾರೆ. ಒಟ್ಟು ನಾವು19 ಮಂದಿಯಾಗುತ್ತೇವೆ ಎಂದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+