ಮೋದಿಗೆ ಹತ್ತು ವರ್ಷ, ಯಡ್ಡಿಗೆ ಎಷ್ಟು ವರ್ಷ?
ಅಹಮದಾಬಾದ್,
ಅ 7 : ಇತ್ತ ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷದಲ್ಲಿ ಮೂರು ಬಾರಿ ಪತನದ ಅಂಚಿಗೆ ತಲುಪಿದ್ದರೆ ಅತ್ತ ಗುಜರಾತ್ ನಲ್ಲಿನ ನರೇಂದ್ರ ಮೋದಿ ಸರಕಾರ ಇಂದಿಗೆ ಸತತವಾಗಿ ಹತ್ತು ವರ್ಷ ರಾಜ್ಯಭಾರ ನಡೆಸಿದ ಹೆಮ್ಮೆಗೆ ಪಾತ್ರವಾಗಿದೆ. ಬಹುಶಃ ದೇಶದ ಎಲ್ಲಾ ಮುಖ್ಯಮಂತ್ರಿಗಳಿಗೆ ಆಡಳಿತ ಯಂತ್ರ ಮತ್ತು ಪಕ್ಷದ ಶಾಸಕರನ್ನು ಹೇಗೆ ಹದ್ದುಬಸ್ತಿನಲ್ಲಿ ಇಡಬೇಕೆನ್ನುವುದಕ್ಕೆ ಮೋದಿಗಿಂತ ಉತ್ತಮ ಉದಾಹರಣೆ ಸಮಕಾಲೀನ ಭಾರತದಲ್ಲಿ ಇನ್ನೊಂದು ಇರಲಿಕ್ಕಿಲ್ಲ. id="toptextpromo">ಗುರುವಾರ
(ಅಕ್ಟೋಬರ್ 7) ನರೇಂದ್ರ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದು ಹತ್ತು ವರ್ಷ. ಇತ್ತೀಚೆಗೆ ಖಾಸಗಿ ಸಂಸ್ಥೆ ನಡೆಸಿದ ಸಮೀಕ್ಷೆ ಪ್ರಕಾರ, ಮೋದಿ ಅವರು ಕಳೆದ ಒಂದು ದಶಕಗಳಿಂದ ರಾಜ್ಯದ ಸರ್ವತೋಮುಖ ಅಭಿವೃದ್ದಿಯ ಹರಿಕಾರರಾಗಿದ್ದಾರೆ. ಗುಜರಾತ್ ನಲ್ಲಿ ಅಲ್ಪಸಂಖ್ಯಾತರು ಮೋದಿ ಪರ ವಾಲುತ್ತಿದ್ದಾರೆ ಅಥವಾ ಮೋದಿ ಆಡಳಿತ ವೈಖರಿಗೆ ತಲೆಬಾಗಿದ್ದಾರೆ ಎಂದೂ ಹೇಳಿದೆ. ಅದಕ್ಕೆ ಇತ್ತೀಚಿನ ಉದಾಹರಣೆಯೆಂದರೆ ಅಲ್ಪಸಂಖ್ಯಾತರೇ ಹೆಚ್ಚಾಗಿರುವ ಕತ್ಲಾಲ್ ವಿಧಾನಸಭಾ ಕ್ಷೇತ್ರದಲ್ಲಿ ನಡೆದ ಉಪಚುನಾವಣೆ ಮತ್ತು ಮುನ್ಸಿಪಲ್ ಕಾರ್ಪೊರೇಶನ್ ಚುನಾವಣೆಯಲ್ಲಿ ಬಿಜೆಪಿ ಜಯಗಳಿಸಿದ್ದು. ಕಳೆದ 50 ವರ್ಷಗಳಿಂದ ಇದೇ ಮೊದಲ ಬಾರಿಗೆ ಬಿಜೆಪಿ ಈ ಕ್ಷೇತ್ರದಲ್ಲಿ ಜಯಗಳಿಸಿದೆ. ಏನು ಮಾಯೆಯೋ, ಏನು ಮರ್ಮವೋ! id='are-slot-1' class='oiad oi-axt oiadv'> id='top-searched-articles'>ಗೋಧ್ರಾ
ಪ್ರಕರಣದ ನಂತರ ವ್ಯಾಪಕ ಟೀಕೆಗೆ ಒಳಗಾಗಿದ್ದ ಮೋದಿ ನಂತರ ತಮ್ಮ ಅಭಿವೃದ್ದಿ ಕೆಲಸದಿಂದ ಟೀಕಾಕಾರರ ಬಾಯಿ ಮುಚ್ಚುವಂತೆ ಮಾಡಿದರು. ರಾಜ್ಯ ಹಿಂದೆಂದೂ ಕಾಣದ ಅಭಿವೃದ್ದಿಯನ್ನು ಕಂಡಿದೆ ಅಂಕಿ ಅಂಶಗಳು ಹೇಳುತ್ತವೆ. ಕೃಷಿ, ಕೈಗಾರಿಕಾ ಮತ್ತು ಇನ್ನಿತರ ಕ್ಷೇತ್ರಗಳಲ್ಲಿ ಗುಜರಾತ್ ಉತ್ತಮ ಅಭಿವೃದ್ದಿ ಕಂಡಿತು. ಹತ್ತು ವರ್ಷ ಅಧಿಕಾರ ನಡೆಸಿದರೂ ಭಿನ್ನಮತೀಯ ಚಟುವಟಿಕೆಗೆ ಆಸ್ಪದವೇ ನೀಡದೆ ಪಕ್ಷದ ಶಾಸಕರನ್ನು ನಿಯಂತ್ರಿಸುವಲ್ಲಿ ಕೂಡ ಮೋದಿ ಯಶಸ್ವಿಯಾಗಿದ್ದಾರೆ. ಉತ್ತಮ ಅಧಿಕಾರ ನೀಡಿದರೆ ವಿರೋಧ ಪಕ್ಷಗಳು ಮತ್ತು ಜತೆಗಾರ ಶಾಸಕರು ತೆಪ್ಪಗೆ ಇರಬೇಕಾಗುತ್ತದೆ ಎನ್ನುವುದಕ್ಕೆ ಗುಜರಾತ್ ಸರಕಾರ ಉದಾಹರಣೆ. ಶಹಬ್ಬಾಸ್ ಮೋದಿ.











Click it and Unblock the Notifications