ಸಿದ್ದು ಸಿಎಂ, ರೇವಣ್ಣ ಡಿಸಿಎಂ ರೇಣುಕಾ ಕನಸು

Renukacharya
ಬೆಂಗಳೂರು, ಅ.7: "ಸಿದ್ದರಾಮಯ್ಯ ಅವರನ್ನು ಸಿಎಂ ಮಾಡುವುದು ಹಾಗೂ ಎಚ್ ಡಿ ರೇವಣ್ಣ ಡಿಸಿಎಂ ಮಾಡುವುದು ಹಾಗೂ ಕುಮಾರಸ್ವಾಮಿ ಅವರಿಗೆ ಕೇಂದ್ರದಲ್ಲಿ ಮಂತ್ರಿಸ್ಥಾನಕ್ಕೆ ಬೆಂಬಲಿಸುವುದು. ಇದು ಈ ಎಲ್ಲಾ ಭಿನ್ನಮತದ ಹಿಂದಿನ ಗುಟ್ಟು" ಎಂದು ಗುಟ್ಟು ಬಿಚ್ಚಿಟ್ಟವರು ಹರಿಹರದ ಶಾಸಕ ಹರೀಶ್. "ಭಿನ್ನಮತೀಯರ ಗುಂಪಿನಿಂದ ನಾನು ಹೊರಬಿದ್ದ ಮೇಲೆ ನನಗೆ ಅಪರಿಚಿತರಿಂದ ಬೆದರಿಕೆ ಕರೆಗಳು ಬರುತ್ತಿದೆ. ಈ ಬಗ್ಗೆ ರೇಣುಕಾಚಾರ್ಯ ವಿರುದ್ಧ ವಿಧಾನಸೌಧ ಪೊಲೀಸ್ ಠಾಣೆಗೆ ದೂರು ನೀಡಿದ್ದೇನೆ" ಎಂದಿದ್ದಾರೆ.

ಮುಖ್ಯಮಂತ್ರಿಗಳ ಅಣತಿಯ ಮೇರೆಗೆ ನಾನು ಚೆನ್ನೈಗೆ ಹೋಗಿ ಭಿನ್ನಮತೀಯರ ಓಲೈಕೆ ಮಾಡಲು ಹೋದಾಗ, ಕೆಲ ಗೂಂಡಾಗಳು, ಅಪಹರಣ ಮಾಡುವ ವಿಫಲ ಯತ್ನ ನಡೆಸಿದ್ದರು. ಸರ್ಕಾರಕ್ಕೆ ಕೊಟ್ಟಿರುವ ಬೆಂಬಲ ವಾಪಾಸ್ ಪಡೆಯುತ್ತೇನೆ ಎಂದು ಪತ್ರಕ್ಕೆ ಸಹಿ ಹಾಕುವಂತೆ ಬಲಾತ್ಕರಿಸಿದರು. ಆದರೆ, ತಕ್ಷಣವೇ ಆ ರೆಸಾರ್ಟ್ ಖಾಲಿ ಮಾಡಿ ಅಲ್ಲಿಂದ 5 ಕಿ.ಮೀ ದೂರದ ಬೇರೊಂದು ಹೋಟೆಲ್ ಸೇರಿಕೊಂಡೆ. ಕಡೆಗೆ, ಸಂಧಾನಕ್ಕೆ ಬಂದ ಆರ್ ಅಶೋಕ್, ಶ್ರೀರಾಮುಲು ಹಾಗೂ ಬೊಮ್ಮಾಯಿ ಅವರೊಂದಿಗೆ ಬೆಂಗಳೂರಿಗೆ ವಾಪಾಸ್ ಬಂದೆ ಎಂದು ವಿವರಿಸಿದರು.

ಇಳಿ ಸಂಜೆಯವರೆಗೂ ಆದ ಬೆಳವಣಿಗೆ ಅವಲೋಕನ :
* ಗೋವಾದ ಮಡಗಾಂವ್ ನ ತಾಜ್ ಹೋಟೆಲ್ ನ ರೆಸಾರ್ಟ್ ನಲ್ಲಿರುವ ಆನಂದ್ ಆಸ್ನೋಟಿಕರ್ ಹಾಗೂ ಬಾಲಚಂದ್ರ ಜಾರಕಿಹೊಳಿ ಮತ್ತಿತ್ತರ 9 ಜನ ಪ್ರಮುಖ ಶಾಸಕರನ್ನು ಕರೆತರಲು ಜನಾರ್ಧನ ರೆಡ್ಡಿ ತೆರಳಿದ್ದಾರೆ.
* ಕೇರಳ ಪ್ರವಾಸ ಮುಗಿಸಿದ ಸಿಎಂ, ಗೋಲ್ಡನ್ ಪಾಮ್ ರೆಸಾರ್ಟ್ ನಲ್ಲಿರುವ ಸುಮಾರು 75ಕ್ಕೂ ಹೆಚ್ಚು ಪಕ್ಷನಿಷ್ಠ ಶಾಸಕರನ್ನು ಭೇಟಿ ಮಾಡಿ ಮಾತನಾಡಿದ್ದಾರೆ.
* ಸೆ.11ರಂದು ಬಿಜೆಪಿ ಸರ್ಕಾರ ವಿಶ್ವಾಸ ಮತಯಾಚನೆ ಮಾಡುವ ಹಿನ್ನೆಲೆಯಲ್ಲಿ ಎಲ್ಲಾ ಬಿಜೆಪಿ ಶಾಸಕರಿಗೆ ವ್ಹಿಪ್ ನೀಡಲಾಗುವುದು ಎಂದು ಸರ್ಕಾರದ ಮುಖ್ಯ ಸಚೇತಕ ಜೀವರಾಜ್ ತಿಳಿಸಿದ್ದಾರೆ.
* ಶ್ರೀರಾಮುಲುರಂತೆ ತಾವು ಕೂಡಾ ರಾಜೀನಾಮೆ ನೀಡಿ ಹೊಸಬರಿಗೆ ಸ್ಥಾನ ಒದಗಿಸುವುದಾಗಿ ಕೃಷ್ಣ ಪಾಲೇಮಾರ್, ವಿಶ್ವೇಶ್ವರ ಹೆಗ್ಡೆಡೆ ಕಾಗೇರಿ ಹೇಳಿದ್ದಾರೆ.
*ಎಚ್ ಡಿ ಕುಮಾರಸ್ವಾಮಿ: "ನಮ್ಮ ಪಕ್ಷದ ಶಾಸಕರು ವಜ್ರದಂತೆ ಕತ್ತರಿಸುವ ಆಯುಧ ಯಡಿಯೂರಪ್ಪ ಅವರ ಬಳಿ ಇಲ್ಲ" ಎಂದು ದಿನದ ಪಂಚಿಂಗ್ ಡೈಲಾಗ್.

ರೇಣುಕಾಚಾರ್ಯ ಹಾಗೂ ಬೇಳೂರು ಗೋಪಾಲಕೃಷ್ಣ ಅವರು ವಿಪಕ್ಷಗಳ ಜೊತೆ ಅನೈತಿಕವಾಗಿ ಕೈ ಜೋಡಿಸಿ, ಬಿಜೆಪಿಗೆ ದ್ರೋಹ ಬಗೆಯುವ ಕಾರ್ಯದಲ್ಲಿ ತೊಡಗಿದ್ದಾರೆ. ಇದು ಸಾಧ್ಯವಿಲ್ಲದ ಮಾತು. ರೆಡ್ಡಿಗಳ ಸಹಾಯದಿಂದ ಸಮಸ್ಯೆ ಸುಸೂತ್ರವಾಗಿ ಬಗೆಹರಿಯಲಿದೆ ಎಂದು ಹರೀಶ್ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+