ಪ್ರತಿಭಾ ಪ್ರಕರಣ:ಕ್ಯಾಬ್ ಡ್ರೈವರ್ ಶಿವಕುಮಾರ್ ತಪ್ಪಿತಸ್ಥ
ಬೆಂಗಳೂರು,
ಅ.6: ಅತ್ಯಾಚಾರಕ್ಕೆ ಒಳಗಾಗಿ ಕೊಲೆಯಾಗಿದ್ದ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಶ್ರೀಕಂಠಮೂರ್ತಿ ಕೇಸನ್ನು ವಿಚಾರಣೆ ನಡೆಸಿದ ತ್ವರಿತ ನ್ಯಾಯಾಲಯ ಕ್ಯಾಬ್ ಡ್ರೈವರ್ ಶಿವ ಕುಮಾರ್‌ನನ್ನು ತಪ್ಪಿತಸ್ಥ ಎಂದು ತೀರ್ಪು ನೀಡಿದೆ. ಇಷ್ಟು ದಿನವೂ ಏಕಾಂಗಿ ಹೋರಾಟ ನಡೆಸಿದ ಪ್ರತಿಭಾ ಅವರ ತಾಯಿ ಗೌರಮ್ಮ ಅವರಿಗೆ ಕಡೆಗೂ ನ್ಯಾಯ ದೊರಕಿದೆ. id="toptextpromo">ಎಚ್
ಪಿ ಗ್ಲೋಬಲ್ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ಪ್ರತಿಭಾ ರಾತ್ರಿಪಾಳಿಗೆ ಕಚೇರಿಗೆ ತೆರಳುವಾಗ ಕ್ಯಾಬ್ ಚಾಲಕ ಶಿವಕುಮಾರ್ ನಿಂದ 2005ರಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಡೀಡಾಗಿದ್ದಳು. 2006ರಲ್ಲಿ ಈ ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ನಾಲ್ಕು ವರ್ಷ ಕಳೆದರೂ ವೃದ್ಧಜೀವಿ ಗೌರಮ್ಮ ನ್ಯಾಯಾಲಯಕ್ಕಾಗಿ ಅಲೆಯುತ್ತಿದ್ದರು. id='are-slot-1' class='oiad oi-axt oiadv'> id='top-searched-articles'>ಈ
ಕೇಸಿನಲ್ಲಿ ಯಾವುದೇ ನೇರ ಸಾಕ್ಷ್ಯಗಳಿರಲಿಲ್ಲ. ಸಾಂದರ್ಭಿಕ ಸಾಕ್ಷ್ಯಗಳ ಮುಖಾಂತರವೇ ಅತ್ಯಾಚಾರ ಮತ್ತು ಕೊಲೆಯನ್ನು ಸಾಬೀತುಪಡಿಸಬೇಕಾಗಿತ್ತು. ಇಂತಹ ಕ್ಲಿಷ್ಟ ಪರಿಸ್ಥಿತಿಯಲ್ಲಿ ಕ್ಯಾಬ್ ಡ್ರೈವರ್ ಶಿವಕುಮಾರ್‌ನನ್ನು ತಪ್ಪಿತಸ್ಥ ಎಂದು ಸಾಬೀತು ಪಡಿಸುವುದು ನ್ಯಾಯಾಲಯಕ್ಕೆ ಸವಾಲಾಗಿತ್ತು.











Click it and Unblock the Notifications