ಫೈನಲ್ ಗೆ ರಿಲೆ ಈಜು : ಕನ್ನಡಿಗ ಬೋಪಣ್ಣಗೆ ಫಸ್ಟ್ ಗೆಲುವು
ನವದೆಹಲಿ,
ಅ. 4 : ಕಾಮನ್ ವೆಲ್ತ್ ಕ್ರೀಡಾಕೂಟ ಪುರುಷರ ರಿಲೆ ಈಜು ಸ್ಪರ್ಧೆಯಲ್ಲಿ ವಾರ್ದವಾಲ್ ಖಾಡೆ ನೇತೃತ್ವದ ಆರೋನ್ ಡಿಸೋಜಾ, ಜಯಪ್ರಕಾಶ ಮತ್ತು ಅಂಶುಲ್ ಕೋಠಾರಿ ಅವರನ್ನು ಒಳಗೊಂಡ 4X100 ಫ್ರಿಸ್ಟೈಲ್ ರಿಲೆ ತಂಡ ಫೈನಲ್ ತಲುಪಿದೆ. id="toptextpromo">ಕ್ರೀಡಾಕೂಟದ
ಟೆನಿಸ್ ವಿಭಾಗದಲ್ಲಿ ಭಾರತ ಮೊದಲ ಗೆಲುವು ದಾಖಲಿಸಿದೆ. ಕರ್ನಾಟಕದ ಯುವ ಟೆನಿಸ್ ಪಟು ರೋಹನ್ ಬೋಪಣ್ಣ ಪುರುಷರ ಟೆನಿಸ್ ಸಿಂಗಲ್ಸ್ ನಲ್ಲಿ ಉಗಾಂಡಾದ ರಾಬರ್ಟ್ ಬುಯಿಂಜಾ ಅವರನ್ನು 6-1, 6-4 ನೇರ ಸೆಟ್ ಗಳಿಂದ ಸೋಲಿಸಿ ಮುನ್ನೆಡದರು. id='are-slot-1' class='oiad oi-axt oiadv'> id='top-searched-articles'>ಯಮುನಾ
ಸ್ಪೋರ್ಟ್ಸ್ ಕಾಂಪ್ಲೆಕ್ಸ್ ನಲ್ಲಿ ನಡೆದ ಟೇಬಲ್ ಟೆನಿಸ್ ನಲ್ಲಿ ಭಾರತ ಶ್ರೀಲಂಕಾ ತಂಡವನ್ನು 3-0 ಅಂಕ ಗಳಿಸಿ ಮುನ್ನುಗ್ಗಿದೆ. ಭಾರತ ಶಮೀಮಾ ಕುಮಾರೇಶನ್ ಅವರು ನೂವಾನ್ ನಾವೂದ್ಯ ಅವರನ್ನು 11-9, 11-9, 11-7 ಅಂಕಗಳಿಂದ ಸೋಲಿಸಿದರು. ಇನ್ನೊಂದು ಪಂದ್ಯದಲ್ಲಿ ಮೌಮಾ ದಾಸ್ ಅವರು ಲಂಕಾದ ಮದರಂಗಿ ದರ್ಶಿಕಾ ಅವರನ್ನು 11-4, 11-5, 11-4 ಅಂಕಗಳಿಂದ ಸೋಲಿಸಿದರು.ಹೆಚ್ಚಿನ ಮಾಹಿತಿಗೆ ಕ್ಲಿಕ್ಕಿಸಿ











Click it and Unblock the Notifications