ಬಾಬ್ರಿ ತೀರ್ಪು : ನ್ಯಾಯಾಲಯದ ತೀರ್ಪು ಒಪ್ಪಿಕೊಳ್ಳಿ

ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 60 ವರ್ಷದ ಹಿಂದಿನ ಬಾಬ್ರಿ ಮಸೀದಿ ಮಾಲೀಕತ್ವದ ಅರ್ಜಿ ಹೂಡಿರುವ ಕಕ್ಷಿ-ಪ್ರತಿ ಕಕ್ಷಿಗಳು ತಮ್ಮೊಳಗೇ ಮಾತುಕತೆ ನಡೆಸಿ ಸಮಸ್ಯೆ ಪರಿಹರಿಸಿಕೊಳ್ಳಬೇಕು. ಅದು ಸಾಧ್ಯವಾಗದಿದ್ದಲ್ಲಿ ನ್ಯಾಯಾಲಯದ ತೀರ್ಪನ್ನು ಅಂಗೀಕರಿಸಬೇಕು ಎಂದರು.
ಬಾಬ್ರಿ ಮಸೀದಿ ಕುರಿತು ಅಲಹಾಬಾದ್ ಹೈಕೋರ್ಟ್ ನ ತೀರ್ಪನ್ನು ಮುಂದೂಡುವಂತೆ ಕೋರಿ ಸಲ್ಲಿಸಲಾಗಿರುವ ವಿಶೇಷ ಅರ್ಜಿಯ ಕುರಿತು ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಮೂರ್ತಿ ಎಸ್ ಎಚ್ ಕಪಾಡಿಯಾ ನೇತೃತ್ವದ ತ್ರಿಸದಸ್ಯ ಪೀಠವೊಂದು ಇಂದು ಮಹತ್ವ ನಿರ್ಧಾರವನ್ನು ಪ್ರಕಟಿಸಲಿದೆ. ರಮೇಶ್ಚಂದ್ರ ತ್ರಿಪಾಠಿ ಎಂಬವರು ಸಲ್ಲಿಸಿದ್ದ ಅರ್ಜಿಯನ್ನು ಕೈಗೆತ್ತಿಕೊಂಡಿರುವ ನ್ಯಾಯಪೀಠ ಗುರುವಾರ ತೀರ್ಪು ಘೋಷಣೆಗೆ 5 ದಿನಗಳ ತಡೆಯಾಜ್ಞೆ ವಿಧಿಸಿತ್ತು.
ಪುನರ್ ಪರಿಶೀಲನೆ ಮೂಲಕ ಬಾಬ್ರಿ ಮಸೀದಿ ಮಾಲಕತ್ವದ ವಿವಾದ ಬಗೆಹರಿಯುವುದಿಲ್ಲ ಎಂದು ಸುನ್ನಿ ವಕ್ಫ್ ಮಂಡಳಿ ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಪ್ರಮಾಣ ಪತ್ರದಲ್ಲಿ ಹೇಳಿದೆ. ಮುಖ್ಯ ನ್ಯಾಯಮೂರ್ತಿ ಎಸ್ ಎಚ್ ಕಪಾಡಿಯಾ, ನ್ಯಾಯಮೂರ್ತಿಗಳಾದ ಅಫ್ತಾಬ್ ಆಲಂ ಮತ್ತು ರಾಧಾಕೃಷ್ಣನ್ ಅವರನ್ನು ಒಳಗೊಂಡ ಪೀಠವು ಬಾಬ್ರಿ ಮಸೀದಿ ಹಕ್ಕು ದಾವೆಯ ತೀರ್ಪನ್ನು ಅಲಹಾಬಾದ್ ಕೋರ್ಟ್ ನೀಡಬೇಕಾದ ದಿನಾಂಕವನ್ನು ಇಂದು ನಿಗದಪಡಿಸಲಿದೆ.
ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ












Click it and Unblock the Notifications