ಜಿಲ್ಲಾ ಉಸ್ತುವಾರಿ ಸಚಿವರ ಪೂರ್ಣ ಪಟ್ಟಿ

District In-charge Ministers list
ಬೆಂಗಳೂರು, ಸೆ.28: ಜಿಲ್ಲಾ ಉಸ್ತುವಾರಿ ಸಚಿವರ ಪಟ್ಟಿಯನ್ನು ಪ್ರಕಟಿಸಲಾಗಿದೆ. ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಇದೇ ಪ್ರಥಮ ಬಾರಿಗೆ ಪಕ್ಷೇತರ ಸಚಿವರಿಗೂ ಜಿಲ್ಲಾ ಉಸ್ತುವಾರಿ ನೀಡಿ ಮುಖ್ಯಮಂತ್ರಿ ಯಡಿಯೂರಪ್ಪ ಆದೇಶ ಹೊರಡಿಸಿದ್ದಾರೆ. ಸಚಿವರಾದ ಪಿ.ಎಂ ನರೇಂದ್ರಸ್ವಾಮಿಯವರಿಗೆ ಚಾಮರಾಜನಗರ ಜಿಲ್ಲೆ, ಪಾವಗಡದ ವೆಂಕಟರಮಣಪ್ಪ ಅವರಿಗೆ ಚಿಕ್ಕಬಳ್ಳಾಪುರ ಜಿಲ್ಲೆ ಉಸ್ತುವಾರಿ ನೀಡಲಾಗಿದೆ.

ರಾಮಚಂದ್ರಗೌಡ ರಾಜೀನಾಮೆ ನಂತರ ತೆರವಾದ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವರ ಸ್ಥಾನಕ್ಕೆ ಅಬ್ಕಾರಿ ಸಚಿವ ಎಂ.ಪಿ. ರೇಣುಕಾಚಾರ್ಯ ಅವರನ್ನು ನೇಮಿಸಲಾಗಿದೆ. ನೂತನ ಸಚಿವರ ಪೈಕಿ ತುಮಕೂರಿಗೆ ಇಂಧನ ಸಚಿವೆ ಶೋಭಾಕರಂದ್ಲಾಜೆ, ಹಾಸನಕ್ಕೆ ಆಹಾರ ಸಚಿವ ವಿ. ಸೋಮಣ್ಣ, ಕೋಲಾರಕ್ಕೆ ಸಮಾಜ ಕಲ್ಯಾಣ ಸಚಿವ ಎ. ನಾರಾಯಣಸ್ವಾಮಿ, ಮೈಸೂರಿಗೆ ರಾಮದಾಸ್, ಕೊಡಗು ಜಿಲ್ಲೆಗೆ ವಿಜಯ ಶಂಕರ್ ಅವರನ್ನು ಉಸ್ತುವಾರಿ ಸಚಿವರನ್ನಾಗಿ ನೇಮಕ ಮಾಡಲಾಗಿದೆ.

ಜಿಲ್ಲಾ ಉಸ್ತುವಾರಿ ಸಚಿವರ ಸಂಪೂರ್ಣ ಪಟ್ಟಿ:

ಶಿವಮೊಗ್ಗ: ಬಿ.ಎಸ್.ಯಡಿಯೂರಪ್ಪ
ತುಮಕೂರು: ಶೋಭಾ ಕರಂದ್ಲಾಜೆ
ಬಾಗಲಕೋಟೆ: ಗೋವಿಂದ ಕಾರಜೋಳ
ಬಿಜಾಪುರ: ಮುರುಗೇಶ್ ನಿರಾಣಿ
ಚಿಕ್ಕಬಳ್ಳಾಪುರ: ವೆಂಕಟರಮಣಪ್ಪ
ಚಿಕ್ಕಮಗಳೂರು: ಎಂ.ಪಿ.ರೇಣುಕಾಚಾರ್ಯ
ಧಾರವಾಡ: ಜಗದೀಶ್ ಶೆಟ್ಟರ್
ಉತ್ತರ ಕನ್ನಡ: ವಿಶ್ವೇಶ್ವರ ಹೆಗಡೆ ಕಾಗೇರಿ
ಬಳ್ಳಾರಿ: ಜಿ.ಜನಾರ್ದನ ರೆಡ್ಡಿ
ಚಿತ್ರದುರ್ಗ: ಜಿ.ಕರುಣಾಕರ ರೆಡ್ಡಿ
ಗದಗ, ರಾಮನಗರ: ಶ್ರೀರಾಮುಲು
ರಾಯಚೂರು: ಡಿ.ಸುಧಾಕರ
ಯಾದಗಿರಿ: ಬಾಲಚಂದ್ರ ಜಾರಕಿಹೊಳಿ
ಮಂಗಳೂರು: ಕೃಷ್ಣ ಪಾಲೇಮಾರ್
ದಾವಣಗೆರೆ: ಎಸ್.ಎ.ರವೀಂದ್ರನಾಥ್
ಬೀದರ್ : ರೇವೂನಾಯಕ್ ಬೆಳಮಗಿ
ಬೆಂಗಳೂರು (ಗ್ರಾ): ಬಿ.ಎನ್.ಬಚ್ಚೇಗೌಡ
ಚಾಮರಾಜನಗರ: ಪಿ.ಎಂ.ನರೇಂದ್ರಸ್ವಾಮಿ
ಗುಲ್ಬರ್ಗಾ: ಬಸವರಾಜ ಬೊಮ್ಮಾಯಿ
ಹಾವೇರಿ: ಸಿ.ಎಂ.ಉದಾಸಿ
ಕೊಪ್ಪಳ: ಶಿವರಾಜ್ ತಂಗಡಗಿ
ಕೊಡಗು: ಸಿ.ಎಚ್.ವಿಜಯ ಶಂಕರ್
ಹಾಸನ: ವಿ.ಸೋಮಣ್ಣ
ಬೆಂ. ದಕ್ಷಿಣ, ಮಂಡ್ಯ: ಆರ್.ಅಶೋಕ್
ಬೆಂಗಳೂರು ಉತ್ತರ: ಕಟ್ಟಾ ಸುಬ್ರಹ್ಮಣ್ಯ ನಾಯ್ಡು
ಬೆಳಗಾವಿ: ಉಮೇಶ್ ಕತ್ತಿ
ಕೋಲಾರ: ಎ.ನಾರಾಯಣ ಸ್ವಾಮಿ

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+