Get Updates
Get notified of breaking news, exclusive insights, and must-see stories!

ಪ್ರತಿಭಾ ಕೊಲೆ : ತೀರ್ಪಿನ ದಿನಾಂಕ ಮತ್ತೆ ಮುಂದೂಡಿಕೆ

ಬೆಂಗಳೂರು, ಸೆ. 27 : ತೀವ್ರ ಕುತೂಹಲ ಕೆರಳಿಸಿರುವ ಪ್ರತಿಭಾ ಶ್ರೀಕಂಠಮೂರ್ತಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ತೀರ್ಪಿನ ದಿನಾಂಕವನ್ನು ಇಂದು ಮತ್ತೆ ಮುಂದೂಡಲಾಗಿದ್ದು, ಅಕ್ಟೋಬರ್ 6ರಂದು ತೀರ್ಪು ಪ್ರಕಟವಾಗುವುದೆಂದು ನ್ಯಾಯಾಲಯ ಹೇಳಿದೆ.

ತ್ವರಿತ ನ್ಯಾಯಾಲಯ ಸೆ. 27ಕ್ಕೆ ತೀರ್ಪನ್ನು ಪ್ರಕಟಿಸುವುದಾಗಿ ಸೆಪ್ಟೆಂಬರ್ 11ರಂದು ತಿಳಿಸಿತ್ತು. ತೀರ್ಪಿನ ದಿನಾಂಕ ಮತ್ತೆ ಮುಂದೂಡಲಾಗಿರುವುದರಿಂದ ನ್ಯಾಯಕ್ಕಾಗಿ ಏಕಾಂಗಿ ಹೋರಾಟ ನಡೆಸಿರುವ ಪ್ರತಿಭಾ ಅವರ ತಾಯಿ ಗೌರಮ್ಮ ತೀರ್ಪಿಗಾಗಿ ಮತ್ತೆ ಕಾಯುವಂತಾಗಿದೆ..

Rape and murder

ಎಚ್ ಪಿ ಗ್ಲೋಬಲ್ ಕಾಲ್ ಸೆಂಟರ್ ಉದ್ಯೋಗಿಯಾಗಿದ್ದ ಪ್ರತಿಭಾ ರಾತ್ರಿಪಾಳಿಗೆ ಕಚೇರಿಗೆ ತೆರಳುವಾಗ ಕ್ಯಾಬ್ ಚಾಲಕ ಶಿವಕುಮಾರ್ ನಿಂದ 2005ರಲ್ಲಿ ಅತ್ಯಾಚಾರಕ್ಕೊಳಗಾಗಿ ಕೊಲೆಗೀಡಾಗಿದ್ದಳು. 2006ರಲ್ಲಿ ಈ ಪ್ರಕರಣವನ್ನು ತ್ವರಿತ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು. ನಾಲ್ಕು ವರ್ಷ ಕಳೆದರೂ ವೃದ್ಧಜೀವಿ ಗೌರಮ್ಮ ನ್ಯಾಯಾಲಯದ ಮೆಟ್ಟಲೇರಿರುವುದು ಇನ್ನೂ ತಪ್ಪಿಲ್ಲ.

ಈ ಕೇಸಿನಲ್ಲಿ ಯಾವುದೇ ನೇರ ಸಾಕ್ಷ್ಯಗಳಿಲ್ಲ. ಸಾಂದರ್ಭಿಕ ಸಾಕ್ಷ್ಯಗಳ ಮುಖಾಂತರವೇ ಅತ್ಯಾಚಾರ ಮತ್ತು ಕೊಲೆಯನ್ನು ಸಾಬೀತುಪಡಿಸಬೇಕಾಗಿದೆ.

ಸೆಲ್ ಫೋನಿನಲ್ಲಿ ದಟ್ಸ್ ಕನ್ನಡ ಓದುವ ಸಂಭ್ರಮ

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+