ಸಾಮಾನ್ಯ ಪ್ರವೇಶ ಪರೀಕ್ಷೆ(ಕ್ಯಾಟ್)ದಿನಾಂಕ ವಿಸ್ತರಣೆ
ಬೆಂಗಳೂರು,
ಸೆ.25: ಸಾಮಾನ್ಯ ಪ್ರವೇಶ ಪರೀಕ್ಷೆ (Common Admission Test-CAT) 2010 ನೋಂದಣೆ ದಿನಾಂಕವನ್ನು ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಐಐಎಂ) ವಿಸ್ತರಿಸಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಐಐಎಂಗಳು ಈ ನಿರ್ಧಾರಕ್ಕೆ ಬಂದಿವೆ. id="toptextpromo">ನೋಂದಣಿ
ದಿನಾಂಕವನ್ನು ವಿಸ್ತರಿಸುವಂತೆ ಅಭ್ಯರ್ಥಿಗಳಿಂದ ಬೇಡಿಕೆ ಬಂದಿತ್ತು. ಹಾಗಾಗಿ ಅಕ್ಟೋಬರ್ 4ರವರೆಗೂ ಕ್ಯಾಟ್ ಅರ್ಜಿಗಳನ್ನ್ನು ವಿತರಿಸಲಾಗುತ್ತಿದೆ. ಕ್ಯಾಟ್‌ಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಅಕ್ಟೋಬರ್ 7 ಎಂದು ಪ್ರಕಟಣೆ ತಿಳಿಸಿದೆ. id='are-slot-1' class='oiad oi-axt oiadv'> id='top-searched-articles'>ಈ
ಹಿಂದೆ ಕ್ಯಾಟ್ ಪರೀಕ್ಷೆಗೆ ಕೊನೆಯ ದಿನಾಂಕ ಸೆಪ್ಟೆಂಬರ್ 27 ಎಂದು ನಿಗದಿಪಡಿಸಲಾಗಿತ್ತು. ಅಕ್ಟೋಬರ್ 27ರಿಂದ ನವೆಂಬರ್ 24ರವರೆಗೆ ಪ್ರವೇಶ ಪ್ರಕ್ರಿಯೆ ನಡೆಯಲಿದೆ. ಕ್ಯಾಟ್ ಅರ್ಜಿಗಳು ಆಯ್ದ ಆಕ್ಸಿಸ್ ಬ್ಯಾಂಕ್ ಶಾಖೆಗಳಲ್ಲಿ ದೊರೆಯುತ್ತವೆ.











Click it and Unblock the Notifications