ವಿದ್ಯಾರ್ಥಿನಿಯ ಬಲಿ ತೆಗೆದುಕೊಂಡ ಕಿಲ್ಲರ್ ಬಸ್

Bus crushes college girl
ಬೆಂಗಳೂರು, ಸೆ. 22: ದ್ವಿಚಕ್ರ ವಾಹನಕ್ಕೆ ಖಾಸಗಿ ಬಸ್ ಢಿಕ್ಕಿ ಹೊಡೆದ ಪರಿಣಾಮ ಬಿಎಂಎಸ್ ಕಾಲೇಜು ವಿದ್ಯಾರ್ಥಿನಿಯೊಬ್ಬರು ಮೃತಪಟ್ಟ ದಾರುಣ ಘಟನೆ ಮಂಗಳವಾರ ಬೆಳಗ್ಗೆ 7:30ಕ್ಕೆ ಕೆ.ಆರ್.ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ವಿದ್ಯಾರ್ಥಿನಿಯನ್ನು ಅಕ್ಕಿತಿಮ್ಮನಹಳ್ಳಿ ನಿವಾಸಿ ಬದರಿ ನಾರಾಯಣಪ್ಪನವರ ಪುತ್ರಿ ಭಾನುಪ್ರಿಯಾ (19) ಎಂದು ಗುರುತಿಸಲಾಗಿದೆ. ಮೃತಳು ಬಿಎಂಎಸ್ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿಇ ವ್ಯಾಸಂಗ ಮಾಡುತ್ತಿದ್ದರು.

ಮಂಗಳವಾರ ಬೆಳಗ್ಗೆ ಸುಮಾರು 7:30 ಸಮಯದಲ್ಲಿ ತನ್ನ ತಂದೆಯನ್ನು ಊರ್ವಶಿ ಚಿತ್ರ ಮಂದಿರದ ಬಳಿ ಬಿಟ್ಟು. ದ್ವಿಚಕ್ರ ವಾಹನದಲ್ಲಿ ಕಾಲೇಜಿಗೆ ಹೋಗುತ್ತಿದ್ದ ಸಮಯದಲ್ಲಿ ಲಾಲ್‌ಬಾಗ್‌ನ ಕೃಂಬಿಗಲ್ ರಸ್ತೆಯ ಬದಿಯಲ್ಲಿದ್ದ ಕಸದ ರಾಶಿಯನ್ನು ತಪ್ಪಿಸಲು ಮುಂದಾದಾಗ ವಾಹನದ ನಿಯಂತ್ರಣ ತಪ್ಪಿಕೆಳಗೆ ಬಿದ್ದಿದ್ದಾಳೆ. ಈ ಸಮಯದಲ್ಲಿ ಹಿಂದಿನಿಂದ ವೇಗವಾಗಿ ಖಾಸಗಿ ಬಸ್ ಆಕೆಯ ತಲೆ ಮೇಲೆ ಹರಿದಿದೆ.

ಹೆಲ್ಮೆಟ್ ಧರಿಸಿದ್ದರೂ ತಲೆಗೆ ಗಂಭೀರ ಸ್ವರೂಪದ ಗಾಯವಾದ್ದರಿಂದ ಆಕೆ ಸ್ಥಳದಲ್ಲೆ ಮೃತಪಟ್ಟಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ಸಿನ ಚಾಲಕನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿರುವ ಕೆ.ಆರ್. ಮಾರ್ಕೆಟ್ ಸಂಚಾರಿ ಪೊಲೀಸರು ಬಸ್ ವಶಪಡಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+