ಬೆಂಗಳೂರಿಗೆ ಅಡಿಯಿಟ್ಟಿದೆ 'ಮದ್ರಾಸ್ ಐ' ಎಚ್ಚರ!

ಕಳೆದ ಐದು ದಿನಗಳಿಂದ ನಗರದ ಶಂಕರ್ ನೇತ್ರಾಲಯ ಚಿಕಿತ್ಸಾಲಯದಲ್ಲಿ 350 ಹೆಚ್ಚು ಪ್ರಕರಣಗಳು ದಾಖಲಾಗಿವೆ. ದಿನದಿಂದ ದಿನಕ್ಕೆ ಮದ್ರಾಸ್ ಐ ಪ್ರಕರಣಗಳು ಹೆಚ್ಚುತ್ತಲೆ ಇವೆ ಎಂದು ಶಂಕರ ನೇತ್ರಾಲಯ ವೈದ್ಯರು ತಿಳಿಸಿದ್ದಾರೆ. ವೈರಾಣು ಮತ್ತು ಬ್ಯಾಕ್ಟೀರಿಯಾದಿಂದ ಮದ್ರಾಸ್ ಐ ಹರಡುತ್ತದೆ.
ಸಾಮಾನ್ಯವಾಗಿ ಈ ರೋಗ ಮೇ ಅಥವಾ ಜೂನ್ ತಿಂಗಳಲ್ಲಿ ಹರಡುತ್ತದೆ. ಪುಷ್ಪದ ಪರಾಗ ರೇಣು ಗಾಳಿಯಲ್ಲಿ ಹಾರಾಡುವುದರಿಂದ ಕಣ್ಣು ಬೇಗ ರೋಗಕ್ಕೆ ತುತ್ತಾಗುತ್ತದೆ ಎನ್ನುತ್ತಾರೆ ವೈದ್ಯರು. ನಗರದ ಮೋದಿ ಆಸ್ಪತ್ರೆಯಲ್ಲೂ ಮದ್ರಾಸ್ ಐ ಪ್ರಕರಣಗಳು ದಿನವೊಂದಕ್ಕೆ 50 ರಿಂದ 60 ದಾಖಲಾಗುತ್ತಿವೆ.
ಮಿಂಟೋ ಕಣ್ಣಾಸ್ಪತ್ರೆಯಲ್ಲೂ ಪರಿಸ್ಥಿತಿ ಉಳಿದ ಆಸ್ಪತ್ರೆಗಳಿಗಿಂತ ಭಿನ್ನವಾಗಿಲ್ಲ. ಕಣ್ಣಿನಲ್ಲಿ ತೀವ್ರ ಉರಿ, ಕಣ್ಣು ಚುಚ್ಚಿದ ಅನುಭವ ಮದ್ರಾಸ್ ಐ ಲಕ್ಷಣಗಳು. ಅಕ್ಷಿಪಟಲಕ್ಕೆ ಸೋಂಕು ತಗುಲಿದರೆ ಗುಣಮುಖವಾಗಲು 6 ರಿಂದ 8 ತಿಂಗಳು ಬೇಕು. ಕೈಗಳನ್ನು ಆಗಾಗ ತೊಳೆದು ಸ್ವಚ್ಛವಾಗಿಟ್ಟುಕೊಳ್ಳಿ. ಕೈ ಕುಲುಕುವುದನ್ನು ತಪ್ಪಿಸಿ. ಇತರರ ಕರವಸ್ತ್ರ ಬಳಸದಿರಿ. ತೊಂದರೆ ಕಾಣಿಸಿಕೊಂಡರೆ ಕೂಡಲೆ ವೈದ್ಯರನ್ನು ಸಂಪರ್ಕಿಸಿ.












Click it and Unblock the Notifications