ಬಿಪಿಎಲ್ ಕುಟುಂಬಗಳಿಗೆ ಉಚಿತ ಎಲ್‌ಪಿಜಿ

Free LPG connection to BPL families
ನವದೆಹಲಿ, ಸೆ.10: ಬಡತನ ರೇಖೆಯ ಕೆಳಗಿರುವ (ಬಿಪಿಎಲ್) ಕುಟುಂಬಗಳಿಗೆ ಉಚಿತವಾಗಿ ಗೃಹ ಬಳಕೆ ಎಲ್‌ಪಿಜಿಯ ಹೊಸ ಸಂಪರ್ಕ ಕಲ್ಪಿಸುವ ಹೊಸ ಯೋಜನೆಗೆ ಕೇಂದ್ರ ಸರ್ಕಾರ ಅಕ್ಟೋಬರ್ ತಿಂಗಳಲ್ಲಿ ಚಾಲನೆ ನೀಡುವ ಸಾಧ್ಯತೆಯಿದೆ.

ಪ್ರಸ್ತುತ, ಒಬ್ಬ ಗ್ರಾಹಕ ಹೊಸ ಎಲ್‌ಪಿಜಿ ಸಂಪರ್ಕವನ್ನು ಪಡೆಯಲು 1,250 ರೂ.ಗಳನ್ನು ಭದ್ರತಾ ಕಾರಣಗಳಿಗಾಗಿ ಠೇವಣಿ ಇಡಬೇಕಾಗುತ್ತದೆ. ಅಲ್ಲದೆ ಇನ್ನೂ 150 ರೂ.ಗಳನ್ನು ಗತಿ ನಿಯಂತ್ರಣಾ(ಪ್ರೆಶರ್ ರೆಗ್ಯುಲೇಟರ್)ಕ್ಕಾಗಿ ಕಟ್ಟಬೇಕಾಗುತ್ತದೆ. ಆದರೆ, ಹೊಸ ಸಂಪರ್ಕವನ್ನು ಪಡೆಯಲು ಕಟ್ಟಬೇಕಾದ ಈ 1,400 ರೂಗಳನ್ನು ಈಗ ಸರಕಾರ ಸಬ್ಸಿಡಿಯಾಗಿ ಭರಿಸಲಿದೆ.

ಬಿಪಿಎಲ್ ಕುಟುಂಬಗಳಿಗೆ ಎಲ್‌ಪಿಜಿಯ ಹೊಸ ಸಂಪರ್ಕಗಳನ್ನು ಕಲ್ಪಿಸುವ ಸಲುವಾಗಿ, ಸಬ್ಸಿಡಿಯನ್ನು ಭರಿಸಲು 490 ಕೋಟಿ ರೂಪಾಯಿಗಳನ್ನು ಬಜೆಟ್‌ನಲ್ಲಿ ಮೀಸಲಿಡಲಾಗುವುದು. ಮುಂಬರುವ ವಾರಗಳಲ್ಲಿ ಈ ಯೋಜನೆಗೆ ಮಂತ್ರಿಮಂಡಲದ ಅಂಗೀಕಾರ ದೊರೆಯುವ ನಂಬಿಕೆ ಯಿದ್ದು, ಅ.2ಕ್ಕೆ ಗಾಂಧೀ ಜಯಂತಿಯಂದು ಈ ಯೋಜನೆಗೆ ಚಾಲನೆ ನೀಡುವ ಗುರಿಯಿದೆ ಎಂದು ತೈಲ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಎಲ್‌ಪಿಜಿಯ ನವೀನ ಸಂಪರ್ಕಗಳಿಗೆ ಸಬ್ಸಿಡಿ ನೀಡುವ ಈ ಯೋಜನೆಯು ಯುಪಿಎ ನೇತೃತ್ವ ಸರಕಾರದ ಎರಡನೆ ಬಾರಿ ಅಧಿಕಾರಾವಧಿಯಲ್ಲಿನ ಬಡವರ ಪರವಾದ ಅತಿ ದೊಡ್ಡ ಯೋಜನೆಯಾಗಲಿದೆ. ಅಲ್ಲದೆ, ಉದ್ಯೋಗ ಖಾತರಿ ಯೋಜನೆ ಹಾಗೂ ಸಾಲಗಳಿಗೆ ವಿನಾಯಿತಿ ನೀಡುವ ಯೋಜನೆಗಳು ಯುಪಿಎ ಸರಕಾರದ ಪ್ರಥಮಾವಧಿಯಲ್ಲಿ ಅನುಷ್ಠಾನಗೊಂಡ ದೊಡ್ಡ ಯೋಜನೆಗಳಾಗಿವೆ ಎಂದು ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲಗಳ ರಾಜ್ಯ ಸಚಿವ ಜಿತಿನ್ ಪ್ರಸಾದ ಅಭಿಪ್ರಾಯಪಟ್ಟಿದ್ದಾರೆ.

ಪ್ರತಿ ವರ್ಷ ಬಡತನ ರೇಖೆಯ ಕೆಳಗಿನ 35 ಲಕ್ಷ ಕುಟುಂಬಗಳಿಗೆ ಎಲ್‌ಪಿಜಿ ಸಂಪರ್ಕ ಕಲ್ಪಿಸಲಾಗುವುದು. ಇಂಡಿಯನ್ ಆಯಿಲ್, ಭಾರತ್ ಪೆಟ್ರೋಲಿಯಂ ಹಾಗೂ ಹಿಂದೂಸ್ತಾನ್ ಪೆಟ್ರೋಲಿಯಂ ಕಾರ್ಪೋರೇಷನ್, ಈ ಖಾಸಗಿ ತೈಲ ವ್ಯಾಪಾರ ಕಂಪನಿಗಳ ಮೂಲಕ ಈ ಯೋಜನೆಯನ್ನು ನಿಯಂತ್ರಿಸಲಾಗುವುದೆಂದು ಅವರು ಹೇಳಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+