ಒಂಬತ್ತು ತಿಂಗಳ ಗರ್ಭಿಣಿ ಪತ್ನಿಗೆ ಬೆಂಕಿ ಇಟ್ಟ ಪತಿ

ಮೆಹರುನ್ನೀಸಾ(24) ಬೆಂಕಿ ಹಚ್ಚಿಸಿಕೊಂಡ ನೃತದೃಷ್ಟ ಹೆಣ್ಣು ಮಕ್ಕಳು. ಕಳೆದ ಮೂರು ವರ್ಷಗಳ ಹಿಂದೆ ಅಗೋರಿ ರಾಮನ್ ಕಿಶೋರ್ ಎಂಬುವವರನ್ನು ಮೆಹರುನ್ನೀಸಾ ಮದುವೆಯಾಗಿದ್ದರು. ಮದುವೆ ನಂತರ ಕಿಶೋರ್ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದು, ಸಯ್ಯದ್ ಅಬ್ದುರ್ ರೆಹಮಾನ್ ಎಂದು ಹೆಸರು ಬದಲಿಸಿಕೊಂಡಿದ್ದ.
ಮೆಹರುನ್ನೀಸಾ ಹೇಳಿಕೆ : ಮೊದಲೆರಡು ವರ್ಷ ಸಂಸಾರ ಸುಖಮಯವಾಗಿತ್ತು. ಆದರೆ, ಗರ್ಭಿಣಿ ಆದ ನಂತರ ಪತಿಯ ನಡವಳಿಕೆಯಲ್ಲಿ ಬಾರಿ ಬದಲಾವಣೆಗಳು ಕಂಡು ಬರತೊಡಗಿದವು. ಯಾವ ಒತ್ತಡವಿಲ್ಲದೆ ಇಸ್ಲಾಂ ಧರ್ಮಕ್ಕೆ ಮತಾಂತರವಾಗಿದ್ದ ಕಿಶೋರ್ ಬರುಬರುತ್ತಾ, ಇಸ್ಲಾಂ ಧರ್ಮದಿಂದ ಹಿಂದೂ ಧರ್ಮಕ್ಕೆ ಮತಾಂತರ ಆಗಲು ಪೀಡಿಸತೊಡಗಿದ. ಆದರೆ, ನಾನು ಅದನ್ನು ವಿರೋಧಿಸಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ನಮ್ಮಿಬ್ಬರು ನಡುವೆ ಪದೇಪದೆ ವಾಗ್ವಾದ, ಆರೋಪ, ಪ್ರತ್ಯಾರೋಪಗಳು ನಡೆಯುತ್ತಿದ್ದವು.
ನಾನು ಗರ್ಭಿಣಿ ಆದ ನಂತರ ತನ್ನ ಪೋಷಕರೊಂದಿಗೆ ಪತಿ ವಾಸಿಸುತ್ತಿದ್ದ. ಈ ಸಂದರ್ಭದಲ್ಲಿ ಅವರ ಪೋಷಕರು ಆತನನ್ನು ಹಿಂದು ಧರ್ಮಕ್ಕೆ ಮತಾಂತರವಾಗು ಎಂದು ಪ್ರೆರೇಪಿಸಿದ್ದರಿಂದ ನನಗೆ ಹಿಂದೂ ಧರ್ಮಕ್ಕೆ ಮತಾಂತರವಾಗುವಂತೆ ಕಾಡತೊಡಗಿದ. ಅಲ್ಲದೇ ಕೆಲಸಕ್ಕೆ ಹೋಗುವುದು ಬೇಡ ಎಂದು ಒತ್ತಾಯಿಸತೊಡಗಿದ. ಆದರೆ, ನನ್ನ ಮನೆಯಲ್ಲಿ ನಾನೇ ಹಿರಿಯವಳು ಜೊತೆಗೆ ಆರ್ಥಿಕ ಸಂಕಷ್ಟ ಇದ್ದುದ್ದರಿಂದ ಕೆಲಸ ಬಿಡಲು ನಿರಾಕರಿಸಿದೆ.
ಹೀಗಾಗಿ ಈ ಎರಡು ಕಾರಣಗಳು ನಮ್ಮಿಬ್ಬರ ಸಂಬಂಧ ಕೆಡಲು ಕಾರಣವಾಗಿದೆ. ಪತಿ ಸಯ್ಯದ್ ಅಲಿಯಾಸ್ ಕಿಶೋರ್ ನನ್ನ ದೇಹಕ್ಕೆ ಆಯಿಂಟ್ ಮೆಂಟ್ ಹಚ್ಚುವ ನೆಪದಲ್ಲಿ ಬೆಂಕಿ ಹಚ್ಚಿ ಕೊಲ್ಲಲು ಯತ್ನಿಸಿದ. ಅಕ್ಕಪಕ್ಕದವರು ಬಂದು ನನ್ನ ಜೀವ ಉಳಿಸಿದರು ಎಂದು ಪೊಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ಮೆಹರುನ್ನೀಸಾ ಹೇಳಿದ್ದಾರೆ.
ಶೇ. 35ರಷ್ಟು ಸುಟ್ಟ ಗಾಯಳಿಂದ ಬಳಲುತ್ತಿರುವ ಮೆಹರುನ್ನೀಸಾ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿಯೊಂದಿಗೆ ಜೀವಿಸಲು ಇಷ್ಟವಿಲ್ಲ. ಹೀಗಾಗಿ ವಿಚ್ಚೇದನಕ್ಕೆ ಅರ್ಜಿ ಹಾಕಿರುವುದಾಗಿ ಅವರು ಹೇಳಿದ್ದಾರೆ.
-
Karnataka Weather: ಕರ್ನಾಟಕದ ಈ 9 ಜಿಲ್ಲೆಗಳಲ್ಲಿ ಮಾರ್ಚ್ 21ರವರೆಗೆ ಮಳೆ ಸಾಧ್ಯತೆ: ಹವಾಮಾನ ಇಲಾಖೆ -
Bengaluru Rent: ಬೆಂಗಳೂರು ಬಾಡಿಗೆ ಮನೆ ಸಮಸ್ಯೆ: 10 ತಿಂಗಳ ಮುಂಗಡ ಹಣ,ಮಾಲೀಕರ ಕಿರಿಕಿರಿ; 2026ರ ಹೊಸ ಬಾಡಿಗೆ ನಿಯಮವೇನು -
ಸರಕು ಖಾಲಿಯಾಯ್ತಾ ಪ್ರೇಮ್, ಇಡೀ ದೇಶದ ಮುಂದೆ ಕನ್ನಡಿಗರು ತಲೆತಗ್ಗಿಸುವಂತೆ ಮಾಡಿದಿರಿ: ಸೆರಗ ಸರ್ಸೆ ಹಾಡಿಗೆ ವಿರೋಧ -
Horoscope March 16; ಈ ರಾಶಿಯವರಿಗೆ ಶುಭ ಸುದ್ದಿ ಬರಬಹುದು -
Anil Kumble: ನಟ ಶಾರುಖ್ ಖಾನ್ ಮಾಲೀಕತ್ವದ ಕೆಕೆಆರ್ ತಂಡ ದಾರಿತಪ್ಪಿದ ಬಗ್ಗೆ ಅನಿಲ್ ಕುಂಬ್ಳೆ ಮಹತ್ವದ ಮಾಹಿತಿ -
ಪಿಯು ಮೌಲ್ಯಮಾಪನ ಬಹಿಷ್ಕಾರಕ್ಕೆ ಮುಂದಾದ ಉಪನ್ಯಾಸಕರು: ಫಲಿತಾಂಶ ವಿಳಂಬದ ಆತಂಕದಲ್ಲಿ ದ್ವಿತೀಯ ಪಿಯು ವಿದ್ಯಾರ್ಥಿಗಳು -
Amala Paul: ಡೇಟಿಂಗ್ನಲ್ಲೇ ಗರ್ಭಿಣಿಯಾದೆ, ಆತುರದಲ್ಲಿ ಎರಡನೇ ಮದುವೆ ಆಯ್ತು: ಹೆಬ್ಬುಲಿ ನಟಿ ಅಮಲಾ ಪೌಲ್ -
ಹೆಣ್ಣುಬಾಕ ಕಾಮಪೀಠಿ ವೈರಮುತ್ತು ರಾಮಸ್ವಾಮಿ ಜ್ಞಾನಪೀಠಕ್ಕೆ ಕಳಂಕ: ಲೇಖಕ ಅರುಣ್ ಜೋಳದಕೂಡ್ಲಿಗಿ -
ಟೀಂ ಇಂಡಿಯಾಗೆ ನನ್ನದೊಂದು ಸಲಾಂ, ಐಪಿಎಲ್ ಬಗ್ಗೆ ಮನದಾಳದ ಮಾತು ಬಿಚ್ಚಿಟ್ಟ ಪಂಜಾಬ್ ಕಿಂಗ್ಸ್ ಕೋಚ್ ರಿಕಿ ಪಾಂಟಿಂಗ್ -
Horoscope March 17; ಈ ರಾಶಿಯವರ ಅದೃಷ್ಟ ಇಂದು ಬದಲಾಗಬಹುದು -
Byadagi Chilli: ಕರ್ನಾಟಕದ ಕೆಂಪು ಚಿನ್ನ ಬ್ಯಾಡಗಿ ಮೆಣಸಿನಕಾಯಿಗೆ ಹೊಸ ಸಂಕಷ್ಟ, ರೈತರು ಕಂಗಾಲು -
Piped Gas: ಬೆಂಗಳೂರಿಗರಿಗೆ ತಲುಪದ ಪೈಪ್ಡ್ ಗ್ಯಾಸ್: ಮಹತ್ವಾಕಾಂಕ್ಷಿ ಯೋಜನೆಗೆ ವಿಘ್ನಗಳ ಸರಮಾಲೆ












Click it and Unblock the Notifications