ಸ್ವಿಸ್ ಬ್ಯಾಂಕ್ ತುಂಬಾ ಕಾಂಗ್ರೆಸ್ಸಿಗರ ಕಪ್ಪುಹಣ

ಕಪ್ಪು ಹಣದಲ್ಲಿ ಬಹುತೇಕ ಪಾಲು ಕಾಂಗ್ರೆಸ್ ಮುಖಂಡರದ್ದೇ ಆಗಿರುವುದರಿಂದ ಇದನ್ನು ಬಹಿರಂಗ ಮಾಡಲು ಹಿಂದೆ-ಮುಂದೆ ನೋಡುತ್ತಿದ್ದಾರೆ. ಈ ಹಣದ ಮಾಹಿತಿ ಹಣಕಾಸು ಸಚಿವ ಪ್ರಬ್‌ಮುಖರ್ಜಿ ಅವರಿಗೂ ಗೊತ್ತಿದೆ ಎಂದರು.
ರಾಷ್ಟ್ರೀಯ ನವ ನಿರ್ಮಾಣ ವೇದಿಕೆಯು ನಗರದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಾಜಿ ಮುಖ್ಯಮಂತ್ರಿ ದಿ. ರಾಮ ಕೃಷ್ಣ ಹೆಗಡೆ ಅವರ 85ನೇ ಹುಟ್ಟುಹಬ್ಬದ ಅಂಗವಾಗಿ ಸಂಸತ್ ಹಾಗೂ ರಾಜಕೀಯ ಸಂಸ್ಕೃತಿ ಕುರಿತ ವಿಚಾರ ಸಂಕಿರಣದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಮಾಜಿ ಮುಖ್ಯಮಂತ್ರಿ ದಿ. ರಾಮಕೃಷ್ಣ ಹೆಗಡೆ ಅವರು ಉದಾರಿಕರಣದ ಕನಸು ಕಂಡವರು. ಆದರೆ ಇಂದಿನ ಯುವ ರಾಜಕಾರಣಿಗಳಲ್ಲಿ ಅಂತಹ ಕನಸೇ ಕಾಣದಂತಾಗಿದೆ. ಭವಿಷ್ಯದ ಭವ್ಯ ಭಾರತಕ್ಕೆ ಕೈ, ಬಾಯಿ ಶುದ್ಧಿ ಇರುವ ಯುವ ನಾಯಕರು ಮುಂದೆ ಬರಬೇಕು. ಇಲ್ಲವಾದಲ್ಲಿ ಪ್ರಜಾಪ್ರಭುತ್ವಕ್ಕೆ ಅರ್ಥವೇ ಇಲ್ಲದಂತಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.












Click it and Unblock the Notifications