ಮುತ್ತುಲಕ್ಷ್ಮಿ ನೆರವಿಗೆ ಯಾರೂ ಬರುತ್ತಿಲ್ಲವಂತೆ!
ಸೇಲಂ,
ಆ. 26 : ಕರ್ನಾಟಕದ ಜೈಲಿನಲ್ಲಿರುವ ಕಾಡುಗಳ್ಳ ವೀರಪ್ಪನ್ ಪತ್ನಿ ಮುತ್ತುಲಕ್ಷ್ಮಿ ಜಾಮೀನು ಪಡೆಯಲು ನಡೆಸಿದ ಎಲ್ಲ ಪ್ರಯತ್ನಗಳು ವಿಫಲವಾಗಿದ್ದು, ಇದೀಗ ಆಕೆಯ ನೆರವಿಗೆ ಯಾರೂ ಬರುತ್ತಿಲ್ಲ ಎಂದು ಮುತ್ತುಲಕ್ಷ್ಮಿ ಸಹೋದರಿ ಧನಂ ಆರೋಪಿಸಿದ್ದಾರೆ. id="toptextpromo">ಹಲವು
ವರ್ಷಗಳ ಹಿಂದೆ ಕರ್ನಾಟಕದ ವಿಭಾಗೀಯ ಅರಣ್ಯಾಧಿಕಾರಿ ಶ್ರೀನಿವಾಸನ್ ರನ್ನು ವೀರಪ್ಪನ್ ತಂಡ ಹತ್ಯೆ ಮಾಡಿದ ಪ್ರಕರಣ ಸೇರಿದಂತೆ ಮುತ್ತುಲಕ್ಷ್ಮಿ ವಿರುದ್ದ 5 ಮೊಕದ್ದಮೆಗಳು ಬಾಕಿ ಇವೆ. ಆಕೆಯನ್ನು ನೋಡಲು ಆಕೆಯ ಇಬ್ಬರು ಮಕ್ಕಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದ್ದು, ಬೇರೆ ಯಾರಿಗೂ ಪೊಲೀಸರು ಅನುಮತಿ ನೀಡುತ್ತಿಲ್ಲ ಎಂದು ಧನಂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. id='are-slot-1' class='oiad oi-axt oiadv'> id='top-searched-articles'>ಮುತ್ತುಲಕ್ಷ್ಮಿ
ಬಿಡುಗಡೆ ತಮಿಳುನಾಡು ಮಾನವ ಸಂಪನ್ಮೂಲ ಸಮಿತಿ ಸಹಾಯ ಸಹಕಾರ ನೀಡುವುದಾಗಿ ಈ ಹಿಂದೆ ಘೋಷಿಸಿತ್ತು. ಆದರೆ, ಇದೀಗ ಅವರು ಕೂಡಾ ಸಹೋದರಿಯ ಬಿಡುಗಡೆಗೆ ಪ್ರಾಮಾಣಿಕ ಕೆಲಸ ಮಾಡುತ್ತಿಲ್ಲ. ವೀರಪ್ಪನ್ ಇಬ್ಬರು ಹೆಣ್ಣುಮಕ್ಕಳಲ್ಲಿ ಹಿರಿಯ ಮಗಳು ಬಿಎ ಇಂಗ್ಲಿಷ್ ಓದುತ್ತಿದ್ದರೆ, ಕಿರಿಯ ಮಗಳು ಚೆನ್ನೈಯ ಕಾಲೇಜೊಂದರಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡುತ್ತಿದ್ದಾರೆ.











Click it and Unblock the Notifications