ವಿನಾಕಾರಣ ಥಳಿಸಿದ ಪೇದೆಗಳ ಅಮಾನತು

Cops suspended for detaining boys
ಬೆಂಗಳೂರು, ಆ.24: ಹುಟ್ಟು ಹಬ್ಬ ಆಚರಿಸುತ್ತಿದ್ದ ಕೆಲ ಯುವಕರನ್ನು ಠಾಣೆಗೆ ಕರೆತಂದು ಅನುಚಿತ ವರ್ತನೆ ತೋರಿದ ಎಎಸ್‌ಐ ಸೇರಿ ಮೂವರು ಪೇದೆಗಳನ್ನು ಅಮಾನುತುಗೊಳಿಸಿ ನಗರ ಪೋಲಿಸ್ ಆಯುಕ್ತ ಶಂಕರ ಬಿದರಿ ಆದೇಶ ಹೊರಡಿಸಿದ್ದಾರೆ.

ಸಂಜಯನಗರದ ಎಎಸ್‌ಐ ನಾಗರಾಜಪ್ಪ, ಪೇದೆಗಳಾದ ವೆಂಕಟೇಶ,ವೀರಭದ್ರಯ್ಯ,ನಾಗಪ್ಪ ಅಮಾನತುಗೊಂಡವರು.ಆ.16 ರಂದು ಸಂಜಯನಗರದ ವ್ಯಾಪ್ತಿಯ ಭೂಪಸಂದ್ರದ ಅಪಾರ್ಟ್‌ಮೆಂಟ್‌ನಲ್ಲಿ ಇಂಜನಿಯರಿಂಗ್ ವಿದ್ಯಾರ್ಥಿ ಸೈಯದ್ ಸಿದ್ಧಿಕಿಯ ಹುಟ್ಟು ಹಬ್ಬದ ನಿಮಿತ್ತ ಔತಣಕೂಟ ಏರ್ಪಡಿಸಲಾಗಿತ್ತು.

ಅತಿಯಾದ ಗಲಾಟೆ ಮಾಡುತ್ತಿದ್ದರು ಎಂಬ ಕಾರಣಕ್ಕೆ ಪಕ್ಕದ ಅಪಾರ್ಟ್‌ಮೆಂಟ್‌ನವರು ಸಂಜಯನಗರ ಪೊಲೀಸರಿಗೆ ದೂರವಾಣಿ ಮೂಲಕ ದೂರು ನೀಡಿದ್ದರು. ಇಬ್ಬರು ಪೇದೆಗಳು ತೆರಳಿ ಗಲಾಟೆ ಮಾಡುತ್ತಿದ್ದವರನ್ನು ಠಾಣೆಗೆ ಎಳೆದುಕೊಂಡು ಬಂದಿದ್ದಾರೆ.

ಇಲ್ಲಿ ಎಎಸ್‌ಐ ನಾಗರಾಜಪ್ಪ ಯುವಕರ ಬಳಿ ಇದ್ದ ಹಣವನ್ನು ಕಿತ್ತುಕೊಂಡು, 15 ಸಾವಿರ ರು ಕೊಡುವಂತೆ ಪೀಡಿಸತೊಡಗಿದರು. ವಿದ್ಯಾರ್ಥಿಗಳ ಜೊತೆ ಬೇಕಾ ಬಿಟ್ಟಿ ವರ್ತನೆ ನಡೆಸಿದ್ದರು. ಅಮಾನತುಗೊಂಡ ಪೇದೆಗಳು ಸಹ ಪುಂಡಾಟಿಕೆ ಮಾಡಿದ್ದಾರೆ. ಇದೆಲ್ಲವನ್ನು ಓರ್ವ ಯುವಕ ತನ್ನ ಮೊಬೈಲ್‌ನಲ್ಲಿ ಚಿತ್ರೀಕರಿಸಿದ್ದು , ಪಾನಮತ್ತರಾಗಿದ್ದ ಪೇದೆಗಳಿಗೆ ಇದರ ಅರಿವಿರಲಿಲ್ಲ. ಇದರ ಆಧಾರದ ಮೇಲೆ ನಾಲ್ವರನ್ನು ಅಮಾನತುಗೊಳಿಸಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+