ಬೆಂಗಳೂರಿಗೆ ಬತ್ತಿ ಇಟ್ಟವನು ಮದನಿ : ಆಚಾರ್ಯ

ಏಪ್ರಿಲ್ 17ರಂದು ನಗರದ ಚಿನ್ನಸ್ವಾಮಿ ಕ್ರೀಡಾಂಗಣ(KSCA)ದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಮುಂಬೈ ಇಂಡಿಯನ್ಸ್ (MI) ನಡುವಿನ ಪಂದ್ಯದ ಆರಂಭಕ್ಕೂ ಮುನ್ನ ಮೈದಾನದ ಹೊರಗೆ ಎರಡು ಸ್ಫೋಟಗಳು ಸಂಭವಿಸಿದ್ದವು. ಆಮೇಲೆ ಕ್ರೀಡಾಂಗಣದ ಸುತ್ತಾ ಅನೇಕ ಸಜೀವ ಬಾಂಬ್ ಗಳು ಸಹ ಪತ್ತೆಯಾಗಿತ್ತು.
ಅನಿಲ್ ಕುಂಬ್ಳೆ ವೃತ್ತ ಹಾಗೂ ಮೈದಾನ ಗೇಟ್ 12 ರ ಜನರೇಟರ್ ರೂಂ ಬಳಿ ಎರಡು ಸ್ಫೋಟ ಸಂಭವಿಸಿತ್ತು. ಸುಮಾರು ಆರೇಳು ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದವು. ಅಂದಿನ ಪಂದ್ಯವನ್ನು ಅರ್ಧಗಂಟೆ ತಡವಾಗಿ ಆರಂಭಿಸಲಾಯಿತು.
ಈ ಬಾಂಬ್ ಸ್ಫೋಟದ ಹಿಂದಿನ ಶಕ್ತಿ ಮದನಿ, 2008ರ ಸರಣಿ ಬಾಂಬ್ ಸ್ಫೋಟಕ್ಕೂ ಕಾರಣ ಎಂಬ ಆರೋಪ ಹೊರೆಸಲಾಗಿದೆ. ಮದನಿಯನ್ನು ಕೊಲ್ಲಂನಲ್ಲಿ ಆ.17ರಂದು ಬಂಧಿಸಿ, ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸಲಾಗುತ್ತಿದೆ.












Click it and Unblock the Notifications