ಮಾಲೂರಿನ ಲವ್ ಜಿಹಾದ್ ಗೆ ಒಳ್ಳೆ ಕ್ಲೈಮ್ಯಾಕ್ಸ್
ಮಾಲೂರು,
ಆ.23: ಕರಾವಳಿ, ಮಲೆನಾಡು ಪ್ರಾಂತ್ಯಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದ ಲವ್ ಜಿಹಾದ್ ಪ್ರಕರಣ ಇತ್ತೀಚೆಗೆ ಕೋಲಾರಕ್ಕೂ ಹಬ್ಬಿದ್ದು, ಕೋಲಾರದ ಒಂದು ಲವ್ ಜಿಹಾದ್ ಪ್ರಕರಣದ ಬೆನ್ನಲ್ಲೆ ಮಾಲೂರಿನಲ್ಲಿ ಲವ್ ಜಿಹಾದ್ ಪ್ರಕರಣ ವೊಂದು ಬೆಳಕಿಗೆ ಬಂದಿದೆ. id="toptextpromo">ಮಾಲೂರಿನ
ಮುಸ್ಲಿಂ ಕೋಮಿಗೆ ಸೇರಿದ ಬಷೀರ್ ಎಂಬಾತ ಟೆಂಪೋಚಾಲಕನಾಗಿ ವೃತ್ತಿಯಲ್ಲಿದ್ದಾನೆ. ತೋಟಗಳಿಗೆ ಸೊಪ್ಪುಗಳನ್ನು ತಂದು ಹಾಕಿ ಬಾಡಿಗೆ ಪಡೆಯುವುದು ಈತನ ಕೆಲಸ. ಈಗಾಗಲೆ ಮದುವೆಯಾಗಿ ಎರಡು ಮಕ್ಕಳ ತಂದೆಯಾಗಿರುವ ಬಷೀರ್ ಗೆ ಹಿಂದೂ ಹುಡುಗಿ ಭಾರತಿಯ ಮೇಲೆ ಪ್ರೀತಿ ಹುಟ್ಟುಕೊಂಡಿದೆ. id='are-slot-1' class='oiad oi-axt oiadv'> id='top-searched-articles'>ಈ
ವಿಷಯ ಭಾರತಿ ಮನೆ ಕಡೆಯವರಿಗೆ ಊರಿನ ಹಿರಿಯರಿಗೆ ತಿಳಿದು, ಬಷೀರ್ ಗೆ ಬುದ್ಧಿ ಹೇಳಿದ್ದರು. ಕೆಲಕಾಲ ಸುಮ್ಮನಿದ್ದ ಬಷೀರ್ ಮತ್ತೆ ಚಾಳಿ ಮುಂದುವರೆಸಿದಾಗ, ಪ್ರಕರಣ ಪೊಲೀಸ್ ಠಾಣೆವರೆಗೂ ತಲುಪಿದೆ. ಈ ಕೇಸಿಗೆ ಮದುವೆಯೇ ಸೂಕ್ತ ಪರಿಹಾರ ಎಂದು ನಿರ್ಧರಿಸಿದ ಪಂಚಾಯಿತಿಯವರು, ಭಾರತಿಯನ್ನು ಮದುವೆಗೆ ಒಪ್ಪಿಸಿ ಉಪನೊಂದಾಣಾಧಿಕಾರಿಗಳ ಕಚೇರಿಯಲ್ಲಿ ಮದುವೆ ಮಾಡಿಸಿ, ಬಷೀರ್ ಗೆ ಭಾರತಿಯನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಹೇಳಿ ಕಳಿಸಿದ್ದಾರೆ.











Click it and Unblock the Notifications