ಸ್ಥಿರ ದೂರವಾಣಿಗೂ ಹತ್ತು ಅಂಕಿ:ಟ್ರಾಯ್

ಈಗ ಮೊಬೈಲ್ ದೂರವಾಣಿಗಳು ಮಾತ್ರ 10ಅಂಕಿಗಳನ್ನು ಹೊಂದಿದ್ದು ಸ್ಥಿರ ದೂರವಾಣಿಗಳು 8 ಅಂಕಿಗಳನ್ನು ಹೊಂದಿವೆ. ಈ ಹಿಂದೆ ಟ್ರಾಯ್ ಎಲ್ಲಾ ದೂರವಾಣಿಗಳಿಗೂ 11 ಅಂಕಿಗಳನ್ನು ಅಳವಡಿಸಿಕೊಳ್ಳುವಂತೆ ಸೂಚನೆ ನೀಡಲು ನಿರ್ಧರಿಸಿತ್ತು.
ಆದರೆ, ಇದರಿಂದ ಗ್ರಾಹಕರಿಗೆ ಗೊಂದಲ, ಟೆಲಿಕಾಮ್ ಕಂಪೆನಿಗಳು ತಂತ್ರಜ್ಞಾನವನ್ನು ಉನ್ನತೀಕರಿಸಲು ಭರಿಸಬೇಕಾದ ಹೆಚ್ಚಿನ ವೆಚ್ಚ ಮತ್ತು ಪುನಃ ಗ್ರಾಹಕರಿಗೆ ಹೊಸ ಸಿಮ್ ಕಾರ್ಡ್ ಗಳನ್ನು ವಿತರಿಸಬೇಕಾದ ತೊಂದರೆಯಿಂದ ಈ ಪ್ರಸ್ತಾವನೆಯನ್ನು ಕೈ ಬಿಟ್ಟಿತ್ತು.
ಸ್ಥಿರ ದೂರವಾಣಿಗಳು 10 ಅಂಕಿಗಳನ್ನು ಹೊಂದಲು ಎಲ್ಲಾ ಸಿದ್ಧತೆಯನ್ನು ಮುಂದಿನ ಸೆಪ್ಟೆಂಬರ್ 2011ರೊಳಗೆ ಮಾಡಬೇಕಿದೆ ಎಂದು ಟ್ರಾಯ್ ಹೇಳಿದ್ದು, ತನ್ನ ಇಫಿಶಿಯಂಟ್ ಯೂಸೇಜ್ ಆಫ್ ನಂಬರಿಂಗ್ ರಿಸೋರ್ಸಸ್ ಇನ್ ಇಂಡಿಯಾದ ವರದಿಯಲ್ಲಿ ಈ ವಿಷಯ ಸ್ಪಷ್ಟಪಡಿಸಿದೆ.
10 ಅಂಕಿಗಳ ಸಂಖೆಯನ್ನು ದೇಶದ ಎಲ್ಲಾ ದೂರವಾಣಿಗಳಿಗೆ ಅಳವಡಿಸುವುದರಿಂದ ಮುಂದಿನ 30-40 ವರ್ಷಗಳವರೆಗೆ ಹೊಸ ಸಂಪರ್ಕಗಳನ್ನು ಅಡ್ಡಿಯಿಲ್ಲದೆ ನೀಡಬಹುದಾಗಿದೆ, ಅಲ್ಲದೆ ನಂಬರ್ ಪೋರ್ಟೆಬಿಲಿಟಿ ಸೌಲಭ್ಯವನ್ನು ಸ್ಥಿರ ದೂರವಾಣಿಗಳಿಗೂ ನೀಡಬಹುದಾಗಿದೆ.
ಈಗಿನ ನಂಬರಿಂಗ್ ಸಿಸ್ಟಮ್ ನ್ನು 750 ಮಿಲಿಯ ಗ್ರಾಹಕರಿಗೆ ಸಂಪರ್ಕ ನೀಡಲು ಬಳಸಬಹುದಾಗಿದ್ದು, 2014ಕ್ಕೆ ದೇಶದ ಗ್ರಾಹಕರ ಸಂಖ್ಯೆ ಒಂದು ಬಿಲಿಯನ್ ಮೀರಲಿದೆ ಎನ್ನಲಾಗಿದೆ.











Click it and Unblock the Notifications