ಭಾರತದ ಅತ್ಯುತ್ತಮ ಶಾಲಾ ವಾಹನ!

The best school bus in India!
ಹೊಳೆ ದಾಟಿ, ಕಾಡು ದಾರಿಯಲ್ಲಿ ಕೊಡೆ ಹಿಡಿದು ನಡೆದು ಶಾಲೆ ತಲುಪುವ ದಿನಗಳು ಭಾರತದಲ್ಲಿ ಇನ್ನಿಲ್ಲವಾಗಿವೆ. ನಮ್ಮ ಮಕ್ಕಳು ನಿತ್ಯ ಶಾಲೆಗೆ ನಡೆದುಹೋಗುವ ತೊಂದರೆಯಿಂದ ತಪ್ಪಿಸಿಕೊಂಡಿದ್ದಾರೆ. ಬಗೆಬಗೆಯ ವಾಹನಗಳ ನೆರವಿನಿಂದ ಅವರು ಸುರಕ್ಷಿತವಾಗಿ, ಸಮಯಕ್ಕೆ ಸರಿಯಾಗಿ ತಮ್ಮ ತಮ್ಮ ವಿದ್ಯಾಕೇಂದ್ರಗಳನ್ನು ಸೇರಿಕೊಳ್ಳುವ ವ್ಯವಸ್ಥೆ ಚಾಲ್ತಿಗೆ ಬಂದಿವೆ.

ಈಗ ಶಾಲೆಗಳು ತಮ್ಮದೇ ಆದ ವಾಹನಗಳನ್ನು ಇಟ್ಟುಕೊಂಡಿರುತ್ತವೆ. ಮಕ್ಕಳನ್ನು ಶಾಲೆಗೆ ಕರೆತರುವುದು ಮತ್ತು ಶಾಲೆಯಿಂದ ಅವರ ಮನೆಗೆ ಬಿಡುವುದು ಶಾಲೆಯ ಜವಾಬ್ದಾರಿ. ತಿಂಗಳಿಗೆ ಕೆಲವು ನೂರು ಅಥವಾ ಕೆಲವು ಸಾವಿರ ರೂಪಾಯಿ ಶುಲ್ಕ ಭರಿಸಿದರೆ ಈ ಸೌಲಭ್ಯ ಸಿಗುತ್ತದೆ. ಸ್ವಂತ ವಾಹನ ಸೌಕರ್ಯವಿಲ್ಲದ ಶಾಲೆಗಳಿಗೆ ಮಕ್ಕಳನ್ನು ಸಾಗಿಸುವ ಉದ್ಯೋಗವನ್ನು ಖಾಸಗಿ ವ್ಯಾನು, ಕಾರು, ಆಟೋರಿಕ್ಷಗಳು ಮಾಡುತ್ತವೆ. ಇವ್ಯಾವೂ ಸೌಲಭ್ಯವಿಲ್ಲದ ಊರುಗಳಲ್ಲಿ ಮಕ್ಕಳು ಸ್ಥಳೀಯವಾಗಿರುವ ಸರಕಾರಿ ಅಥವಾ ಖಾಸಗಿ ಬಸ್ಸುಗಳ ಸೇವೆಗಳನ್ನು ನಂಬಿರುತ್ತಾರೆ.

ಇದೆಲ್ಲ ಬೆಂಗಳೂರು ಮತ್ತು ಕರ್ನಾಟಕದ ಊರು ಕೇರಿಗಳಲ್ಲಿರುವ ಶಾಲೆಗಳ ಸಮಾಚಾರ ದರ್ಶನವಾದರೆ ಭಾರತದ ರಾಜಧಾನಿ ನವದೆಹಲಿಯ ಪರಿಸ್ಥಿತಿ ಭಿನ್ನವಾಗಿದೆ. ಅತ್ಯಾಧುನಿಕ ಬಸ್ ಸೌಲಭ್ಯಗಳ ಜತೆಗೆ ಅಲ್ಲಿ ಮೊಘಲರ ಕಾಲದ ಪದ್ದತಿಗಳು ಶಿಷ್ಟವಾಗಿ ಇನ್ನೂ ಮುಂದುವರೆದಿದೆ. ರಿಕ್ಷಾಗಳಲ್ಲಿ ಕೋಳಿಯನ್ನು ಸಾಗಿಸುವಂತೆ ಮಕ್ಕಳನ್ನು ಶಾಲೆಗೆ ಕೊಂಡೊಯ್ಯುವ ದೆಹಲಿಯ ಒಂದು ಸೈಕಲ್ ರಿಕ್ಷಾ ದಟ್ಸ್ ಕನ್ನಡ ಓದುಗ, ಛಾಯಾಚಿತ್ರಕಾರ ರಾಜೇಶ್ ಪದ್ಮಾರ್ ಅವರ ಕಣ್ಣಿಗೆ ಬಿದ್ದಿದೆ. ಅದು ನಿಮ್ಮ ಕಣ್ಣಿಗೂ..

ದಟ್ಸ್ ಕನ್ನಡ ಹೂವಿನಂಗಡಿ 24/7

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+