ನಕ್ಸಲ್ ನಾಯಕಿ ಹೊಸಗದ್ದೆ ಪ್ರಭ ಮರಣ

ಆದರೆ, ಪ್ರಭಾ ಅಲಿಯಾಸ್ ಹೊಸಗದ್ದೆ ಪ್ರಭಾ ಅಲಿಯಾಸ್ ಸಂಧ್ಯಾಯ ಅಲಿಯಾಸ್ ವಿಂಧು ಅಲಿಯಾಸ್ ನೇತ್ರಾ ಅಲಿಯಾಸ್ ಮಧು ಸಾವಿನ ಸುದ್ದಿಯನ್ನು ನಕ್ಸಲ್ ನಿಗ್ರಹ ಪಡೆಯಾಗಲಿ, ರಾಜ್ಯ ಪೊಲೀಸ್ ಇಲಾಖೆಯಾಗಲಿ ಅಧಿಕೃತ ದೃಢಪಡಿಸಿಲ್ಲ.
ರಾಜ್ಯದಲ್ಲಿ ನಕ್ಸಲ್ ನಾಯಕತ್ವ ವಹಿಸಿಕೊಂಡಿದ್ದ ಸಾಕೇತ್ ರಾಜನ್ ಹತ್ಯೆಯ ನಂತರ ನಕ್ಸಲರ ನಾಯಕರಾಗಿ ಬಿ.ಜಿ. ಕೃಷ್ಣಮೂರ್ತಿ ಕಾಣಿಸಿಕೊಂಡಿದ್ದರು. ಬಿಜಿಕೆಗೆ ಆಸ್ತಮಾ, ಡಯಾಬಿಟಿಸ್ ಹಾಗೂ ತೀವ್ರ ಎದೆನೋವಿನಿಂದ ಬಳಲುತ್ತಿದ್ದಾನೆ ಎನ್ನಲಾಗಿದೆ. ಸದ್ಯಕ್ಕೆ ನಕ್ಸಲರನ್ನು ಮುನ್ನಡೆಸುವ ಹೊಣೆಯನ್ನು ಒಂಟಿಕೊಪ್ಪ ರಮೇಶ್ ವಹಿಸಿದ್ದಾನೆ ಎನ್ನಲಾಗಿದೆ.
ಪ್ರಭಾ ಶವಸಂಸ್ಕಾರವನ್ನು ಪಶ್ಚಿಮ ಘಟ್ಟದಲ್ಲಿ ಗುಟ್ಟಾಗಿ ನಡೆಸಿರುವ ಸಾಧ್ಯತೆಯಿದೆ. ಇತ್ತೀಚೆಗೆ ಮಾವೋವಾದಕ್ಕೆ ಮರುಳಾಗುತ್ತಿರುವ ಮಲೆನಾಡಿನ ವಿದ್ಯಾವಂತ ಯುವಕರು ನಕ್ಸಲ್ ಆಗಿ ರೂಪುಕೊಳ್ಳಲು ಬಿಜಿಕೆ ಸಾಕಷ್ಟು ಶ್ರಮ ವಹಿಸಿದ್ದರು. ಈಗ ತನ್ನ ನಂತರ ನಕ್ಸಲ್ ವಟುವಟಿಕೆ ಕ್ಷೀಣಿಸಬಾರದು ಎಂಬ ಉದ್ದೇಶದಿಂದ ಒಂಟಿಕೊಪ್ಪರಮೇಶ್ ಗೆ ನಾಯಕತ್ವವನ್ನು ವಹಿಸಿರುವ ಸಾಧ್ಯತೆಯಿದೆ.












Click it and Unblock the Notifications